ܘܩ ಚಂದ್ರಶೇಖರ. ರಲ್ಲಿ ಧರ್ಮವೆಂಬ ಶಬ್ದವು ಲೋಪವಾಗಿಹೋಗಿತ್ತು, ಅವನು ಸಾಧ್ಯಾಸಾಧ್ಯವನ್ನು ಕುರಿತು ವಿವೇಚನೆ ಮಾಡಲಿಲ್ಲ. ಮನಸ್ಸಿನಲ್ಲಿ, “ ಆದರೆ, ಇಂದಾಗಬೇಕು, ಇಂದುಬಿ ಟ್ಟರೆ ಮತ್ತೆಂದೂ ಆಗಲಾರದು ! 1) (NoV or never !) ಎಂದಂದುಕೊಂಡನು. ಹೀಗಂದುಕೊಂಡು ಅವನು ಕಲಿಕತ್ತೆಗೆ ಹೊರಟುಹೋಗಬೇಕಾಗಿದ್ದ ದಿನಕ್ಕೆ ಹಿಂದಿ ನ ರಾತ್ರಿ ಒಂದು ಪಲ್ಲಕ್ಕಿಯನ್ನೂ ಅದಕ್ಕೆ ತಕ್ಕ ಬೋಯಿಗಳನ್ನೂ ಕಾರಖಾನೆಯ ಕೆಲವು ಪಹರೆಯವರನ್ನೂ ಕರೆದುಕೊಂಡು ಸಶಸ್ತ್ರನಾಗಿ ವೇದಗಾಮಾಭಿಮುಖ ವಾಗಿ ಹೊರಟನು. ಆ ರಾತ್ರಿ ವೇದಗ್ರಾಮದ ನಿವಾಸಿಗಳು ಚಂದ್ರಶೇಖರನ ಮನೆಗೆ ಕಳ್ಳರು ಬಿದ್ದರೆಂದು ಕೇಳ ಭಯದಿಂದ ಕುಂದಿದರು. ಚಂದ್ರಶೇಖರನು ಆ ದಿನ ಮನೆಯಲ್ಲಿರಲಿಲ್ಲ. ಮುರ ಪ್ರೀದಾಬಾದಿನಿಂದ ರಾಜಕರ್ಮಚಾರಿಗಳು, ಬರಬೇಕೆಂದು ಬರೆದಿದ್ದ ಕಾಗದವು ತಪ್ಪಿ, ಅಲ್ಲಿಗೆ ಹೊರಟುಹೋಗಿದ್ದನು, ಅಲ್ಲಿಂದ ಹಿಂದಿರುಗಿ ಬಂದಿರಲಿಲ್ಲ. ಊರಿನವರೆಲ್ಲರೂ ಚಂದ್ರ ಶೇಖರನ ಮನೆಯಲ್ಲಿ ಗೋಳಾಟದ ಶಬ್ದ, ಕೋಲಾಹಲ ಮತ್ತು ಬಂದೂಕಿನ ಶಬ್ದವನ್ನು ಕೇಳಿ ಮಲಗಿದ್ದವರೆಲ್ಲರೂ ಹಾಸಿಗೆಯನ್ನು ಬಿಟ್ಟೆದ್ದು ಬಂದು ನೋಡಲಾಗಿ ಚಂದ್ರಶೇಖರನ ಮನೆಯಲ್ಲಿ ದರೋಡೆಯಾಗುವುದನ್ನು ಪ್ರತ್ಯಕ್ಷವಾಗಿ ಕಂಡರು. ಅನೇಕ ಮವಾಲುಗಳ ಬೆಳಕು ಕಂಡಿತು. ಯಾರೂ ಮುಂದಾಗಿ ಹೋಗಿ ಕಳ್ಳರ ಮೇಲೆ ಬೀಳಲಿಲ್ಲ. ಅವರೆಲ್ಲರೂ ದೂರದಲ್ಲಿ ನಿಂತು ನೋಡುತ್ತಿದ್ದ ಹಾಗೆ ಕಳ್ಳರೆಲ್ಲರೂ ಮನೆಯನ್ನು ಊಟಮಾಡಿಕೊಂಡು ಒಬ್ಬೊಬ್ಬರಾಗಿ ಹೊರಗೆ ಹೊರಟರು. ಹಾಗೆಯೆ ಆಕ್ಷರದಿಂದ ನೋಡಿಕೊಂಡಿರುವಲ್ಲಿ ಮನೆಯಿಂದ ಬಂದು ಪಲ್ಲಕ್ಕಿಯನ್ನು ಹೊರಕ್ಕೆ ಹೊತ್ತುಕೊಂಡು ಬಂದರು, ಪಲ್ಲಕ್ಕಿಯ ಬಾಗಿಲು ಮುಚ್ಚಿತ್ತು. ಅದರೊಂದಿಗೆ ಪುರಂದರ ಪುರದ ಕಾರಖಾನೆಯು ಸಾಹೇಬ ! ಎಲ್ಲ ರೂ ನೋಡಿ ಭಯಪಟ್ಟವರಾಗಿ ನಿಸ್ತಬ್ಧರಾಗಿ ದೂರ ಸರಿದು ಹೋದರು. ಕಳ್ಳರೆಲ್ಲರೂ ಹೊರಟು ಹೋದ ಮೇಲೆ ನೆರೆಯುವರು ಮನೆಯೊಳಗೆ ಹೋಗಿ ನೋಡ ಲಾಗಿ ಮನೆಯ ಸಾಮಾನುಗಳು ಕಳವಾಗಿರಲಿಲ್ಲ. ಎಲ್ಲಾ ಇದ್ದ ಹಾಗೆ ಕಂಡಿತು. ಆದರೆ ರೈವಲಿನಿಯು ಇರಲಿಲ್ಲ. ಕೆಲವರು ಅವಳು ಎಲ್ಲಿಯೋ ಔತುಕೊಂಡಿರಬೇಕು, ಕೂಡಲೆ ಬರುವಳೆಂದು ಹೇಳಿದರು. ಹಳಬರಾದವರು, ಪುನಃ ಬರಳ : ಬಂದರೂ ಚಂದ ಶೇಖರಸು ಅವಳನ್ನು ಮನೆಗೆ ಸೇರಿಸಿಕೊಳ್ಳಲಾರನೆಂದರು, ಪಲ್ಲಕ್ಕಿಯನ್ನು ನೋಡಿದವರು, ಅವಳು ಅದರಲ್ಲಿ ಹೊರಟುಹೋಗಿರಬೇಕೆಂದು ಹೇಳಿದರು. ಅವಳು ಹಿಂದಿರುಗಿ ಬರುವುದಾಗಿ ನಿರೀಕ್ಷಿಸಿಕೊಂಡಿದ್ದವರು, ಅಲ್ಲಿಯೆ ನಿಂತು ನಿಂತು ಸಾಕಾಗಿ ಕಡೆಗೆ ಕುಳಿತು ಕೊಂಡರು. ಕೂತು ಕೂತು ತೂಕಡಿಸಿ ಬೀಳಲಾರಂಭಿಸಿ ದರು, ತೂಕಡಿಸಿ ಬೀಳುತ್ತಿದ್ದು ಕಡೆಗೆ ವಿರಕ್ತರಾಗಿ ಎದ್ದು ಹೊರಟು ಹೋದರು. ಶೈವಲಿನಿಯು ಬರಲಿಲ್ಲ.
ಪುಟ:ಚಂದ್ರಶೇಖರ.djvu/೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.