8 ಚಂದ್ರಶೇಖರ. ವಾಗಲಿಲ್ಲ. ಬ್ರಹ್ಮಚಾರಿಯು ದಳನಿಯನ್ನು ಕುರಿತು, ನನ್ನ ಪರಾಮರ್ಶವೇನೆಂದರೆ:- ನೀನು ಇದ್ದಕ್ಕಿದ್ದ ಹಾಗೆ ಹೋಗಿ ನಬಾಬನನ್ನು ನೋಡಕೂಡದು, ಮೊದಲು ಬಂದು ಕಾಗದದಮುಖೇನ ಎಲ್ಲಾ ಸಮಾಚಾರಗಳನ್ನೂ ತಿಳಿಸಬೇಕು. ಆತನು ನಿನ್ನಲ್ಲಿ ಸ್ನೇಹಸ ರನಾಗಿದ್ದರೆ ಅವಶ್ಯಕವಾಗಿ ನಿನ್ನ ಮಾತನ್ನು ನಂಬುವನು. ಅನಂತರ ಆತನ ಅಪ್ಪಣೆ ಯಾವರ ಹೋಗಿ ನೋಡಬಹುದು. ಹೀಗೆಮಾಡಿದರೆ ಒಳ್ಳೆಯದೆಂದು ನನ್ನ ಬುದ್ಧಿಗೆ ತೋರುತ್ತದೆ ಎಂದನು. ದಳನೀ- ಕಾಗದವನ್ನು ತೆಗೆದುಕೊಂಡು ಹೋಗುವವರು ಯಾರು ? ಬ್ರಹ್ಮಚಾರಿ.-ನಾನು ಕಳುಹಿಸಿಕೊಡುವೆನು. ಅನಂತರ ದಳನಿಯು ಲೇಖಣಿ ಮನಿ ಮುಂತಾದಲೇಖನ ಸಾಮಗ್ರಿಗಳನ್ನು ಕೇಳಿ ದಳು, ಬ್ರಹ್ಮಚಾರಿಯು ರಾಮಚರಣನನ್ನು ಎಬ್ಬಿಸಿ ಅವನಿಗೆ ಅಪ್ಪಣೆ ಮಾಡಿದಪ್ರ ಕಾರ ರಾಮಚರಣನ) ಕಾಗದ ಮಂತಾದುದನ್ನು ತಂದುಕೊಟ್ಟನು. ದಳನಿಯು ಕಾಗದವನ್ನು ಬರೆಯಲು ತೊಡಗಿದಳು. ಅವಳು ಬರೆಯುತಲಿರುವಾಗ ಬ್ರಹ್ಮಚಾರಿಯು, ಈ ಮನೆಯು ನನ್ನ ದಲ್ಲ. ಆದರೆ ರಾಜನ ಆಜ್ಞದು ಎಷ್ಟು ದಿನ ಬರುವುದಿಲ್ಲವೊ ಅಷ್ಟುದಿನ ನೀನು ಇಲ್ಲಿರಬಹುದು. ದಾರಿಗೂ ಗೊತ್ತಾಗುವುದಿಲ್ಲ. ಮತ್ತು ಯಾರೂ ನಿನ್ನನ್ನು ವಿಚಾರಿಸರು ಎಂದು ಹೇಳಿದನು. ಹೆಂಗಸರು ಉಪಾಯಾಂತರವಿಲ್ಲದೆ ಅದಕ್ಕೊಪ್ಪಿಕೊಂಡರು, ಕಾಗದವನ್ನು ಬರೆದು ಪೂರೆ ಇದನಂತರ ದಳನಿಯು ಅದನ್ನು ಬ್ರಹ್ಮಚಾರಿಯ ಕೈಯಲ್ಲಿ ಕೊಟ್ಟಳು. ಬ್ರಹ್ಮ ಚಾರಿಯು ರಾಮಚರಣನಿಗೆ, ಹೆಂಗಸರು ಅಲ್ಲಿದ್ದುಕೊಂಡಿರುವುದಕ್ಕೆ ತಕ್ಕ ಏರ್ಪಾಡನ್ನು ವಾಡವಹಾಗೆ ಹೇಳಿ, ತಾನು ಕಾಗದವನ್ನು ತೆಗೆದುಕೊಂಡು ಹೊರಟುಹೋದನು. - ಮಾಂಗೀರನಲ್ಲಿದ್ದ ಸರ್ಕಾರದ ಉದ್ಯೋಗಸ್ಥರಾದ ಹಿಂದುಗಳೆಲ್ಲರೂ ಬ್ರಹ್ಮಚಾರಿಗೆ ಚೆನ್ನಾಗಿ ಪರಿಚಿತರಾದವರು, ಮುಸಲ್ಮಾನರೂ ಅವನನ್ನು ಬಲ್ಲವರಾಗಿದ್ದರು. ಅದುಕಾ ರಣ ಉದ್ಯೋಗಸ್ಥರೆಲ್ಲರೂ ಅವನನ್ನು ಸಮ್ಮಾನಿಸುತಲಿದ್ದರು. - ಮುನವಿಯಾಗಿದ್ದ ರಾಮಗೋವಿಂದಲಾಲನು ಬ್ರಹ್ಮಚಾರಿಯಲ್ಲಿ ವಿಶೇಷ ಭಕ್ತಿಯು ಇವನಾಗಿದ್ದನು. ಬ್ರಹ್ಮಚಾರಿಯು ಸೂರೋದಯಾನಂತರ ಕೋಟೆಯೊಳಗೆ ಹೋಗಿ ರಾವುಗೋವಿಂದಲಾಲನನ್ನು ಕಂಡು ದಳವಿಯ ಕಾಗದವನ್ನು ಅವನಲ್ಲಿ ಕೊಟ್ಟು, ನನ್ನ ಹೆಸರನ್ನು ಹೇಳ ಬೇಡ ; ಕೇಳಿದರೆ, ಯಾರೋ ಒಬ್ಬ ಬ್ರಾಹ್ಮಣನು ಕಾಗದವನ್ನು ತಂದು ಕೊಟ್ಟನೆಂದು ಹೇಳುಎಂದನು. ಯಾರ ಕಾಗದವೆಂಬುದು ಮನವಿಯು ಅರಿ ಯನು, ಬ್ರಹ್ಮಚಾರಿಯು ಪುನಃ ಮೇಲೆಹೇಳಿದ ಮನೆಗೆ ಬಂದು, ದಳನಿಗೆ, ಪ್ರತ್ಯುತ್ ರವು ನಾಳೆ ಬರುವುದು, ಅದುವರೆಗೆ ಹೇಗಾದರೂ ಕಾಲಹರಣ ಮಾಡೆಂದು ತಿಳಿಸಿದನು.
ಪುಟ:ಚಂದ್ರಶೇಖರ.djvu/೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.