ಚಂದ್ರಶೇಖರ. ದಲ್ಲಿ ನಾನು ನಿಶ್ಚಿತವಾಗಿಯೂ ರಾಜ್ಯಭಷ್ಯನಾಗಿ ಹೋಗುವೆನು, ಬಂದುವೇಳೆ ಸಾyಣ ನಷ್ಮವಾದರೂ ಆಗಬಹುದು, ಹಾಗಿದ್ದರೆ ಯುದ್ಧ ಮಾಡಲು ಏತಕ್ಕೆ ಇಪ್ಪವುಳ್ಳವನಾ ಗಿರಬೇಕೆಂದು ಕೇಳುವೆ. ಇಂಗ್ಲೀಷರು ಈಗ ಆಚರಿಸುವ ಆಚರಣೆಯಿಂದ ಅವರೇ ರಾಜರಾಗಿದ್ದಾರೆ, ನಾನು ರಾಜನಲ್ಲ. ರಾಜ್ಯದಲ್ಲಿ ರಾಜನಲ್ಲದಿದ್ದರೆ ನನ್ನಿಂದ ಪ್ರಯೋಜನ ವೇನು ? ಅಷ್ಟೇಅಲ್ಲ, ಅವರು ಹೇಳುವುದರಲ್ಲಿ, ನಾವು ರಾಜರು, ಪ್ರಜೆಗಳಿಗೆ ತೊಂದರೆ ಕೊಡುವುದಕ್ಕೆ ನೀನು, ನೀನು ನಮ್ಮವನಾಗಿದ್ದು ಪ್ರಜಾ ಪೀಡನೆ ಮಾಡೆನ್ನು ವರು. ನಾನೇತಕ್ಕೆ ಹಾಗೆ ಮಾಡಲಿ ? ಪ್ರಜೆಗಳ ಹಿತಕ್ಕೋಸ್ಕರ ನಾನು ರಾಜ್ಯವನ್ನಾಳಲಸವ ರ್ಥನಾದರೆ, ಆ ರಾಜ್ಯವನ್ನು ಬಿಟ್ಟು ಹೊರಟುಹೋಗುವೆನು, ವೃಥಾ ಪಾಪಕ್ಕೂ ಕಳಂಕಕೂ ಏತಕ್ಕೆ ಭಾಗಿಯಾಗಲಿ ? ನಾನು ಸಿರಾಜಉದೌಲಾ ಅಲ್ಲ, ಮಾರಜಾಫೀ ರನೂ ಅಲ್ಲ, ಎಂದು ಹೇಳಿದನು. ದಲನಿಯು ಬಂಗಾಳಾಧೀಶ್ವರನನ್ನು ಮನಸ್ಸಿನಲ್ಲಿ ಬಹುವಿಧವಾಗಿ ಪ್ರಶಂಸ ಮಾಡಿ, ಪ್ರಾಣೇಶ್ವರ ! ತಾವು ಹೇಳಿದುದಕ್ಕೆ ನಾನೇನು ಹೇಳಲಿ ? ಆದರೆ ನನ್ನ ದೊಂದು ಭಿಕ್ಷೆ ಯುಂಟು, ಏನೆಂದರೆ, ತಾವು ಸ್ವಂತವಾಗಿ ಯುದ್ಧಕ್ಕೆ ಹೋಗಕೂಡದು, ಇದೇ ನನ್ನ ಪಾರ್ಥನೆಯೆಂದಳು. ಮಾರಕಾಸಿಂ-ಇಂತಹ ವಿಷಯದಲ್ಲಿ ಬಂಗಾಳಾ ನವಾಬನ ಕರ್ತವ್ಯವನ್ನು ಕುರಿ ತು, ಆತನು ಹೆಂಗಸಿನ ಪರಾಮರ್ಶದುನ್ನು ಕೇಳುವನೆ ? ಅಥವಾ ಬಾಲೆಯು ಇಂತಹ ವಿಷಯದಲ್ಲಿ ಪರಾಮರ್ಶೆಯನ್ನು ಕೊಡುವುದು ಅವಳಿಗೆ ಕರ್ತವ್ಯವೊ ? ದಲನಿಯ ಅಪ್ರತಿಭೆಯಿಂದ, ಕಣ್ಣೆಯಾಗಿ, ನನಗೆ ತಿ 'ಯದೆ ಹೇಳಿದೆ, ನನ್ನ ಅಪರಾಧವನ್ನು ಕ್ಷಮಿಸಬೇಕು, ಹೆಂಗಸರಿಗೆ ಇಂತಹ ಸಂಗತಿಗಳು ಗೊತ್ತಾಗದಿರುವುದ ರಿಂದಲೆ ಈ ಪ್ರಕಾರವಾಗಿ ಹೇನಿದೆನು. ಆದರೆ, ನನ್ನ ದು ಮತ್ತೊಂದು ಸಾರ್ಥನೆ ಯುಂಟು ಎಂದಳು. (• ಏನು ??? ( ತಾವು ಯುದ್ಧಕ್ಕೆ ಹೋಗುವಾಗ ನನ್ನನ್ನು ಸಂಗಡ ಕರೆದುಕೊಂಡು ಹೋಗ ಲಾದೀತೆ ? 17 « ಏತಕ್ಕೆ, ಯುದ್ಧ ಮಾಡುವಿಯೋ? ಗರಗವಾನನನ್ನು ಕೆಲಸದಿಂದ ತೆಗೆದುಹಾಕಿ ನಿನ್ನನ್ನು ಅವನ ಕೆಲಸಕ್ಕೆ ನಿಯಮಿಸಲೆ ! 1) ದಲನಿಯು ಪುನಃ ಪ ತಿಭೆಹೋದವಳಂತಾಗಿ ಮಾತನಾಡಲಾರದೆಹೋದಳು. ಮಾರಕಾಸಿಮನು ಸ್ನೇಹಭಾವದಿಂದ, ಏತಕ್ಕೆ ಹೋಗುವುದಕ್ಕೆ ಇತ್ರ್ಯವುಳ್ಳವಳಾಗಿರುವೆ? ಎಂದು ಕೇಳಿದನು. ದಲನೀ-ತಮ್ಮ ಸಂಗಡ ಇರಬೇಕೆಂದು. ವಿಾರಕಾಸಿಮನು ಒಪ್ಪಲಿಲ್ಲ. ಸ್ವಲ್ಪವೂ ಸಮ್ಮತಿಸಲಿಲ್ಲ.
ಪುಟ:ಚಂದ್ರಶೇಖರ.djvu/೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.