ܩܧܘ ಚಂದ್ರಶೇಖರ. ರನ್ನು ಸಮರ ಕ್ಷೇತ್ರದಿಂದ ದೂರವಾಗಿ ಕರೆದುಕೊಂಡು ಹೋದನು. ಹೋಗುವಾಗ ದರಬಾರಿನಲ್ಲಿ ನಡೆದುದನೆಲ್ಲಾ ಚಂದ ಶೇಖರನಿಂದ ಕೇಳಿ ತಿಳಿದನು. ಚಂದ ಶೇಖರನು, ಪ್ರತಾಪ ! ನೀನು ಧನ್ಯನು, ನಿನಗೆ ಗೊತ್ತಾಗಿರುವುದನ್ನು ನಾನುಬಲ್ಲೆ ಎಂದನು. ಪ್ರತಾಪನು ವಿಸ್ಮಿತನಾಗಿ ಚಂದ್ರಶೇಖರನನ್ನು ನೋಡುತಲಿದ್ದನು. ಚಂದ್ರಶೇಖರನು ಬಾಪ್ಪಗೆದ್ದದ ಕಂಠದಿಂದ, ಈಗ ಇವಳ ನಿಪ್ಪಾಪಳೆಂದು ಗೊತ್ತಾಯಿತು. ಲೋಕರಂಜನಾರ್ಥವಾಗಿ ಮಾಡಬೇಕಾದ ಪ್ರಾಯಶ್ಚಿತ್ರವಾದಮೇಲೆ ಇವಳನ್ನು ಗ್ರಹಣಮಾಡಿ ಮನೆಗೆ ಕರೆದುಕೊಂಡುಹೋಗುವೆನು, ಆದರೆ ಇನ್ನು ನನ್ನ ಹಣೆಯಲ್ಲಿ ಸುಖವು ಬರೆದಿಲ್ಲವೆಂದನು. ಪ್ರತಾಪ-ವಿತಕ್ಕೆ ? ಸ್ವಾಮಿಯ ಔಷಧದಿಂದ ಏನೂ ಗುಣವಿಲ್ಲವೆ ? ಚಂದಶೇಖರ... ಇದುವರೆಗೂ ಇಲ್ಲ. ಪ್ರತಾಪನು ವ್ಯಾಕುಲನಾದನು, ಅವನ ಕಣ್ಣುಗಳಿಂದ ನೀರು ಬಂದಿತು-ಶೈವಲಿ ನಿಯು ತನ್ನ ಮುಖಪರದೆಯಿಂದ ಅದನ್ನು ನೋಡಿದಳು. ಕೈವಲಿನಿದು ಸ್ವಲ್ಪ ಸರಿದು ಹೋಗಿ ಹಸ್ಸಂಗಿತದಿಂದ ಪ್ರತಾಪನನ್ನು ಕರೆದಳು. ಪ್ರತಾಪನು ಕುದುರೆಯಿಂದಿಳಿದು ಅವಳ ಹತ್ತಿರ ಹೋದನು, ಶೈವಲಿನಿಯು ಇತರರಿಗೆ ಕೇಳಿಸದ ಹಾಗೆ, ನನ್ನ ಮಾತು ಒಂದನ್ನು ಏಕಾಂತವಾಗಿ ಕೇಳಬೇಕು. ನಾನು ಕೆಟ್ಟ ಮಾತನ್ನು ಹೇಳುವುದಿಲ್ಲವೆಂದಳು. ಪ್ರತಾಪನು ಆಶ್ಚಗೃಪಟ್ಟ,ನಿನ್ನ ಹುಚ್ಚು ಕೃತಿಮವಾದುದೆ ? ಎಂದನು. ಶೈವಲಿನೀ-ಈಗ ಹೌದು, ಇಂದು ಹಾಸಿಗೆಯಿಂದ ಎದ್ದ ಮೊದಲು ಎಲ್ಲಾ ಗೊತ್ತಾ ಗುತ್ತದೆ. ನಾನು ನಿಜವಾಗಿಯೂ ಹುಚ್ಚಿಯಾಗಿದ್ದೆನೆ ? ಪ್ರತಾಪನ ಮುಖವು ಸ ಫುಲ್ಲವಾಯಿತು. ಕೈವಲಿನಿಯು ಅವನ ಮನೋಭಾವ ವನ್ನು ಅರಿತು ವೃಂಗ ಭಾವದಿಂದ, ಸುಮ್ಮನಿರು, ಈಗ ಏನೂ ಹೇಳಬೇಡ. ನಾನೇ ಎಲ್ಲಾ ಹೇಳುತ್ತೇನೆ-ಆದರೆ ನೀನು ಅನುಮತಿಯನ್ನು ಕೊಟ್ಟರೆ ಹೇಳುತ್ತೇನೆ, ಎಂದಳು ? ಪ್ರತಾಪ ನನ್ನ ಅನುಮತಿ ಏತಕ್ಕೆ ? ಶೈವಲಿನೀ – ನನ್ನ ಸ್ವಾಮಿಯು ಪುನಃ ನನ್ನನ್ನು ಗ್ರಹಮಾಡಿದರೆ ಮನಸ್ಸಿನ ಪಾಪವನ್ನು ಮುಚ್ಚಿಟ್ಟುಕೊಂಡು ಅವನ ಪ್ರಣಯ ಭಾಗಿನಿಯಾಗುವುದು ಉಚಿತವೆ ? ಪ್ರತಾಪ - ಏನು ಮಾಡಬೇಕೆಂದು ಇದೀಯ ? ಶೈವಲಿನೀ-ಮೊದಲಿನ ವೃತ್ತಾಂತವನ್ನೆಲ್ಲಾ ಅವನಿಗೆ ಹೇಳಿ ಕಮಾ ಪ್ರಾರ್ಥನೆ ದುನ್ನು ಬೇಡುವೆನು. ಪ್ರತಾಪನು ಯೋಚಿಸಿ, ಹೇಳು ! ನೀನು ಇನ್ನು ಮೇಲೆ ಸುಖಿಯಾಗಿರೆಂದು ಆಶೀ ರ್ವಾದವನ್ನು ಮಾಡುತ್ತೇನೆ ಎಂದು ಹೇಳಿ, ಪ್ರತಾಪನು ನೀರವವಾಗಿ ಅಶು ವರ್ಷಣ ಮಾಡಲಾರಂಭಿಸಿದನು. ಕೈವಲಿನೀ-ನಾನು ಸುಖಿಯಾಗಲಾರೆನು. ನೀನು ಇದ್ದರೆ ನನಗೆ ಸುಖವು ಇಲ್ಲಪ್ರತಾಪ – ಅದೇನು, ಶೈವಲಿನಿ ?
ಪುಟ:ಚಂದ್ರಶೇಖರ.djvu/೧೭೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.