ಎರಡನೆಯ ಪರಿಚ್ಛೇದ. ಗುರ ಗಣ ಖಾ ೯. 22-. ಗದವು ಯಾರ ಕೈಗೆ ಸೇರಿತೊ ಅವನ ಹೆಸರು ಗುರಗಣರ್ಖಾ, ಈ ಸಮಯದಲ್ಲಿ ಬಂಗಾಳೆಯಲ್ಲಿ ನಿಯುಕ್ತರಾಗಿದ್ದ ರಾಜ ಪುರುಷರಲ್ಲಿ ಗುರಗಣಖಾನನು ಸರಶ್ರೇಷ್ಠನಾಗಿ ಸರೋ * ನಾಗಿದ್ದನು. ಅವನು ಜಾತಿಯಲ್ಲಿ ಆರ್ಮೀನಿಯವನಾಗಿದ್ದನು. ಇಸ್ಪಹಾನಿನಲ್ಲಿ ಅವನು ಹುಟ್ಟಿದ್ದು, ಅವನು ಮೊದಲು ಬಟ್ಟೆಯು ವ್ಯಾಪಾರವನ್ನು ಮಾಡುತಲಿದ್ದವನೆಂದು ತಿಳಿದುಬರುತ್ತದೆ, ಆದರೆ ಅಸಾಧಾರಣವಾದ ಪ್ರತಿಭೆಯುಳ್ಳ ಮನುಷ್ಯನಾಗಿದ್ದನು, ರಾಜ ಕಾರದಲ್ಲಿ ನಿಯುಕ್ಕೆ ನಾಗಿ ಅಲ್ಪ ಕಾಲದಲ್ಲಿಯೇ ಪ್ರಧಾನಸೇನಾಪತಿಯು ಕೆಲಸಕ್ಕೆರಿದನು. ಕೇವಲ ಅಪ್ರೈ ಅಲ್ಲ. ಸೇನಾಪತಿಯಾಗಿ ಹೊಸಹೊಸದಾದ ಗೋಲಂದಾಜ ಸೈನ್ಯವನ್ನು ಏರ್ಪಾಡು ಮಾಡಿದನು. ಯರೋಪದೇಶದ ಪ್ರಥೆಗನುಸಾರವಾಗಿ ಅವರನ್ನೆಲ್ಲಾ ಸುಕ್ಷಿತರನ್ನಾ ಗಿ ಸುಸಜ್ಜಿತರನ್ನಾಗಿ ಮಾಡಿ, ಫಿರಂಗಿ, ಗುಂಡು, ತುಪಾಕಿಗಳನ್ನು ಇಲ್ಲಿದೆ ತಯಾರಾಡಿಸಿದನು. ಅವು ದೂರೋಪಿನಲ್ಲಿ ಆದುದಕ್ಕಿಂತಲೂ ಸೊಗಸಾಗಿದ್ದುವು. ಅವನು ಏರ್ಪಾಡು ಮಾಡಿದ ಗೋಲಂದಾಜಿನ ಸೈನ್ಯವು ಇಂಗ್ಲೀಷರ ಆರ್ಟರಿ ಸೈನ್ಯಕ್ಕೆ ಸಮಾನವಾಗಿ ನಿಂತಿತು. ವಿಾರ ಕಾಸೀವನಿಗೆ ಗುರಗಣಶಾನನ ಸಹಾಯದಿಂದ ಇಂಗ್ಲಿಷ ರನ್ನು ಪರಾಭೂತರನ್ನಾಗಿ ಮಾಡಬಲ್ಲೆನೆಂಬ ವಪ್ಪ ಭರವಸೆಯುಂಟಾಯಿತು. ಗ.ರಗ ಣಖಾನನ ಆಧಿಪತ್ಯವು ಅದಕ್ಕನುರೂಪವಾಗಿತ್ತು. ಅವನ ಪರಾವರ್ತವಿಲ್ಲದೆ ವಿಾರ `ಕಾಸಿವನು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅವನ ಪರಾಮರ್ಶಕ್ಕೆ ವಿರೋಧ ವಾಗಿ ಯಾರು ಏನು ಹೇಳಿದರೂ ವಿರಕಾಸಿವನು ಕೇಳುತ್ತಿರಲಿಲ್ಲ. ವಸ್ತುತಃ, ಗುರು ಗಣಖಾನನು ಒಬ್ಬ ಚಿಕ್ಕ ನಬಾಬನಾಗುತ್ತ ಬಂದನು. ಮುಸಲ್ಮಾನ ಕಾರ್ಯಾಧ್ಯಕ್ಷರಿ ಗೆಲ್ಲಾ ಅವನಮೇಲೆ ಬಂದು ಕಣ್ಣಿತ್ತು. - ರಾತ್ರಿ ಎರಡನೆಯ ಪ್ರಹರವಾಗಿದ್ದರೂ ಗುರಗಣಾನನು ಮಲಗಿರಲಿಲ್ಲ. ಒಬ್ಬನೇ ಕುಳಿತುಕೊಂಡು ದೀಪದ ಬಳಕಿನಲ್ಲಿ ಕೆಲವು ಕಾಗದಗಳನ್ನು ಓದುತಲಿದ್ದನು, ಕಾಗದ ಗಳೆಲ್ಲವೂ ಕಲಿಕತ್ತೆಯಿಂದ ಕೆಲವು ಆರ್ಮಿಾನಿಯವರು ಬರೆದಿದ್ದವಾಗಿದ್ದುವು. ಕಾಗದಗ ಳನ್ನು ಓದಿ ಅನಂತರ ಒಬ್ಬ ನೃತ್ಯನನ್ನು ಕರೆದು ಬಾಗಿಲುಗಳೆಲ್ಲಾ ತೆರೆದಿವೆ? ಎಂದು ಕೇಳದನು. ಚೋಪದಾರತೆರೆದಿವೆ.
ಪುಟ:ಚಂದ್ರಶೇಖರ.djvu/೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.