ಐದನೆಯ ಪರಿಚ್ಛೇದ. ಚ೦ದ್ರ ರ ನ ಪ್ರತ್ಯಾಗ ದು ನ , “ಬ ಓಓಡ ಚಂದ್ರಶೇಖರನು ಭವಿಷ್ಯತ್ತನ್ನೆಲ್ಲಾ ಗುಣಿಸಿ ನೋಡಿ, ರಾಜಕರ್ಮಚಾರಿಗೆ, ಶಿವ ಅಯ್ಯಾ ! ತಾವು ಹೋಗಿ, ಗುಣಿಸುವುದಕ್ಕೆ ನನ್ನಿಂದ ಆಗಲಿಲ್ಲ ವೆಂದು ನಬಾಬರಿಗೆ ತಿಳಿಸಬೇಕೆಂದು ಹೇಳಿದನು. ರಾಜಕರ್ಮಚಾರಿಯು, ಏತಕ್ಕೆ, ಸ್ವಾಮಿ? ಎಂದು ಕೇಳಿದನು. ಚಂದ್ರಶೇಖರ- ಎಲ್ಲಾ ಸಂಗತಿಗಳನ್ನೂ ಗಣಿಸಿ ಸ್ಥಿರಮಾಡುವುದ ಈಾಗದು. ಹಾಗಾಗುವುದಾಗಿದ್ದರೆ, ಮನುಷ್ಯನು ಸರ್ವಜ್ಞನಾಗುತಲಿದ್ದನು. ಅದ ಲ್ಲದೆ ನಾನು ಜ್ಯೋತಿಷ್ಯದಲ್ಲಿ ಅಷ್ಟು ಪಾರದರ್ಶಿಯ ಅಲ್ಲ. ರಾಜಕರ್ಮಚಾರಿ ಅಥವಾ ರಾಜನಿಗೆ ಅಪ್ರಿಯವಾದ ಸಮಾಚಾರವನ್ನು ಬುದ್ದಿ ನಂತರ ಪ)ಕಾರಪಡಿಸಿ ಹೇಳುವುದಿಲ್ಲ. ಹಾಗಿರಬಹುದಾಗಿ ತೋರುತ್ತದೆ, ಹೇಗೇ ಆಗಲಿ, ತಾವು ಹೇಳಿರುವುದನ್ನೇ ಹೋಗಿ ರಾಜರಿಗೆ ಅರುಹುತ್ತೇನೆ. ತಂದ್ರಶೇಖರನು ಅಪ್ಪಣೆಯನ್ನು ತೆಗೆದುಕೊಂಡನು. ರಾಜಕರ್ವ ಚಾರಿಯು ಅವನಿಗೆ ಗುರಸ್ಕಾರವನ್ನು ಕೊಡುವುದಕ್ಕೆ ಹೋದನ.. ಆದರೆ ಕೊಡಲಾರದೆಹೋದನು. ಚಂದ್ರಶೇಖರನು ಬ್ರಾಹ್ಮಣ ಮತ್ತೂ ಪಂಡಿತನಾಗಿದ್ದೇನೆ ಹೊರತು, ಬಾಹ್ಮಣಪಂಡಿತ ನಾಗಿರಲಿಲ್ಲ. ಭಿಕ್ಷೆಯನ್ನು ಗ್ರಹಣ ಮಾಡತಕ್ಕವನಾಗಿರಲಿಲ್ಲ, ಮನೆಗೆ ಹಿಂದಿರುಗಿ ಬರುತ್ತಿರುವಾಗ ದೂರದಿಂದ ಮನೆಯು ಕಣ್ಣಿಗೆ ಬಿದ್ದಿತು. ಕಣ್ಣಿಗೆ ಬೀಳುತ್ತಲೆ ಮನಸ್ಸಿನಲ್ಲಿ ಒಂದು ಆಹ್ಲಾದವುಂಟಾಯಿತು. ಅವನು ತತ್ತ್ವಜ್ಞ ನಾಗಿಯೂ ತತ್ತ್ವ ಜಿಜ್ಞಾಸುವಾಗಿಯೂ ಇದ್ದನು. ತನ್ನೊಳು ತಾನೆ, ವಿದೇಶದಿಂದ ಮನೆಗೆ ಹಿಂದಿರುಗಿ ಬರುವಾಗ ಸ್ವಗೃಹವನ್ನು ನೋಡಿ ಹೃದಯದಲ್ಲಿ ಆಹ್ಲಾದವು ಸಂಚಾರವಾಗುವು ದಕ್ಕೆ ಕಾರಣವೇನು ? ನಾನೇನು, ಇಷ್ಟುದಿನವೂ ಆಹಾರ ನಿದ್ದೆಯಿಲ್ಲದೆ ಕಷ್ಯಕ್ಕೊಳ ಗಾಗಿದ್ದೆನೆ ? ಮನೆಗೆ ಹೋದರೆ ಪರಸ್ಥಳದಲ್ಲಿದ್ದುದಕ್ಕಿಂತಲೂ ಹೆಚ್ಚು ಸುಖಿಯಾಗುವೆ ನೇನು ? ನಾನು ಇಷ್ಟು ತಿಳವುಕೆಯುಳ್ಳವನಾಗಿದ್ದರೂ ಗುರುತರವಾದ ಮೋಹಬಂಧನ ದಲ್ಲಿ ಬಿದ್ದಿದ್ದೇನೆಂಬುದಕ್ಕೆ ಸಂದೇದವಿಲ್ಲ. ಈ ಮನೆಯಲ್ಲಿ ನನ್ನ ಪ್ರೇಯಸಿಯಾದ ಭಾರೈಯು ವಾಸವಾಗಿದ್ದಾಳೆಂತಲೇ ನನಗೆ ಇಷ್ಟು ಆಹ್ವಾದ ಉಂಟಾಗಿರುವುದು ? ಜನರು, ಎಲ್ಲಾ ಮಾಯೆಯೆಂದು ಹೇಳುವರು ! ಯಾವದೂ ಮಾಯೆಯಲ್ಲ. ಹೇಳುವವರೇ ಮಾಯೆಯಿಂದ ಮುಗ್ಗರಾಗಿರಬೇಕು. ಭಗವಂತನು ಈ ವಿಶ್ವ ಬ್ರಹ್ಮಾಂಡವೆಲ್ಲಾ ನಾನೇ
ಪುಟ:ಚಂದ್ರಶೇಖರ.djvu/೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.