ಮೊದಲನೆಯ ಭಾಗ. ೧೩ ಕಾಳಭುಜಂಗದಹಾಗೆ ಮುಖತಗ್ಗಿದವಳಾದಳು. ಸುಂದರಿಯು ಸ್ವಲ್ಪ ಪರುಪಭಾವ ದಿಂದ, ಸತ್ಯವಾಗಿ ಹೇಳುವಿಯಾ ? ಎಂದು ಕೇಳಿದಳು. ಶೈವಲಿನಿ-ಸತ್ಯವಾಗಿ ಹೇಳುವೆನು. ಸುಂದರಿ-ಈ ಗಂಗೆಯಮೇಲೆ ನಿಂತು ? ಕೈವಲಿನಿ-ಹೇಳುವೆನು, ನೀನು ಕೇಳಬೇಕಾದ ಅವಶ್ಯಕವಿಲ್ಲ. ಹಾಗೆಯೆ ಹೇಳುವೆನು, ಸಾಹೆಬನನ್ನು ನಾನು ಇದುವರೆಗೂ ನೋಡಿಲ್ಲ. ನನ್ನನ್ನು ಗ್ರಹಣ ಮಾಡಿದರೆ ನನ್ನ ಸ್ವಾಮಿಯು ಧರ್ವುದಿಂದ ಪತಿತನಾಗುವುದಿಲ್ಲ. ಸುಂದರಿ-ಹಾಗಾದರೆ ನಿನ್ನ ಸ್ವಾಮಿಯು ನಿನ್ನನ್ನು ಗ್ರಹಣಮಾಡುವ ವಿಚಾರದಲ್ಲಿ ಸಂದೇಹಪಡಬೇಡ. ಅವನು ಧರ್ಮಾತ್ಮನು ಅಧರ್ಮವನ್ನು ಮಾಡುವವನಲ್ಲ. ಇನ್ನು ಸುಳ್ಳು ಮಾತುಗಳಿಂದ ಹೊತ್ತು ಕಳೆಯಬೇಡ. - ಶೈವಲಿನಿಯು ಸ್ವಲ್ಪ ಹೊತ್ತು ಸುಮ್ಮನಿದ್ದಳು. ಸ್ವಲ್ಪ ಅತ್ತಳು, ಅನಂತರ ಕಣ್ಣೂರಿಸಿಕೊಂಡು, ನಾನು ಹೋಗುವೆನು, ನನ್ನ ಸ್ವಾಮಿಯ ನನ್ನನ್ನು ಗ್ರಹಣ ಮಾಡುವನು. ಆದರೆ ನನ್ನ ಮೇಲಿನ ಕಳ೦ಕಾಸವಾದವು ಯಾವಾಗ ಹೋಗುವುದು ? ಎಂದಳು. ಸುಂದರಿಯು ಏನೊಂದುತ್ತರವನ್ನೂ ಕೊಡಲಿಲ್ಲ. ಶೈವಲಿನಿಯು ಹೇಳತೊಡಗಿ ದಳು, ಏನೆಂದರೆ :- ಇನ್ನು ಮೇಲೆ ನೆರೆಹೊರೆದುವರೆಲ್ಲಾ ನನ್ನನ್ನು ತೋರಿಸುತ್ತ, ಇವಳನ್ನು ಇಂಗ್ಲೀಷರವನು ಎತ್ತಿಕೊಂಡು ಹೋಗಿದ್ದನೆಂದು ಹೇಳದಿರುವರೆ ? ಈಶ್ನ ರನು ಹಾಗೆ ಮಾಡದಿರಲಿ, ಆದರೆ ನನಗೆ ಪುತ್ರ ಸಂತಾನವಾದರೆ, ಅದರ ಅನ್ನಪ್ರಾಶನದಲ್ಲಿ ಟಿತನ ಮಾಡಿದರೆ ಎಲ್ಲರೂ ಊಟಕ್ಕೆ ಬರುವರೆ ? ಒಂದುವೇಳೆ ಹೆಣ್ಣು ಹುಟ್ಟಿದರೆ ಬಳ್ಳೆ ಬ್ರಾಹ್ಮಣಮನೆತನದವರು ಅದನ್ನು ತೆಗೆದುಕೊಳ್ಳುವರೆ ? ನನ್ನ ಪತಿವ್ರತಾ ಧರ್ಮವನ್ನು ಬಿಡದೆ ಸೃಧರ್ಮದಲ್ಲಿದ್ದು ಮನೆಗೆ ಹಿಂದಿರುಗಿ ಬಂದೆನೆಂದು ಹೇಳಿದರೆ ಯಾರುತಾನೇ ನಂಬುವರು ? ನಾನು ಮನೆಗೆ ಹಿಂದಿರುಗಿ ಹೋಗಿ ಎಲ್ಲರಿಗೂ ಹೇಗೆತಾನೇ ಮುಖವನ್ನು ತೋರಿಸಲಿ ? ಎಂದಳು. - ಸುಂದರಿ.ಅದೃಷ್ಯದಲ್ಲಿದ್ದ ಹಾಗೆ ಆಗಿಹೋಯಿತು. ಇನ್ನು ಅದು ಹಿಂದಿರುಗದು. ಚಿರಕಾಲವೂ ಸ್ವಲ್ಪ ಸ್ವಲ್ಪ ಅನುಭವಿಸಲೇಬೇಕು. ಆದರೂ ತನ್ನ ಮನೆಯಲ್ಲಿ ತಾನಿ ರಬೇಕು. ಶೈವಲಿನಿ-ಮಾವ ಸುಖಕ್ಕೆ ? ಯಾವ ಸುಖದ ಆಕೆಗೆ ಇಷ್ಟು ಕಷ್ಟ್ಯವನ್ನು ಅನು ಭವಿಸಿಕೊಂಡಿರುವುದಕ್ಕೆ ಮನೆಗೆ ಬರಲಿ ? ನ ಪಿತಾ, ನ ಮಾತ ನ ಬಂಧು-(ತಾಯಿಯಿಲ್ಲ, ತಂದೆಯಿಲ್ಲ, ಬಂಧುಬಳಗ ಯಾವದೂ ಇಲ್ಲ) ಸುಂದರಿ-ಏತಕ್ಕೆ, ಸ್ವಾಮಿಯೊ ? ಈ ನಾರಿಯ ಜನ್ಮವು ಮತ್ತಾರಿಗೋಸ್ಕರ ? ಕೈವಲಿನಿ-ನಿನಗೆ ಗೊತ್ತಿಲ್ಲವೇನು? ಎಲ್ಲಾ ಗೊತ್ತಿದೆಯಷ್ಮೆ ?
ಪುಟ:ಚಂದ್ರಶೇಖರ.djvu/೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.