೧೩೬ ಚಂದ್ರಶೇಖರ. ತೇನೆ. ಅದನ್ನು ಯಾರು ಬಲ್ಲರು ? ಆದರೆ ಪಾಪಚಿತ್ರದಿಂದ ಅದಳಲ್ಲಿ ಅನುರಕ್ತನಲ್ಲ ನಾನು ಪ್ರೀತಿಸುವುದೆಂದರೆ, ಜೀವನವನ್ನು ವಿಸರ್ಜನೆ ಮಾಡುವುದೆಂದು ಅರ್ಥ, ಅನುರಾಗವು ನನ್ನ ನರನರಗಳಲ್ಲಿಯ ರಕ್ರಕ್ಕದಲ್ಲಿಯ ಮಳವಳಿಯಲ್ಲಿಯ ಅಹೋರಾತ್ರಿ ವಿಚಲಿಸುತಲಿದೆ. ಇದು ಯಾರಿಗೂ ಗೊತ್ತಾಗದು. ಈ ಮೃತ್ಯುಕಾ ದಲ್ಲಿ ತಾವು ಈ ಮಾತನ್ನು ಎತ್ತಿದಿರಿ, ಏತಕ್ಕೆ? ಈ ಜನ್ಮದಲ್ಲಿ ಅನುರಾಗದಲ್ಲಿ ಮಂಗ ವಿಲ್ಲವೆಂದು ಈ ದೇಹವನ್ನು ಬಿಟ್ಟೆನು, ನನ್ನ ಮನಸ್ಸು ಕಲುಪಿತವಾಗಿದೆ, ಇನ್ನು ಶೈವಲಿನಿಯು ಹೃದಯವು ಹೇಗಾಗುವುದೋ ಅದನ್ನು ಹೇಳುವುದು ಹೇಗೆ ? ನನ್ನ ಮರಃ ಹೊರತು ಇದಕ್ಕೆ ಬೇರೆ ಉಪಾಯವಿಲ್ಲ. ಅದು ಕಾರಣ ಸತ್ತೆನು. ತಾವು ಈ ಏಕಾಂ ಪನ್ನು ಕೇಳಿದಿರಿ, ತಾವು ಜ್ಞಾನಿಗಳು, ಶಾಸ್ತ್ರ ದರ್ಶಿಗಳು ತಾವು ಹೇಳಬೇಕು ನನ್ನ ಪಾಪಕ್ಕೆ ಪ್ರಾಯಶ್ಚಿತ್ತವು ಮತ್ತಾವುದು ಇದ್ದೀತು ? ನಾನೇನು ಜಗದೀಶ್ವರನ ದೋಷಿಯೇ ? ದೋಷಿಯಾಗಿದ್ದರೆ ಈ ಪ್ರಾಯಶ್ಚಿತ್ತದಿಂದ ಅದು ಮೊಚನವಾಗಲಾರದೆ' ಎಂದನು. ರಮಾನಂದಸ್ವಾಮಿ-ಅದನ್ನ ನಾನು ಅರಿಯೆನು. ಇಲ್ಲಿ ಮಾನುಷಜ್ಞಾನವು ಅi ವರ್ಥವಾದುದು, ಶಾಸ್ತ್ರ ವು ಇಲ್ಲಿ ಮೂಗಾಗಿದೆ. ನೀನು ಯಾವ ಲೋಕಕ್ಕೆ ಹೊ ಗುವಿಯೋ ಆ ಲೋಕೇಶ್ವರನು ಹೊರತು, ಇದಕ್ಕೆ ಯಾರೂ ಪ ತ್ಯುತ್ತರವನ್ನು ಹೇ। ಲಾರರು, ಇಷ್ಟು ಹೇಳಬಲ್ಲೆ ; ಏನೆಂದರೆ :- ಇಂದಿ)ಯಜಯದಲ್ಲಿ ಪುಣ್ಯವಿದ್ದರೆ ಅನಂತವಾದ ಸ್ವರ್ಗವು ನಿನ್ನದಾಗಿರುವುದು, ಚಿತ್ರಸಂಯಮದಲ್ಲಿ ಪುಣ್ಯವಿದ್ದರೆ ದೇವ ಗಳು ಕೂಡ ನಿನ್ನ ಹಾಗೆ ಪುಣ್ಯವಂತರಲ್ಲ, ಪರಲೋಕದಲ್ಲಿ ಸ್ವರ್ಗವಿದ್ದರೆ ನೀನು ದಧಿ ಚಿಗಿಂತಲೂ ಅದಕ್ಕೆ ಹೆಚ್ಚು ಅಧಿಕಾರಿ, ನಾನು ನಿನ್ನ ಹಾಗೆ ಜನ್ಮಜನ್ಮಾಂತರಕ್ಕೂ ಇಂದಿ ಯಜಯಿಯಾಗಬೇಕೆಂದು ಪ್ರಾರ್ಥಿಸುತ್ತೇನೆ. ರಮಾನಂದಸ್ವಾಮಿಯು ಸುಮ್ಮನಾದನು. ಮೆಲ್ಲಮೆಲ್ಲಗೆ ಪ್ರತಾಪನ ಪ್ರಾಣ ವಿಯುಕ್ತವಾಯಿತು. ತೃಣಶಯ್ಕೆಯಲ್ಲಿ ಅನಿಂದ್ಯವಾದ ಜ್ಯೋತಿಯುಳ್ಳ ಸ್ಟರ್ಣತರುವ ಬಿದ್ದಿತು. - ಹೋಗು, ಪತಾದ ! ಅನಂತಧಾಮಕ್ಕೆ ಹೋಗು ! ಎಲ್ಲಿ ಇಂದಿಜಯ? ಕಮ್ಮವಿಲ್ಲವೋ, ರೂಪದಲ್ಲಿ ಮೋಹವಿಲ್ಲವೋ, ಪ ಣಯದಲ್ಲಿ ಪಾದವಿಲ್ಲವೋ, ಅಲ್ಲಿ! ಹೋಗು ! ಎಲ್ಲಿ ರೂಪವು ಅನಂತವೋ ಪ್ರಣಯವು ಅನಂತವೋ, ಸುಖವು ಅನಂತ ವೋ, ಸುಖದಲ್ಲಿ ಅನಂತವಾದ ಪುಣ್ಯವೋ, ಅಲ್ಲಿಗೆ ಹೋಗು ! ಎಲ್ಲಿ ಪರರ ದುಃಖವನ್ನು ಪರರು ತಿಳಿಯುವರೋ, ಪರರ ಧರ್ಮವನು ಪರರು ರಕ್ಷಿಸುವರೋ, ಪರಶ ಜಯ ವನ್ನು ಪರರು ಕೀರ್ತನೆಮಾಡುವರೋ, ಪರರಿಗೋಸ್ಕರ ಸರರು ಸಾಯಬೇಕಾದುದಿಲ್ಲವೊ ಆ ಮುಹವೈಶ್ವರ್ಯಳುದುಪಾದ ಲೋಕಕ್ಕೆ ಹೋಗು ! ಲಕ್ಷ ಶೈವಲಿನಿಗಳು ಪದವಿಗೆ ದಲ್ಲಿ ಬಿದ್ದಿದ್ದರೂ ಪ್ರೀತಿಸಲಪೇಕ್ಷೆಯಿರದು.
ಪುಟ:ಚಂದ್ರಶೇಖರ.djvu/೧೮೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.