ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭! ಚಂದ್ರಶೇಖರ. ಶೈವಲಿನಿ--ಆಕೆ ಅಲ್ಲಿ ಇಲ್ಲ. ನಬಾಬ-ಹಾಗಾದರೆ ಆಕೆ ಎಲ್ಲಿ ? ಗೋಲ್ಯ ಸ್ಮನ್ನ ನೂ ರ್ಜಾಸನ್ನ ನೂ ದಳನೀ ಮತ್ತು ಕುಲಸಮನನ್ನು ಪ್ರತಾಪನ ಮನೆಯಿಂದ ಕರೆದುಕೊಂಡು ಹೋದಾಗ ಕೈವಲಿನಿಯು ಅದನ್ನು ನೋಡಿದ್ದಳು, ಅವ ರಿಬ್ಬರೂ ಯಾರೆಂಬುದು ಅವಳಿಗೆ ಗೊತ್ತಿರಲಿಲ್ಲ. ಅವರಿಬ್ಬರೂ ಚಾಕರರು ಅಥವಾ ನರ್ತಕಿಯರಾಗಿರಬೇಕೆಂದು ತಿಳಿದುಕೊಂಡಿದ್ದಳು. ಆದರೆ ನಬಾಬನ ನೃತ್ಯರು ಬಂದು ಅವಳನ್ನೇ ಬೇಗಂ ಎಂದು ಭಾವಿಸಿ ನಬಾಬರು ಕರೆತರಬೇಕೆಂದು ಕಳುಹಿಸಿದ್ದಾರೆಂದು ಅವಳಿಗೆ ಹೇಳಿದಾಗ ಪ್ರತಾಪನ ಮನೆಯಿಂದ ಬಳ್ಳಲ್ಪಟ್ಟವಳು ಬೇಗಂ ಆಗಿರಬೇಕೆಂದು ತಿಳಿದಿದ್ದಳು. ನಬಾಬನು ಶೈವಲಿನಿಯ ಉತ್ತರವನ್ನು ಕೇಳಿ, ನೀನು ಆಕೆಯನ್ನು ನೋಡಿದೆಯಾ? ಎಂದು ಕೇಳಿದನು. ಶೈವಲಿನಿ-ನೋಡಿದ್ದೇನೆ. ನಬಾಬ-ಎಲ್ಲಿ ನೋಡಿದೆ ? ರೈವಲಿನಿ-ನಾನು ನೆನ್ನೆ ರಾತ್ರಿ ಇದ್ದೆಡೆಯಲ್ಲಿ. ನವಾಬ ಅದೆಲ್ಲಿ ? ಪ್ರತಾಪರಾಯನ ಗೃಹದಲ್ಲಿದೆ ? ಕೈವಲಿನಿ-ಹೌದು, ಜಹಾಪನಾ ! ನಬಾಬ-ಬೇಗಂ ಅಲ್ಲಿಂದ ಎಲ್ಲಿಗೆ ಹೋದಳು, ಗೊತ್ತುಂಟೆ ? ಸೈನಲಿನಿ-ಇಬ್ಬರು ಇಂಗ್ಲೀಷರು ಅವರನ್ನು ಹಿಡಿದುಕೊಂಡು ಹೋದರು. ನವಾಬ-.ಏನು ಹೇಳಿದೆ ! ಕೈವಲಿನಿಯು ಮೊದಲು ಹೇಳಿದುತ್ತರವನ್ನೇ ಪುನರುಕ್ತಿಯಾಗಿ ಹೇಳಿದಳು, ನಬಾ ಬನು ವನವಾಗಿದ್ದನು. ಅಧರವನ್ನು ದಂಶನ ಮಾಡಿ ಸ್ಮಶವನ್ನು ಉತ್ಪಾಟನ ಮಾಡಿದನು. ಗುರಗಣಖಾನನನ್ನು ಕರೆಯುವಹಾಗೆ ಅಪ್ಪಣೆ ಕೊಟ್ಟನು. ಕೈವಲಿನಿ ದನ್ನು ಕುರಿತು, ಇಂಗ್ಲೀಜರು ಏತಕ್ಕೆ ಬೇಗನನ್ನು ಕರೆದುಕೊಂಡು ಹೋದರು, ಗೊತ್ತುಂಟೆ ? ಎಂದನು. ಕೈವಲಿನಿ-ಇಲ್ಲ. ನಬಾಬ-ಆಗ ಪ್ರತಾಪನು ಎಲ್ಲಿದ್ದನು ? ಕೈವಲಿನೀ-ಅವನನ್ನೂ ಸಂಗಡ ಹಿಡಿದುಕೊಂಡು ಹೋದರು. ನಬಾಬ - ಅವನ ಮನೆಯಲ್ಲಿ ಮತ್ತಾರಿದ್ದರು ? ಶೈವಲಿನೀ- ಒಬ್ಬ ಚಾಕರನು ಇದ್ದನು. ಅವನನ್ನೂ ಹಿಡಿದುಕೊಂಡು ಹೋದರು. ನಬಾಬ-ಏತಕ್ಕೆ ಹಿಡಿದುಕೊಂಡು ಹೋದರು, ಗೊತ್ತೆ ?