ನಾಲ್ಕನೆಯ ಪರಿಚ್ಛೇದ. ಅಳುವು. 1ಳದಿಂಗಳು ಹಟ್ಟಿತು. ಗಂಗೆದು ಎರಡು ಪಾರ್ಶ್ವಗಳಲ್ಲಿ ಬಹು ದೂರ ವಿಸ್ತ್ರತವಾದ ವರಳು ಮದುವಾದ ಭೂಮಿ, ಚಂದ್ರಕಿ ರಣದಲ್ಲಿ ಆ ಮರಳುಗುಡ್ಡಗಳ ಶ್ರೇಣಿದು ಅಧಿಕತರವಾದ ಧವಳ ಕಾಂತಿಯನ್ನು ಧಾರಣಮಾಡಿತ್ತು. ಗಂಗೆಯ ಜಲವು ಚಂದ್ರ ಕಿರಣದಲ್ಲಿ ಪ್ರಗಾಢತರವಾದ ನೀಲವರ್ಣವನ್ನು ಹೊಂದಿ ಘನನೀಲಿ ವಾಗಿತ್ತು, ತಟದಲ್ಲಿರುವ ವನರಾಜಿಯು ಘನಶ್ಯಾವವಾಗಿತ್ತು, ಮೇಲೆ ಆಕಾಶವು ರತ್ನ ಖಚಿತವಾಗಿ ನೀಲವಾಗಿತ್ತು, ಇಂತಹ ಸಮಯದಲ್ಲಿ ವಿಸ್ಕೃತ ಜ್ಞಾನದಲ್ಲಿ ಮನಸ್ಸು ಒಂದೊಂದು ತಡವೆ ಚಂಚಲವಾಗುವುದು, ನದಿಯು ಅನಂತ-ಎಷ್ಟು ದೂರ ನೋಡಿ ದರೂ ಅಂತ್ಯವೇ ಕಾಣಿಸದು. ಮಾನವನ ಅದೃಷ್ಯದಹಾಗೆ ದೃಷ್ಟಿಯು ಅಸ್ಪಷ್ಟ ವಾಗಿ ಭವಿಷ್ಯತ್ತಿನಲ್ಲಿ ಸೇರಿಹೋಗುವುದು, ಕೆಳಗೆ ನದಿ ಯು ಅನಂತ. ಮೇಲೆ ಆಕಾ ಶವು ಅನಂತ, ಪಾರ್ಶ್ವಗಳಲ್ಲಿ ಸೈಕತಭೂಮಿಯು ಅನಂತ, ತೀರದಲ್ಲಿ ವೃಕ್ಷಪ್ರೇಣಿಯು ಅನಂತ, ಇಂತಹ ಸಮಯದಲ್ಲಿ ಯಾವ ಮನುಷ್ಯನು ತಾನೇ ತನ್ನನ್ನು ಗಣನೆ ಮಾಡಿ ಕೊಳ್ಳುವನು ? ಈ ನದಿಯ ಉಪಕೂಲದಲ್ಲಿ ತರಣಿಗಳನ್ನು ಕಟ್ಟಿರುವ ಮರಳು ಭೂಮಿಯಲ್ಲಿರುವ ವರನ ಬಂದು ಹರಳಿಗಿಂತಲೂ ಮನುಷ್ಯನು ಹೆಚ್ಚು ಗೌರವವುಳ ವನೇನು ? ಈ ಹಡಗುಗಳಲ್ಲಿ ಒಂದು ದೊಡ್ಡ ಹಡಗು ಇತ್ತು. ಅದರಮೇಲೆ ಸಿಪಾಯಿಗಳ ಪಹರೆ. ಇಬ್ಬರು ಸಿಪಾಯಿಗಳು ಕಲ್ಲಿನ ಬೊಂತಿಗಳಂತೆ ಬಂದೂಕನ್ನು ಹೆಗಲಿನ ಮೇಲೆ ಏರಿಸಿಕೊಂಡು ಸ್ಥಿರವಾಗಿ ನಿಂತಿದ್ದರು. ಒಳಗೆ ೩ ಗೃವಾದ ಸ್ಪಟಿಕದ ದೀಪಗಳ ಬೆಳಕಿನಲ್ಲಿ ನಾನಾ ವಿಧವಾದ ಮಹರ್ಘವಾದ ಆಸನಗಳು, ಚಿತ್ರಗಳು, ಪ್ರತಿಮೆಗಳು ಶಯ್ಯ ಮುಂತಾದವುಗಳು ಪ್ರಕಾತಿಸುತಲಿದ್ದವು, ಒಳಗೆ ಕೆಲವು ಜನ ಸಾಹೆಬರು. ಅವ ರಲ್ಲಿಬ್ಬರು ಚದುರಂಗವನ್ನು ಆಡುತಲಿದ್ದರು. ಒಬ್ಬನು ಸುರಾಪಾನ ಮಾಡುತಲಿ ದನು. ಅವನು ಏಳುತ್ತ, ಬೀಳುತ್ತ, ಹೊಯಿದಾಡುತಲಿದ್ದನು. ಒಬ್ಬನು ವಾದ್ಯವನ್ನು ನುಡಿಸುತಲಿದೆ ನು. ಆಕಸ್ಮಾತ್ತಾಗಿ ಎಲ್ಲರೂ ಚಕಿತರಾದರು. ಒಂದು ವಿಕಟವಾದ ಕಂದನ ಧ್ವನಿ ಯು ಆ ರಾತ್ರಿಯ ನಿಶ್ಯಬ್ದವನ್ನು ಸೀಳಿ ಕೊಂಡು ಬಂದಹಾಗೆ ಕೇ`ಸಿತು. ಅಮಿಯುಟನು ರ್ಜಾಸನ್ನ ನಿಗೆ ಆಟದಲ್ಲಿ ಪೇದೆಮಾತು ಮಾಡುತ್ತ, ಅದೇನು ಅದು ! ಎಂದನು.
ಪುಟ:ಚಂದ್ರಶೇಖರ.djvu/೮೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.