೬೭ M ಎರಡನೆಯ ಭಾಗ ತೋರಿಸುವುದು ವ್ಯರ್ಥವೆಂದು ತಿಳಿದು ಮಾತಿಲ್ಲದ ಎಲ್ಲವನ್ನೂ ಸಹಿಸಿಕೊಂಡನು. ನಾಯ ಕನು ತನ್ನ ಕೈಯಲ್ಲಿ ತಂದಿದ್ದ ಕೈಕೋಳ ವನ್ನು ಪ್ರತಾಪನ ಕೈಗೆ ತೊಡಿಸಿದನು. ಗೋಲ್ಯ ಸ್ಮನ್ನನು ನೆಲದಮೇಲೆ ಬಿದ್ದಿದ್ದ ರಾಮಚರನನ್ನು ತೋರಿಸಿ, ಅವನೊ ? ಎಂದನು. ರ್ಜಾನನ್ನಿನ ಅಪ್ಪಣೆದು ಪ್ರಕಾರ ಇಬ್ಬರು ಸಿಪಾಯಿಗಳು ಹೋಗಿ ರಾವು ಚರಣನನ್ನು ಎಳೆದುಕೊಂಡು ಹೋದರು. ಈ ಗದ್ದಲವನ್ನು ಕೇಳಿ ಕುಲಸಂಬಿ ಮತ್ತು ದಳನಿ ಎಚ್ಚರವಾಗಿ, ಬಹಳ ಭೀತ ರಾಗಿ ಕೊಠಡಿಯ ಬಾಗಿಲನ್ನು ಸ್ವಲ್ಪ ಓರೆ ಮಾಡಿ ಇದನ್ನೆಲ್ಲಾ ನೋಡಿದರು. ಮೆತ್ಥನ ಪಾರ್ಶ್ವದಲ್ಲಿಯೇ ಅವರು ಮಲಗಿದ್ದ ಕೊರಡಿ ಇತ್ತು. ಇಂಗ್ಲೀಪರು ಪ್ರತಾಪನನ್ನೂ ರಾಮುಚರನನ್ನೂ ಕರೆದುಕೊಂಡು ಮೆಟ್ಟಿ ನಿಂದ ಇಳಿಯುತ್ತಿರುವಾಗ ಸಿಪಾಯಿಯ ಕೈಯಲ್ಲಿದ್ದ ದೀಪದ ಬೆಳಕು ಅಕಸ್ಮಾತ್ತಾಗಿ ತೆರೆದಿದ್ದ ಬಾಗಿಲಲ್ಲಿ ಮುಖವನ್ನು ಇಟ್ಟುಕೊಂಡು ನೋಡುತ್ತಿದ್ದ ನೀಲಮಣಿಯ ಪ್ರಭೆಯುಳ್ಳ ಕಣ್ಣುಗಳ ಮೇಲೆ ಬಿದ್ದಿತು. ಏಕಾಉಲ್ಲನು ಆ ಕಣ್ಣುಗಳನ್ನು ನೋಡಿದನು, ನೋಡು ತಲೆ, ಮಾಸ್ಯರಸಾಹೆಬನ ಬೀಬಿಯೆಂದು ಕೂಗಿದನು. ಗೋಲ್ಯ ಸ್ಮನ್ನನು ನಿಜವೆ? ಎಲ್ಲಿ ? ಎ€ದು ಕೇಳಿದನು. ಬಕಾಉಲ್ಲನು ಮೇಲೆ ಹೇಳಿದ ಕೊರಡಿಯ ಬಾಗಿಲನ್ನು ತೋರಿಸಿ, ಇಲ್ಲಿ, ಎಂದನು. ರ್ಜಾಸನ್ನ ನೂ ಗೋಲ್ಡ ಸ್ಮವ್ರ ನೂ ಕೊಠಡಿಯೊಳಗೆ ಪ್ರವೇಶ ಮಾಡಿ ಕುಲಸಂ ಮತ್ತು ದಳನಿ ಇವರನ್ನು ಕುರಿತು, ನೀವು ನಮ್ಮ ಜತೆಯಲ್ಲಿ ಬನ್ನಿರಿ ಎಂದನು. ಹೆಂಗಸರಿಬ್ಬರೂ ಮಹಾ ಭೀತರಾಗಿ ಲುಪ್ತ ಬುದ್ಧಿಯುಳ್ಳವರಾಗಿ ಅವರ ಸಂಗಡ ಹೋದರು. ಆ ಮನೆಯೊಳಗೆ ರೈವಲಿನಿಯು ಒಬ್ಬಳೆ ಉಳಿದುಕೊಂಡಳು. ಅವಳ ನಡೆದು ದನ್ನೆಲ್ಲಾ ನೋಡಿದಳು. M.
ಪುಟ:ಚಂದ್ರಶೇಖರ.djvu/೭೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.