Yo ಚಂದ್ರ ಶೇಖರ. ಹಾಗೆ ಕಾರ್ಯವನ್ನು ಮಾಡುವೆನೆ ? ನಿನ್ನ ಸ್ವಂತ ಸಹಾಯ ಸ್ವರೂಪಿಯಾಗಿ ನನ್ನನ್ನು ಅಂತಃಪುರದಲ್ಲಿ ಇಟ್ಟು ಈಗ ನಾನು ಅಲ್ಲಿ ಬಾಲೆಯಾಗಿದ್ದೇನೆಂದು ಹೇಳಿದರೆ ಹೇಗೆ ? ಗುರಗಣರ್ಖಾ- ಆಯಿತು, ಇಂಗ್ಲೀಷರ ಸಂಗಡ ಯುದ್ಧವಾದರೆ ನಿನಗೂ ನನಗೂ ನಮ್ಮವೇನು ? ದುದ್ಧವು ನಡೆದರೆ ನಡೆಯಲಿ, ನಿಂತರೆ ನಿಲ್ಲಲಿ. ದಳನೀ--ನೀನು ಜಯಶಾಲಿಯಾಗಬಲ್ಲೆಯಾ ? ಗುರಗಣರ್ಖಾ-ನನಗೆ ಜಯವಾಗುವುದೇ ಸಂಭವ. ದಳನೀ -ಇದುವರೆಗೆ ಇಂಗ್ಲೀಷರನ್ನು ಜಯಿಸಿರುವವರು ಯಾರಿದ್ದಾರೆ ? ಗುರಗಣರ್ಖಾ.-ಇಂಗ್ಲೀಷರು ಎಷ್ಟು ಗುರಗಣಖಾನರ ಸಂಗಡ ಯುದ್ಧ ಮಾಡಿ ದ್ದಾರೆ ? ದಳನೀ ಸರಾಜಉದ್ಘಲನೂ ಹಾಗೆಯೇ ತಿಳಿದುಕೊಂಡಿದ್ದನು. ಅದು ಹೋ ಗಲಿ, ನಾನು ಹೆಂಗಸು, ಹೆಂಗಸಿಗೆ ಹೇಗೆ ತೋರುವು ರೊ ಹಾಗೆ ನಂಬುವಳು. ನನ್ನ ಮನಸ್ಸಿಗೆ ಇಂಗ್ಲೀಷರ ಸಂಗಡ ಯುದ್ಧ ಮಾಡಿ ಯಾರೂ ಗೆಲ್ಲಲಾರರೆಂದು ತೋರು ತದೆ. ಈ ದುದ್ಧವು ನಮ್ಮ ಸನಾಶಕ್ಕೆ ಕಾರಣವಾಗುವುದು. ಆದುದರಿಂದ ಈ ಯುದ್ಧ ಕೈ ಪ್ರವೃತ್ತನಾಗಬೇಡವೆಂದು ವಿನಯದಿಂದ ಬೀಡಿ ಕೊಳ್ಳುತ್ತೇನೆ. ಗುರಗಣರ್ಖಾ ಇಂತಹ ಕೆಲಸಗಳಲ್ಲಿ ಹೆಂಗಸರ ಪರಾವುರ್ರವು ಅಗಾಹ್ಯ ವಾದುದು. - ದಳ ನೀ-ನನ್ನ ಪರಾಮರ್ಶವೇ ಗಾಹ್ಮವಾಗತಕ್ಕದ್ದು, ನೀನು ನನ್ನನ್ನು ರಕ್ಷಿಸ ಬೇಕು, ನನಗೆ ನಾಲ್ಕು ದಿಕ್ಕುಗಳಲ್ಲಿಯ ಕತ್ತಲೆ ಕವಿದುಕೊಂಡಹಾಗೆ ತೋರುತ್ತದೆ. - ಹೀಗೆಂದು ಹೇಳಿ ದಳನಿಯು ರೋದನ ಮಾಡಲು ತೊಡಗಿದಳು. ಗುರಗಣಖಾನನು ವಿಸ್ಮಿತನಾದನು. ಅನಂತರ, ನೀನು ಅಳುವುದೇತಕೆ ? ಏನಾ ದರೂ ಆಗುವುದಾದರೆ ಊಾರ ಕಾಸಿಮನು ಸಿಂಹಾಸನಚ್ಚುತನಾಗುವನು. ಆಗ ನಿನ್ನನ್ನು ನಾನು ಸ್ವದೇಶಕ್ಕೆ ಸಂಗಡ ಕರೆದುಕೊಂಡು ಹೋಗುವೆನು. ಕೋ ಧದಿಂದ ದಳನಿಯ ಕಣ್ಣುಗಳು ಜೈಲಿಸಲಾರಂಭವಾಯಿತು, ಅವಳು ಕ್ರೋಧದಿಂದ ಕಣ್ಣಾಮುಕೊಳ್ಳು ವಿಾರಕಾಸಿವನು ನನ್ನ ಸ್ವಾಮಿಯೆಂಬುದನ್ನು ಮರೆತೆಯಾ ? ಏನು? ಎಂದಳು. ಗುರಗಣಖಾನನು ಸ್ವಲ್ಪ ವಿಸ್ಮಿತನಾಗಿ ಸ್ವಲ್ಪ ಅಪ್ರತಿಭನಾಗಿಯ, ಇಲ್ಲ, ಮರೆತಿಲ್ಲ, ಆದರೆ ಸ್ವಾಮಿಯಾದವನು ಯಾರಿಗೂ ಚಿರಕಾಲ ಬದುಕಿರುವುದಿಲ್ಲ. ಒಬ್ಬ ಗಂಡನು ಹೋದರೆ ಮತ್ತೊಬ್ಬ ಗಂಡನು ಬರುವನು. ನೀನು ಒಂದಾನೊಂದು ದಿನ ಭಾರತವರ್ಷದ ಎರಡನೆಯ ನೂರಜಹಾನ ಆಗುವೆಯೆಂದು ತೋರುತ್ತದೆ.
ಪುಟ:ಚಂದ್ರಶೇಖರ.djvu/೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.