ಆರನೆಯ ಭಾಗ. ೧೬೫ - ಸ್ವಾಮಿ-ನಾನು ಹಾಗೆಯೇ ಆಶೀರ್ವಾದ ಮಾಡುತ್ತೇನೆ. ಆರೋಗ್ಯಲಾಭವನ್ನು ಹೊಂದು. ಪ ತಾಪ-(ಕಸ್ಮದಿಂದ) ಆರೋಗ್ಯವೆ ? ಆರೋಗ್ಯಕ್ಕೆ ಇನ್ನು ಸಾವಕಾಶವಿಲ್ಲ. ತಮ್ಮ ಪಾದ ರೇಣುಗಳನ್ನು ನನ್ನ ಶಿರಸ್ಸಿನಲ್ಲಿಡಬೇಕು. ಸ್ವಾಮಿ-ನಾವು ಆಗಲೇ ಈ ದುರ್ಜರಕ್ಕೆ ಹೋಗಬೇಡವೆಂದು ನಿಷೇಧ ಮಾಡಿ ದೈವು, ಕೈವಲಿನಿಯು ಮಾತಿನಮೇಲೆ ಹೀಗೆ ಮಾಡಿದೆಯೋ ? ಪ್ರತಾಪ- ತಾವು ಹೀಗೆ ಏತಕ್ಕೆ ಹೇಳುವಿರಿ ? ಸ್ವಾಮಿ--ನೀನು ಶೈವಲಿನಿಯ ಸಂಗಡ ಮಾತನಾಡುತ್ತಿದ್ದಾಗ, ಅವಳ ಆಕಾರೇಂಗಿ ತೆಗಳನ್ನು ನೋಡಿ, ಅವಳು ಉನ್ಮಾದಗ್ರಸ್ತೆಯಾಗಿರಲಿಲ್ಲವೆಂದೂ ನಿನ್ನನ್ನು ಶುದ್ಧವಾಗಿ ಮರೆತಿರಲಿಲ್ಲವೆಂದೂ ಬೋಧೆಯಾಯಿತು. ಪ್ರತಾಪ-ಶೈವಲಿನಿಯು ಪುನಃ ನಾನವಳನ್ನು ಇನ್ನು ಭೂಮಿಯಮೇಲೆ ನೋಡ ಕೂಡದೆಂದು ಹೇಳಿದಳು, ಅದರಿಂದ, ನಾನು ಬದುಕಿದ್ದರೆ ಶೈವಲಿನಿ ಅಥವಾ ಚಂದ) ಶೇಖರನಿಗೆ ಸುಖವಿರಲಾರದೆಂದು ತಿಳಿದೆನು. ಯಾರು ನನಗೆ ಪರಮ ಪ್ರೀತಿಪಾತ ರಾಗಿ ದ್ದಾರೋ, ಯಾರು ನನಗೆ ಪರಮೋಪಕಾರಿಗಳೊ ಅಂತಹವರ ಸುಖಕ್ಕೆ ಕಂಟಕ ಸ್ವರೂಪವಾಗಿ ಈ ಜೀವವನ್ನು ಇಟ್ಟುಕೊಂಡಿರುವುದು ಅಕರ್ತವ್ಯವೆಂದು ತಿಳಿದೆನು. ಅದು ಕಾರಣ ತಾವುಗಳು ನಿಷೇಧ ಮಾಡಿದರೂ ಈ ಸಮರ ಕ್ಷೇತ್ರದಲ್ಲಿ ಪ್ರಾಣತ್ಯಾಗ ವನ್ನು ಮಾಡಬೇಕೆಂದು ಬಂದೆನು, ನಾನು ಇದರೆ ಶೈವಲಿನಿಯ ಚಿತ್ರವು ಬಂದುವೇಳೆ ಇಲ್ಲದಿದ್ದರೆ ಮತ್ತೊಂದು ವೇಳೆ, ವಿಚಲಿತವಾಗುವ ಸಂಭವ, ಆದುದರಿಂದ ನಾನು ಹೋಗುವೆನು. ರಮಾನಂದ ಸ್ವಾಮಿಯ ಕಣ್ಣುಗಳಲ್ಲಿ ನೀರು ತುಂಬಿತು. ಅವನ ಕಣ್ಣುಗಳಲ್ಲಿ ನೀರು ತುಂಬಿದುದು ಯಾರೂ ಮತ್ತಾವಾಗಲೂ ನೋಡಿರಲಿಲ್ಲ. ಅವನು, ಈ ಪ್ರಪಂಚ ದಲ್ಲಿ ನೀನೇ ಯಥಾರ್ಥವಾದ ಪರಹಿತವ ತಧಾರಿ, ನಾವೆಲ್ಲಾ ಭಂಡವೇಷಧಾರಿಗಳು. ನೀನು ಸ್ವರ್ಗಲೋಕದಲ್ಲಿ ಅನಂತವಾದ ಅಕ್ಷಯವಾದ ಸ್ವರ್ಗಭೋಗವನ್ನು ಮಾಡುವುದ ರಲ್ಲಿ ಏನೇನೂ ಸಂದೇಹವಿಲ್ಲವೆಂದನು. - ರಮಾನಂದಸ್ವಾಮಿಯು ಸ್ವಲ್ಪಹೊತ್ತು ಮಾನವಾಗಿದ್ದು, ಪುನಃ, ಕೇಳು, ವತ್ನ ! ನಾನು ನಿನ್ನ ಅಂತಃಕರಣವನ್ನು ತಿಳಿದುಕೊಂಡೆನು, ಬಹ್ಮಾಂಡಜಯವೂ ನಿನ್ನ ಈ ಇಂದ್ರಿಯ ಜಯಕ್ಕೆ ಸಮಾನವಾಗದು. ನೀನು ಶೈವಲಿನಿಯನ್ನು ಪ್ರೀತಿಸುವಿಯಾ ? ಎಂದನು. ಸುಪ್ತವಾಗಿದ್ದ ನಿಂಹವು ಎಚ್ಚತ್ತು ಎದ್ದಿತು. ಆ ಶವಾಕಾರವಾಗಿದ್ದ ಪ್ರತಾಪನು, ಎಲಿಸನಾದ ಚಂಚಲನಾದ ಉನ್ಮತ್ತನಹಾಗೆ ಹುಂಕಾರ ಮಾಡುತ್ತ ಎದ್ದು, ಏನೆಂದು ತಿಳಿ ದಿರಿ, ನೀವು ಸನ್ಯಾಸಿ ! ನಾನು ಈ ಹದಿನಾರು ವರುಷದಿಂದ ಶೈವಲಿನಿಯನ್ನು ಪ್ರೀತಿಸು
ಪುಟ:ಚಂದ್ರಶೇಖರ.djvu/೧೭೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.