ಮೊದಲನೆಯ ಭಾಗ. ೧೧• ದಲನಿಯು ಸ್ವಲ್ಪ ನಕ್ಕು, ಜಹಾಪನಾ ! ತಮಗೆ ಜ್ಯೋತಿಪ್ಪವು ಗೊತ್ತಿದೆ. ಗುಣಿಸಿ ಯುದ್ದ ಕಾಲದಲ್ಲಿ ನಾನೆಲ್ಲಿರುವೆನೊ ಹೇಳಿದರೆ ನೋಡುವೆನೆಂದಳು. ಮಾರಕಾನಿವನು ನಕ್ಕು, ಹಾಗಾದರೆ, ಕಲಮದಾನು ತೆಗೆದುಕೊಂಡು ಬಾ ಎಂದನು. ದಲನಿಯು ಅಪ್ಪಣೆಯ ಪ್ರಕಾರ ಪರಿಚಾರಕೆಯೊಬ್ಬಳು ಸುವರ್ಣನಿರ್ಮಿತವಾದ ಕಲಮದಾನನ್ನು ತಂದಿಟ್ಟಳು. ಮಾರಕಾಸಿನನು ಹಿಂದೂ ಜೋಯಿಸನಲ್ಲಿ ಜ್ಯೋತಿಷ್ಯವನ್ನು ಕಲಿತಿದ್ದನು. ಅದರ ಪ್ರಕಾರ ಲೆಕ್ಕವನ್ನು ಹಾಕಿ ಗುಣಿಸಿನೋಡಿ, ಸ್ವಲ್ಪ ಹೊತ್ತಿನಮೇಲೆ, ಕಾಗದವನ್ನು ದೂರದಲ್ಲಿಟ್ಟು ವ್ಯಸನಾಕ್ರಾಂತನಾಗಿ ಕುಳಿತುಕೊಂಡನು. ದನಿಯು, ಏನು ಗೊತ್ತಾ ಯಿತೆಂದು ಕೇಳಿದಳು. ಮಾರಕಾಸಿವನು, ಗುಣಿಸುವುದರಲ್ಲಿ ಕಂಡುಬಂದುದು, ಬಹಳ ಆಶ್ಚರ್ಯಕರವಾ ಗಿದೆ; ನೀನು ಕೇಳತಕ್ಕದ್ದಲ್ಲವೆಂದನು. ನಬಾಬನು ಕೂಡಲೆ ಹೊರಗೆ ಬಂದು ವಿಾರಮುನವಿಯನ್ನು ಕರೆಯಿಸಿ, ಮುರಸಿ ದಾಬಾದಿಗೆ ಸವಿಾಪವಿರುವ ವೇದಗಾಮವೆಂಬ ಸ್ಥಳದಲ್ಲಿ ಚಂದ ಶೇಖರನೆಂಬೊಬ್ಬ ಬ್ರಾಹ್ಮಣ ವಿದ್ವಾಂಸನು ಇರುವನು. ಅವನು ನನಗೆ ಜ್ಯೋತಿಷ್ಯವನ್ನು ಕಲಿಸಿದವನು. ಇಂಗ್ಲೀಷರ ಸಂಗಡ ಯುದ್ದವಾಗುವ ಸಮಯದಲ್ಲಿ ದಲಿನೀಬೇಗಂ ಎಲ್ಲಿರುವಳೆಂಬುದನ್ನು ಗುಣಿಸಿ ತಿಳಿಯಬೇಕಾಗಿರುವುದರಿಂದ ಅವನನ್ನು ಕಳುಹಿಸುವಹಾಗೆ ಮುರಸಿದಾಬಾದಿನಲ್ಲಿ ನಮ್ಮ ನೌಕರನಿಗೆ ಪರವಾನೆಯನ್ನು ಬರೆಯಬೇಕೆಂದು ಅಪ್ಪಣೆ ಮಾಡಿದನು. ವಿರಮುನಪ್ಪಿದು ಚಂದ್ರಶೇಖರನನ್ನು ಮುರಪಿದಾಬಾದಿಗೆ ಕರೆಯಿಸಲು ಪರವಾನೆ ಮುನ್ನು ಬರೆದು ಕಳುಹಿಸಿದನು. ಇಣೆ (OSSW
ಪುಟ:ಚಂದ್ರಶೇಖರ.djvu/೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.