ಎರಡನೆದು ಭಾಗ. ರ್ತಿ ದನು. ಕೇಳಿ ಸತಾಸನು ಸ್ವಲ್ಪ ವಿರಕ್ಕನಾಗಿ, ಈಗಲೂ ಅವಳನ್ನು ಕರೆದುಕೊಂಡು ಹೋಗಿ ಜಗತ ಸೇಟನ ಮನೆಯಲ್ಲಿಟ್ಟ ಎರಕೆಂದು ಅಪ್ಪಣೆ ಮಾಡಿದನು. ರಾಮಚರಣನು ನೋಡಿ ಬಂದು, ಶೈವಲಿನಿಯು ನಿಧ್ರತೆಯಾಗಿದ್ದಳೆಂದು ತಿಳಿಸಿದನು. ಇದನ್ನು ಸಾದಕರು ಕೇಳಿ ವಿಸ್ಮಿತರಾಗುವರು, ಇಂತಹ ಅವಸ್ಥೆಯಲ್ಲಿ ನಿದ್ರೆಯುಂಟೆ ! ಅಂತಹ ಸಂಭವವುಂಟೊ ಇಲ್ಲವೊ, ನಾವರಿಯೆವು. ನಡೆದ ಹಾಗೆ ನಾವು ಹೇಳತಕ್ಕವರು. ರಾಮಚರಣನು ಶೈವಲಿನಿಯನ್ನು ಎಬ್ಬಿಸದೆ ಪ್ರತಾಪನ ಹತ್ತಿರ ಬಂದು, ಅವಳು ನಿದ್ರಿತೆ ಯಾಗಿದ್ದಾಳೆ, ಎಬ್ಬಿಸಲೇನು ? ಎಂದು ಕೇಳಿದನು. ಕೇಳಿ ಪ್ರತಾಪನಿಗೆ ಆಶ್ಚರವಾಯಿತು. ಅವನು ಮನಸ್ಸಿನಲ್ಲಿ, ಚಾಣಕ್ಯಪಂಡಿತನು ಹೆಂಗಸರಿಗೆ ನಿದ್ರೆದು ಹದಿನಾರು ಗುಣವೆಂದು ಹೇಳುವುದನ್ನು ಮರೆತಿದ್ದಾನೆಂದು ಯೋಚಿಸಿ, ಪ ಕಾಶ್ಯವಾಗಿ, ಇನ್ನು ಅಮ್ಮು ತೊಂದರೆ ಕೊಟ್ಟು ಪ್ರಯೋಜನವಿಲ್ಲ, ಪ್ರಮಪಟ್ಟಿದ್ದಾಳೆ ; ನೀನೂ ಹೋಗಿ ಮಲಗು ; ಈ ಹೊತ್ತು ಅತ್ಯಂತ ಶವವಾಗಿದೆ. ನಾನು ಹೋಗಿ ಸ್ವಲ್ಪ ವಿಶ್ರಮಿಸಿಕೊಳ ವೆನೆಂದನು. ರವಚರಣನು ಮಲಗುವುದಕ್ಕೆ ಹೊರಟು ಹೋದನು. ಇನ್ನೂ ಬೆಳಕು ಹರಿಯು ವುದಕ್ಕೆ ಬಹಳ ಹೊತ್ತಿತ್ತು, ಮನೆಯ, ಮನೆಯ ಹೊರಗೆ ನಗರವೂ, ಸರತ) ಶಬ್ಬ ಹೀನವಾಗಿ ಅಂಧ ಕಾರವಾಗಿತ್ತು, ಸತಾಪನು ನಿಶ್ಯಬ್ದವಾಗಿ ಮಹಡಿಯ ಮೇಲೆ ತನ್ನ ಶಯನಾಗಾರಾಭಿಮುಖವಾಗಿ ಹೋದನು. ಅಲ್ಲಿ ಹೋಗಿ ಬಾಗಿಲನ್ನು ತೆರೆದನು. ನೋಡಲಾಗಿ ಮಂಚದಮೇಲೆ ಮಲಗಿದ್ದಳು-ಿವಲಿನಿ ! ರಾಮಚರಣನು ಕೈವಲಿನಿ ಯನ್ನು ಪ್ರತಾಪನ ಸಯನ ಗೃಹದಲ್ಲಿ ಬಿಟ್ಟುಬಂದೆನೆಂದು ಹೇಳುವುದನ್ನು ಮರೆತಿದ್ದನು. ಪ್ರತಾಸನು ಎಂದು ಪ್ರಜ್ವಲಿಸುತಲಿದ್ದ ಪದೀಪದ ಬೆಳಕಿನಲ್ಲಿ ನೋಡಲಾಗಿ ಧವಳಾ ಕಾರವಾದ ಹಾಸಿಗೆಯ ಮೇಲೆ ನಿರ್ಮಲವಾದ ಪ್ರಸ್ತುತ ಕುಸುವುರಾತಿಯನ್ನು ಹರಡಿ ದಂತೆ ಕಣ್ಣ ಣಿವಾಗಿ ಕಣೋಸಿತು. ವರ್ಪಾ ತಾಲದಲ್ಲಿ ಗಂಗೆಯು ಸ್ಥಿರವಾದ ವಿಸ್ತ ರವಾದ ಕ್ಷೇತವಾರಿರಾದವೇಲೆ ಪ್ರಫುಲ್ಲವಾದ ಕ್ಷೇತಪದ್ಮರಾಶಿಯನ್ನು ತೇಲಿಬಿಟ್ಟ ಹಾಗಿತ್ತು, ಮನೋಮೋಹಿನಿಯಾದ ಸ್ಥಿರವಾದ ಶೋಭಾರಾತೆ ! ನೋಡಿ, ಪ್ರತಾಪನು ಕಣದೃಷ್ಟಿಯನ್ನು ಹಿಂದಿರುಗಿಸಲಾರದೆ ಹೋದನು. ರೂಪದಿಂದ ಮುಗ್ಧವಾಗಿಯಾ ಗಲಿ, ಅಥವಾ ಇಂದಿಯ ಪರವಶ್ಯತೆಯಿಂದಾಗಲಿ ನೋಡಲಿಲ್ಲ. ಅವನು ಅನ್ಯಮನನಾಗಿ ದೃಕಾರಣ ವಿಮುಗ್ಧನಾದವನಹಾಗೆ ದೃಷ್ಟಿಸಿ ನೋಡುತ್ತಿದ್ದನು. ಬಹಳ ಹಿಂದಿನ ದಿನ ಗಳ ಸಂಸ್ಕಾರಗಳು ಸ್ಮರಣೆಗೆ ಬಂದುವು. ಅಕಸ್ಮಾತ್ತಾಗಿ ಸ್ಮೃತಿಸಾಗರವು ಮಥಿತವಾಗಿ ತರಂಗಗಳ ಮೇಲೆ ತರಂಗಗಳೆದ್ದು ಬಂದರಮೇಲೊಂದು ಹೊಡೆಯುತಲಿದ್ದವು. - ಶೈವಲಿನಿಯು ನಿದ್ರೆ ಹೋಗುತ್ತಿರಲಿಲ್ಲ. ಕಣ್ಣು ಮುಚ್ಚಿಕೊಂಡು ತನ್ನ ಅವಸ್ಥೆ ಯನ್ನು ಕುರಿತು ಆಲೋಚಿಸುತಲಿದ್ದಳು, ಕಣ್ಣು ಮುಚ್ಚಿರುವುದನ್ನು ಕಂಡು ರಾಮಚರಣನು ಅವಳು ನಿದ್ರಿತೆಯಾಗಿದ್ದಾಳೆಂದು ಸಿದ್ದಾಂತ ಮಾಡಿಕೊಂಡನು. ಪ್ರಗಾ
ಪುಟ:ಚಂದ್ರಶೇಖರ.djvu/೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.