ಮೂರನೆಯ ಭಾಗ. ರ್೭ ಗುರಗಣರ್ಖಾ-ಅವರ ಆಯುಧದ ಹಡಗಿನ ಸಂಗಡ ಬಂದಿದ್ದ ಒಬ್ಬ ಇಂಗ್ಲೀಪರ ವನನ್ನು ಯಾರೋ ಖನಿ ಮಾಡಿದ್ದಾರೆ. ಅಮಿದುಳನು, ನಮ್ಮವರೇ ಹೊಡೆದಿದ್ದಾ ರೆಂದು ಹೇಳುತ್ತಾನೆ. ಅದಕ್ಕೋಸ್ಕರ ಕೋಪಗೊಂಡು, ಇಲ್ಲಿದ್ದರೆ ಪ್ರಾಣದಿಂದಿರು ವುದು ಸಂಶಯವೆಂದು ಹೇಳುತ್ತಾನೆ. ನಬಾಬ-ಯಾರು ೩ನಿ ಮಾಡಿದರಂತೆ ? ಗುರಗಣರ್ಖಾ-ಪ್ರತಾಪರಾಯನೆಂಬೊಬ್ಬನು ಖನಿ ಮಾಡಿದನಂತೆ. ನಬಾಬ-ಒಳ್ಳೆಯ ಕೆಲಸವನ್ನು ಮಾಡಿದ. ಅವನನ್ನು ನೋಡಿದರೆ ಅವನಿಗೆ ಖಿಲ್ಲ ತನ್ನು ಕೊಡಬೇಕು, ಪ್ರತಾಪರಾಯನು ಎಲ್ಲಿ ? ಗುರಗಣರ್ಖಾ.-ಅವರುಗಳನ್ನೆಲ್ಲಾ ಹಿಡಿದು ಸಂಗಡ ತೆಗೆದುಕೊಂಡು ಹೋಗಿ ದ್ದಾನೆ. ಎಲ್ಲರನ್ನೂ ಸಂಗಡ ಅಜೆನಾಬಾದಿಗೆ ತೆಗೆದುಕೊಂಡುಹೋದನು. ಚೆನ್ನಾಗಿ ಗೊತ್ತಾಗಲಿಲ್ಲ. ನಬಾಬ-ಇದುವರೆಗೂ ಇದನ್ನೆಲ್ಲಾ ನನಗೆ ತಿಳಿಸಲಿಲ್ಲವೇತಕ್ಕೆ ? ಗುರಗಣರ್ಖಾ...ನನಗೆ ಈಗತಾನೇ ಗೊತ್ತಾಗುದು. ಈ ಮಾತು ಸುಳ್ಳು, ಗುರಗಣಖಾನನಿಗೆ ಆದ್ರೂಪಾಂತವೂ ಗೊತ್ತು. ಅವನಿಗೆ ತಿಳಿಸದೆ' ಅಮಿದುಳನು ಮಾಂಗೀರನ್ನು ಯಾವಾಗಲೂ ಬಿಟ್ಟು ಹೋಗಲಾರ. ಆದರೆ ಗುರಗಣಖಾನನಿಗೆ ಎರಡು ಉದ್ದೇಶಗಳು. ಮೊದಲನೆಯದು, ದಳನಿಯು ಮಾಂಗೀರ ನಲ್ಲಿರದೆ ಬೇರೆ ಸ್ಥಳ ದಲ್ಲಿರಬೇಕಾಗಿದ್ದುದು ಆವಶ್ಯಕ. ಎರಡನೆಯದು, ಅಮಿಯಟನ್ನು ಕೈಯಲ್ಲಿಟ್ಟುಕೊಂಡಿದ್ದರೆ ಒಳ್ಳೆಯದು, ಮುಂದೆ ಅವನಿಂದ ಉಪಕಾರವಾಗಬೇಕು. - ನವಾಬನು ಗುರಗಣಖಾನನಿಗೆ ಅಪ್ಪಣೆ ಕೊಟ್ಟು ಕಳುಹಿಸಿದನು. ಗುರಗಣಖಾ ನನು ಹೋಗುವಾಗ, ನವಾಬನು ಅವನನ್ನು ವಕ್ರ ದೃಷ್ಟಿಯಿಂದ ನೋಡಿದನು, ಅದರ ಅರ್ಥವೇನೆಂದರೆ, ಯುದ್ಧವಾಗಿ ಪೂರೈಸುವವರೆಗೂ ನಿನ್ನನ್ನು ಕುರಿತು ಏನೂ ಹೇಳುವು ದಿಲ್ಲ; ಯುದ್ದ ಕಾಲದಲ್ಲಿ ನೀನು ನನಗೆ ಮುಖ್ಯವಾದ ಅಸ್ತ್ರ ವಾಗಿರುತ್ತಿ, ಅನಂತರ ದಳನೀ ಬೇಗನಿನ ಮಣವನ್ನು ನಿನ್ನ ರಕ್ತದಿಂದ ಹರಿಸಬೇಕಾದೀತು, ಎಂಬ ಅರ್ಥ ವನ್ನು ಆ ವಕ್ರದೃ~ಯಿಂದ ಸೂಚಿಸಿದನು. ಅನಂತರ ನಬಾಬನು ಮಾರನುನನ್ನಿಯನ್ನು ಕರೆಯಿಸಿ, ಮುರಸಿದಾಬಾದನಲ್ಲಿ ರವ ವಹಮ್ಮದ ಅಲ್ಲಿಖಾನನಿಗೆ ಅಮಿಯತಿನ ಹಡಗು ಮುರದಾಬಾದಿಗೆ ಬಂದಕೂ ತಲೆ ಅವನನ್ನು ಅಲ್ಲಿ ಹಿಡಿದು, ಅವನ ಸಂಗಡ ಇರುವ ಬಂದಿಜನರನ್ನು ಆ ಕೂಡಲೆ ಬಿಡುಗಡೆ ಮಾಡಿ ನಮ್ಮ ಹುಜೂರಿಗೆ ರವಾನಿಸಬೇಕೆಂದೂ, ಪ್ರತ್ಯಕ್ಷವಾಗಿ ಬಾವ ಯುದ್ಧವನ್ನೂ ಮಾಡದೆ ಇರಲದಿಂದ ಹಿಡಿಯಬೇಕೆಂದೂ ಪರವಾನೆಯನ್ನು ಬರೆದು ಕಳುಹಿಸೆಂದು ಅಪ್ಪಣೆಮಾಡಿದುದಲ್ಲದೆ, ಪರವನೆಯನ್ನು ತೆಗೆದುಕೊಂಡು ಹೋಗತಕ್ಕೆ ವನು ನದಿಯ ತೀರದಲ್ಲಿಯೇ ಹೋದರೆ ಜಾಗ್ರತೆ ತಲಪುವನೆಂದು ಹೇಳಿದನು.
ಪುಟ:ಚಂದ್ರಶೇಖರ.djvu/೮೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.