ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಂದ ಶೇಖರ. ನನ್ನ ಕಣ್ಣುಗಳಿದಿರಿಗೆ ಏತಕೆ ಪ್ರಕಾಶಗೊಳಿಸಿದೆ ? ಯಾವದನ್ನು ಬಂದು ತಡವೆ ಮರೆ ತಿದ್ದೆನೋ ಅದನ್ನು ಪುನಃ ಉದ್ದೀಪ್ತ ಮಾಡಿದೇತಕ್ಕೆ ? ನಾನು ನಿನ್ನನ್ನು ನೋಡಿದೆ ನೇತಕ್ಕೆ? ನೋಡಿದರೂ ನಿನ್ನನ್ನು ಹೊಂದಲಿಲ್ಲವೇತಕ್ಕೆ ? ಹೊಂದದಿದ್ದರೆ, ಸಾದುಲಿಲ್ಲ ವೇತಕ್ಕೆ ? ನಿನ್ನ ರೂಪದ ಧ್ಯಾನದಿಂದ ನನ್ನ ಮನೆಯು ಅರಣ್ಯವಾಗಿತ್ತೆಂದು ನೀನು ತಿಳಿಯಲಿಲ್ಲವೇನು ನಿನ್ನ ಸಂಬಂಧವು ವಿಚ್ಛಿನ್ನ ವಾದಮೇಲೆ ಪುನಃ ನಿನ್ನನ್ನು ಹೊಂದು ವೆನೆಂಬ ಆಶೆಯಿಂದಲೆ ನಾನು ಗೃಹತ್ಯಾಗಿನಿಯಾದೆನೆಂಬುದು ನಿನಗೆ ಗೊತ್ತಿಲ್ಲವೇನು ? ಇಲ್ಲದಿದ್ದರೆ, ನಾಸ್ಟ್ರನಿಗೆ ನಾನು ಯಾರು ? ಎಂದು ಹೇಳಿದಳು. ಕೇಳಿ ಪ್ರತಾಪನ ತಲೆಯಮೇಲೆ ತಿಡಿಲುಬಿದ್ದಂತಾಯಿತು. ಅವನು ವೃಶ್ಚಿಕದ ನಾದವನಹಾಗೆ ಪೀಡಿತನಾಗಿ ಬೇಗನೆ ಆ ಸ್ಥಳವನ್ನು ಬಿಟ್ಟು ಹೊರಟುಹೋದನು. ಆ ಸಮಯದಲ್ಲಿ ಮನೆಯ ಬಾಗಿಲಿನ ಹೊರಗೆ ಏನೋ ಬಹಳ ಗದ್ದಲವಾಗುತಲಿತ್ತು. '.* *