ಎರಡನೆಯ ಪರಿಚ್ಛೇದ. ಬೀಮಾ ಎಂಬ ಒಂದು ದೊಡ್ಡದಾದ ಪುಷ್ಕರಿಣಿ, ಅದರ ನಾಲ್ಕು ಕಡೆಗಳ ಲ್ಲಿ ದಟ್ಟವಾಗಿ ಬೆಳೆದ ತಾಳೆಮರಗಳ ತೋಪು, ಅಸ್ತಂಗತ ನಾಗುತಲಿದ್ದ ಸೂರ್ಯನ ಸುವರ್ಣ ವರ್ಣವುಳ ಕಾಂತಿಯು ಪುಷ್ಕರಿಣಿದು ಕಪ್ಪಾದ ಜಲದಲ್ಲಿ ಬಿದ್ದಿತ್ತು, ಕಪ್ಪಾದ ನೀರಿನಲ್ಲಿ ಆ ಬಿಸಿಲಿನೊಂದಿಗೆ ತಾಳೆಮರಗಳ ಕಾದ ನೆರಳು ಅಂಕಿತವಾ ಗಿತ್ತು. ಸೋಪಾನದ ಒಂದು ಕಡೆಯಲ್ಲಿ ಲತಾಮಂಡಿತವಾದ ಕೆಲವು ಚಿಕ್ಕ ಚಿಕ್ಕ ವೃಕ್ಷಗಳು, ಅವುಗಳ ಮೇಲೆ ಹಬ್ಬಿದ ತೆಗಳು ಒಂದಕ್ಕೊಂದು ಹೆಣೆದುಕೊಂಡು, ಆ ಮರಗಳ ಕೊಂಬಗಳ , ಪುಪ _ರಿಣಿಯ ನೀರಿನವರೆಗೂ ವ್ಯಾಪಿಸಿ, ಜಲವಿಹಾರಿಣಿಗಳಾದ ಕುಲಕಾಮಿನಿಯರನ್ನು ಮರೆ ಮಾಡಿಕೊಂಡಿದ್ದುವು. ಆ ಮರಗಳ ಮರೆಯಿಂದುಂಟಾದ ಅಲ್ಫಾಂಧಕಾರದಲ್ಲಿ ಕೈವಲಿನಿಯ ಸುಂದರಿಯೆಂಬ ಮತ್ತೊಬ್ಬ ರವಣಿಯ ಕೊಡಗಳನ್ನು ಹಿಡಿದುಕೊಂಡು ನೀರಿನಸಂಗಡ ಕಿಡಿಸುತಲಿದ್ದರು. ದುವತಿಯರೊಂದಿಗೆ ನೀರಿನ ಕ್ರೀಡೆಯೆಂದರೇನು ? ಹಾಗೆಂದರೇನೊ ಅದು ನಮಗೆ ಗೊತ್ತಿಲ್ಲ. ನಾವು ನೀರಲ್ಲ. ಯಾರು ರೂಪವನ್ನು ನೋಡಿ ಕರಗಿ ನೀರಾಗಿ ಹೋಗಿದ್ದಾರೋ ಅವರೇ ಎಲ್ಲರು, ಅವರೇ ಕೊಡದ' ತಾಡನದಿಂದ ಜಲವು ಯಾವ ಪ್ರಕಾ ರವಾಗಿ ತರಂಗತರಂಗವಾಗಿ ಎದ್ದು ಬಾಹುಗಳ ಪ್ರಸಾರದಿಂದುಂಟಾಗುವ ಹಸ್ತಾಭರಣಗಳ ತಂಜೆತಧ್ವನಿಯ ತಾಳಕ್ಕೆ ಸರಿಯಾಗಿ ಹೇಗೆ ಕುಣಿಯುವುದೋ ಅದನ್ನು ಹೇಳಬಲ್ಲರು. ಹೃದಯದಮೇಲೆ ಗಧಿತವಾಗಿರುವ ಜಲಜಪುಪ್ಪಮಾಲೆಗಳನ್ನು ತೂಗಲಾಡಿಸು, ಆ ತಾಳಕ್ಕೆ ಸರಿಯಾಗಿ ಹೇಗೆ ಕುಣಿದಾಡುವುದೊ, ಯುವತಿಯನ್ನು ಸುತ್ತು ಹಾಕಿಕೊಂಡು, ಅವಳ ಬಾಹುಗಳನ್ನೂ ಕಂರವನ್ನೂ ಸ್ವಂಧವನ್ನೂ ಹೃದಯವನ್ನೂ ಇಣಿಕಿಣಿಕಿ ನೋಡುತ್ತಾ ಜಲವು ತರಂಗವಾಗಿ ಎದ್ದು ತಾಳಕ್ಕೆ ಸರಿಯಾಗಿ ಹೇಗೆ ಕುಣಿದಾಡುವುದೊ, ಅವುಗಳನ್ನೆಲ್ಲಾ ಅವರೇ ಹೇಳ ಬಲ್ಲರು, ಮತ್ತು ಯುವತಿಯು ಯಾವ ಪ್ರಕಾರವಾಗಿ ಕೊಡವನ್ನು ತೇಲಿಬಿಟ್ಟು, ಮಂದಮಾರುತನ ವಶಕ್ಕೆ ಅದನ್ನು ಒಪ್ಪಿಸಿ ಚುಟುಕ ಪರಂ ತವೂ ನೀರಿನಲ್ಲಿ ಮುಣುಗಿ, ಬಿಂಬಾಧರವನ್ನು ನೀರಿನಮೇಲೆ ಇಟ್ಟು ಬಾಯಿಯೊಳಕ್ಕೆ ನೀರನ್ನು ಹೇಗೆ ತೆಗೆದುಕೊಳ್ಳುವ, ಆ ನೀರನ್ನು ಸೂರ್ಯಾಭಿಮುಖವಾಗಿ ಹೇಗೆ ಉಮ್ಮಳಿಸುವಳೋ, ಜಲವು ಬೀಳುವಾಗ ಬಿಂಬಬಿಂಬವಾಗಿ ಸಾವಿರಾರು ಸೂರ್ಯರನ್ನು ಧಾರಣೆ ಮಾಡಿಕೊಂಡುಬಂದು ದುವತಿಗೆ ಹೇಗೆ ಉಪಹಾರವಾಗಿ ಕೊಡುವುದೊ, ದುವ ತಿಯು ಕೈಕಾಲುಗಳ ಸಂಚಾಲನದಿಂದ ನೀರು ಬೊಳುಬಿದ್ದು ಹೇಗೆ ಕುಣಿದಾಡುತ್ತ ಏಳು ವುದೊ, ಜಲದ ಹಿಲದಲ್ಲಿ ಯುವತಿಯ ಹೃದಯವೂ ಹೇಗೆ ನೃತ್ಯ ಮಾಡುವುದೊ,
ಪುಟ:ಚಂದ್ರಶೇಖರ.djvu/೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.