ಚಂದ್ರಶೇಖರ. ಗುರಗಣರ್ಖಾ-ಯಾರಾದರೂ ನನ್ನ ಬಳಿಗೆ ಬಂದರೆ ಅವರನ್ನು ಅಡ್ಡಿ ಮಾಡ ಕೂಡದು. ಅಥವಾ, ಯಾರೆಂದೂ ಅವರನ್ನು ವಿಚಾರಿಸಕೂಡದು, ಹೀಗೆ ಎಲ್ಲರಿಗೂ ತಿಳಿಸಿದ್ದೀಯೋ? ಚೋಪದಾರ-ಎಲ್ಲರಿಗೂ ತಿಳಿಸಿದ್ದೇನೆ. ಗುರಗಣರ್ಖಾ-ಒಳ್ಳೆಯದು, ನೀನು ದೂರದಲ್ಲಿರು. ಅನಂತರ, ಗುರಗಣಖಾನನು ಕಾಗದಗಳನ್ನೆಲ್ಲಾ ಕಟ್ಟಿ ಮರೆಯಲ್ಲಿಟ್ಟು, ಮನಸ್ಸಿ ನಲ್ಲಿ, ಈಗ ಯಾವ ಮಾರ್ಗವನ್ನು ಅನುಸರಿಸಲಿ ? ಈ ಭಾರತವರ್ಷವಾದುದು ಎಂದು ಸಮುದ್ರ, ವಿಶೇಷವಾಗಿದೆ. ಯಾರು ಎಷ್ಟು ಆಳುದ್ದ ಮುಣುಗಿದರೂ ಅಪ್ನಷ್ಟು ರತ್ನ ಗಳನ್ನು ತರುವರು. ತೀರದಲ್ಲಿ ಕುಳಿತುಕೊಂಡು ಅಲೆಗಳನ್ನು ಎಣಿಸುತಲಿದ್ದರೆ ಏನಾದೀತು ? ನಾನು ಮೊದಲು ಗಜದಿಂದ ಅಳೆಯುತ್ತ ಬಟ್ಟೆದುನ್ನು ಮಾರುತಲಿದ್ದೆನು. ಈಗಲಾದರೂ ನನ್ನ ಕಣ್ಣಂಜಿಕೆಯಿಂದ ಭಾರತವರ್ಷವೆಲ್ಲ ಭೀಕರಗೊಂಡಿದೆ. ನಾನೇ ಬಂಗಾಳೆಗೆಲ್ಲಾ ಕರ್ತನಾಗಿದ್ದೇನೆ. ಬಂಗಾಳೆಗೆ ಕರ್ತನು ನಾನೆ ? ಕರ್ತರು ಯಾರು ? ಕರ್ತರು ಇಂಗ್ಲೀಷು ವ್ಯಾಪಾರಿಗಳು, ಮಾರಕಾಸೀಮನು ಅವರಿಗೆ ಗುಲಾಮನಾಗಿದ್ದಾನೆ. ನಾನು ಮಾರಕಾಸೀವನ ಗುಲಾಮನಾಗಿದ್ದೇನೆ. ಬಹಳ ದೊಡ್ಡ ಪದವಿ ! ನಾನು ಬಂಗಾ ಳೆಗೆ ಕರ್ತನಾಗಕೂಡದೇತಕ್ಕೆ ? ನನ್ನ ತೋಫುಗಳಿಗಿದುರಾಗಿ ನಿಲ್ಲುವವನು ಯಾರಿದ್ದಾನೆ ? ಇಂಗ್ಲೀಪರೆ ! ಅವರು ಬಂದುತಡವೆ ಪಲಾಯನರಾಗಿ ಹೋಗಿದ್ದರು. ಆದರೆ ಇಂಗ್ಲೀಷ ರನ್ನು ದೇಶದಿಂದ ಹೊರಡಿಸದಿದ್ದರೆ ನಾನು ಕರ್ತನಾಗಿ ನಿಲ್ಲಲಾರೆನು, ನಾನು ಬಂಗಾಳೆಗೆ ಅಧಿಪತಿಯಾಗಬೇಕು, ಮಾರಕಾಸಿವನನ್ನು ನಾನು ಒಪ್ಪುವುದಿಲ್ಲ. ಯಾವದಿನ ಬರು ವುದೋ ಆ ದಿನ ಅವನನ್ನು ನಿಂಹಾಸನದಿಂದ ಎಳೆದುಹಾಕಿಬಿಡಬಲ್ಲವನಾಗಿದ್ದೇನೆ. ನಾನು ಮೇಲಕ್ಕೇರುವುದಕ್ಕೆ ಅವನು ಬಂದು ಏಣಿಯಂತಿರಲಿ, ಈಗ ಉಪ್ಪರಿಗೆಯಮೇಲೆ ಹತ್ತಿ ದೆನು. ಏಣಿಯನ್ನು ತೆಗೆದು ಬಿಸಾಡಬಲ್ಲವನಾಗಿದ್ದೇನೆ. ಈ ಪಾಪಿಗಳಾದ ಇಂಗ್ಲೀ ಪರು ಈಗ ಕಂಟಕ ಸ್ವರೂಪರಾಗಿದ್ದಾರೆ. ಅವರು ನನ್ನನ್ನು ಕೈಯಲ್ಲಿ ಹಾಕಿಕೊಳ್ಳಬೇ ಕೆಂದಿದ್ದಾರೆ. ನಾನು ಅವರನ್ನು ಕೈಯಲ್ಲಿ ಹಾಕಿಕೊಳ್ಳಬೇಕೆಂದು ಇದ್ದೇನೆ. ಅವರು ನನ್ನ ಕೈಗೆ ಅಡಗತಕ್ಕವರಲ್ಲ, ಆದುದರಿಂದ ಅವರನ್ನು ಓಡಿಸಿಬಿಡುವೆನು. ಈಗ ಮಾರಕಾಸೀವನು ನಿಂಹಾಸನದಮೇಲೆ ಇರಲಿ, ಅವನನ್ನು ದರ್ವಿಯನ್ನಾಗಿ ಮಾಡಿ ಕೊಂಡು ಬಂಗಾಳೆಯಲ್ಲಿ ಇಂಗ್ಲೀಷರ ಹೆಸರಿಲ್ಲದಹಾಗೆ ಮಾಡುವೆನು. ಅದಕ್ಕೊಸ್ಕ ರವೇ ಪ್ರಯತ್ನ ಪಟ್ಟು ಯುದ್ಧಕ್ಕೆ ಸನ್ನದ್ಧನಾಗುತಲಿದ್ದೇನೆ, ಅನಂತರ ವಿಾರಕಾಸೀನು ನಿಗೆ ಅಪ್ಪಣೆಯನ್ನು ಕೊಡುವೆನು ಹೀಗೆ ಮಾಡುವುದು ಸುಪಥವಾಗಿ ಕಾಣುತ್ತದೆ. ಆದರೆ ಹಠಾತ್ತಾಗಿ ಈ ಕಾಗದವು ಬಂದುದೇಕೆ ? ಈ ಹುಡುಗಿಯು ಇಂತಹ ದುಸ್ಸಾಹ ನಿಕವಾದ ಕಾರ್ಯದಲ್ಲಿ ಪ್ರವೃತ್ತಿಸಿದುದೇತಕ್ಕೆ ? ಎಂದು ಯೋಚಿಸುತಲಿದ್ದನು.
ಪುಟ:ಚಂದ್ರಶೇಖರ.djvu/೪೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.