ಎಂಟನೆಯ ಪರಿಚ್ಛೇದ. ಸಂಪದ ವಿಚಿತ್ರವಾದ ಗತಿ. ಯ ವನ ಕನೈಯರು ಹೇಗೆ ಬಾಗಿಲನ್ನು ಸ್ವಲ್ಪಮಟ್ಟಿಗೆ ತೆರೆದು ಕೊಠಡಿ ಯೊಳಗಿನಿಂದ ನೋಡುತಲಿದ್ದರೆ, ಶೈವಲಿನಿಯೂ ಹಾಗೆಯೇ ನೋಡುತಲಿದ್ದಳು, ಮವರೂ ಹೆಂಗಸರು, ಅದು ಕಾರಣ * ಜಾತಿಗೆ ಸುಲಭವಾದ ಕುತೂಹಲದಿಂದ ಪೀಡಿತರಾಗಿದ್ದರು. ಮರು ಮಂದಿಯ ಭಯದಿಂದ ಕಾತರರಾಗಿದ್ದರು. ಭಯಕ್ಕೆ ಧರ್ಮವೇನೆಂದರೆ :-ಭಯಾನಕವಾದ ವಸ್ತುವನ್ನು ಪುನಃ ಪುನಃ ಅಪೇಕ್ಷಿಸುವುದು. ಶೈವಲಿನಿಯು ಆದ್ರೂಪಾಂತವಾಗಿ ಎಲ್ಲವನ್ನೂ ನೋಡಿದಳು. ಎಲ್ಲರೂ ಹೊರಟು ಹೋದಮೇಲೆ ಮನೆಯಲ್ಲಿ ತಾನೊಬ್ಬಳ ಆದುದನ್ನು ಕಂಡು, ಹಾಸಿಗೆಯಮೇಲೆ ಕುಳಿತುಕೊಂಡು ಯೋಚನೆಯನ್ನು ಮಾಡಲಾರಂಭಿಸಿದಳು, ಈಗ ಏನುಮಾಡಲಿ ? ಒಬ್ಬಳೇ ಆದನು, ಅದರಿಂದ ನನಗೆ ಭಯವೇನು ? ಈ ಪೃಥಿವಿಯಲ್ಲಿ ನನಗೆ ಭಯವಿಲ್ಲ-ಮೃತ್ಯುವಿಗಿಂತಲೂ ಹೆಚ್ಚು ವಿಸತ್ತರವಾದುದು ಯಾವದೂ ಇಲ್ಲ, ಯಾ ವಳು ಹಗಲೂ ರಾತ್ರಿ, ನುರಣವನ್ನು ಕೋರುತ್ತಿರುವ ಅಂತಹವಳಿಗೆ ಯಾತರ ಭಯ ? ನನಗೆ ಆ ಸಾವು ಉಂಟಾಗಲಿಲ್ಲವೇತಕ್ಕೆ ? ಆತ್ಮಹತ್ಯೆ ಮಾಡಿಕೊಳು ವದು ಬಹಳ ಸುಲಭವಾದುದು-ಆದರೆ ಯಾರಿಗೆ ಸುಲಭ ? ಇಷ್ಟು ದಿನಗಳೂ ನೀರಿನಲ್ಲಿಯೇ ವಾಸವಾಗಿದ್ದನು. ಹಾಗಿದ್ದರೂ ನೀರಿನಲ್ಲಿ ಬಿದ್ದು ಮುಣುಗಿ ಸಾಯ ಲಾರದೆ ಹೋದೆನು, ರಾತ್ರಿ ಎಲ್ಲರೂ ಮಲಗಿದ್ದಾಗ ಹಡಗಿನಿಂದ ಮೆಲ್ಲಮೆಲ್ಲಗೆ ಇಳಿದು ಹೋಗಿ ನೀರಿನಲ್ಲಿ ಧುಮುಕಿದ್ದರೆ ಯಾರು ಬೇಡವೆನ್ನು ತಿದ್ದರು ? ಯಾರು ಹಿಡಿದು ನಿಲ್ಲಿ ಸುತಲಿದ್ದರು _ ಒಂದುವೇಳೆ ಪಹರೆಯವರು ಇದ್ದರು, ಆದರೆ ನಾನು ಯಾವಸ ಯು ತ್ನವನ್ನೂ ಮಾಡಲಿಲ್ಲವ ? ಸಾಯುವುದಕ್ಕೆ ಇತ್ಮವೇ ಹೌದು-ಆದರೆ ಸಾಯು ವುದಕ್ಕೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಆಗ ನನಗೇನೊ ಆಸೆಯಿತ್ತು-ಆಕೆ ಯಿದ್ದ ಮಾತ್ರಕ್ಕೆ ಮನುಷ್ಯನು ಸಾಯಲಾರನು. ಆದರೆ ಈಹೊತ್ತೊ ? ಇಂದು ಸಾಯ ಬೇಕಾದ ದಿನವೇ ಹೌದು, ಆದರೆ ಪ್ರತಾಪನನ್ನು ಕಟ್ಟಿ ಹಿಡಿದುಕೊಂಡು ಹೋಗಿದ್ದಾರೆ. ಪ್ರತಾಪನಿಗೆ ಏನಾಗುವುದೋ ಅದನ್ನು ತಿಳಿದುಕೊಳ್ಳದೆ ಸಾಯಲಾರೆನು, ಪ್ರತಾಪ ನಿಗೆ ಏನಾಗುವುದು ? ಏನಾದರೇನು ? ಅದರಿಂದ ನನಗೇನಾಗಬೇಕು ? ಪ್ರತಾಪನಿಗೂ ನನಗೂ ಏನು ಸಂಬಂಧ ? ನಾನು ಅವನ ಕಣ್ಣಿಗೆ ಸಾಸಿವೆಯಾಗಿ ಕೂತಿದ್ದೇನೆ ಅವನು ನನಗೆ ಯಾರು ? ಅವನು ನನಗೆ ಯಾರೂ, ನನಗದು ಗೊತ್ತಾಗುವುದಿಲ್ಲ.
ಪುಟ:ಚಂದ್ರಶೇಖರ.djvu/೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.