ಮೂರನೆದು ಭಾಗ, «೩ ಶೈವಲಿನೀ-ನಿನ್ನ ಮೇಲಿನ ಆಣೆ ಹೇಳು, ಏನು ಹೇಳಬೇಕು ? ಪ್ರತಾಪ ಶಪಥಮಾತು-ನನ್ನನ್ನು ಮುಟ್ಟಿ ಶಪಥವಾಡು -ನನ್ನ ಶುಭಾಶುಭ ಗಳಿಗೂ ಮರಜೀವನಗಳಿಗೂ ನೀನೇ ಕಾರಣ. ಶೈವಲಿನೀ-ನಿನ್ನನ್ನು ಮುಟ್ಟ ಶಪಥಮಾಡುತ್ತೇನೆ--ನೀನು ಏನು ಹೇಳುವೆಯೋ ಇಹ ಜನ್ಮದಲ್ಲಿ ಹಾಗೆ ಮಾಡುವೆನು. - ಪ್ರತಾಪ - ಶಪಥಮಾಡು, ಏನೆಂದರೆ:-ಇಸ ಜನ್ಮದಲ್ಲಿ ನಾನು ನಿನ್ನ ಸಹೋದರ ನೆಂದೂ, ನೀನು ನನ್ನ ಸೋದರಿಯೆಂದೂ, ನೀನು ನನ್ನ ಮಗ ಗೆ ಸಮವೆಂದೂ, ನಾನು ನಿನಗೆ ತಂದೆಗೆ ನವಾನನೆಂದೂ, ನಿನಗೂ ನನಗೂ ಬೇರೆ ಸಂಬಂಧವಿಲ್ಲವೆಂದೂ, ಈ ಜನ್ಮ ದಲ್ಲಿ ನೀನು ನನ್ನ ನ್ನು ಬೇರೆ ದೃಷ್ಟಿಯಿಂದ ನೋಡುವುದಿಲ್ಲವೆಂದೂ, ಬೇರೆ ದೃಷ್ಟಿ ಯಿಂದ ಭಾವಿಸುವುದಿಲ್ಲವೆಂದೂ ಶಪಥಮಾಡು. ಕೈವಲಿನೀ-ಈ ಪ್ರಪಂಚದಲ್ಲಿ ನನ್ನ ಹಾಗೆ ದುಃಖಿಯಾದವಳು ಯಾರು ಇದ್ದಾರೆ, ಪ್ರತಾಪ ? ಪ್ರತಾಪ-ನಾನು ! ಶೈವಲಿನೀ-ನಿನಗೆ ಇಶ್ಚರವಿದೆ -ಎಲಿವಿದೆ -ಕೀರ್ತಿಯಿದೆ • ಬಂಧುಬಳಗವಿದೆ-ಭರ ವಸೆಯಿದೆ-ರೂಪಸಿಯಿದ್ದಾಳೆ..ನನಗ ಯಾರಿದ್ದಾರೆ, ಪ್ರತಾಪ ? ಪ್ರತಾಪ-ವಾರೂ ಇಲ್ಲ -ಹಾಗಾದರೆ ಬಾ, ಇಬ್ಬರೂ ಮುಣುಗಿಹೋಗೋಣ. ಶೈವಲಿನಿಯು ಸ್ವಲ್ಪ ಹೊತ್ತು ಯೋಚಿಸಿದಳು, ಯೋಚನೆಯ ಫಲದಿಂದ ಜೀವನ ನದಿಯಲ್ಲಿ ಇದುವರೆಗೂ ಇದ್ದುದಕ್ಕೆ ವಿಪರೀತವಾಗಿ ಮೊದಲನೆಯ ತರಂಗವು ಎದ್ದಿತು. ಅವಳು, ನಾನು ಸುಯುವೆನು, ಅದರಿಂದ ನಮ್ಮವೇನು ? ಆದರೆ ನನಗೋಸ್ಕರ ಪ್ರತಾಪನು ಸಾಯಿಲೇತಕ್ಕೆ ? ಎಂದಂದುಕೊಂಡು, ಪ್ರಕಾಶ್ಯವಾಗಿ, ದಡಕ್ಕೆ ಹೊರಡು, ಎಂದಳು. ಪ್ರತಾಪನು ಅವಲಂಬನವನ್ನು ಬಿಟ್ಟು ಮುಣುಗಿದನು. ಆಗ ಪ್ರತಾಪನ ಕೈಯಲ್ಲಿ ಶೈವಲಿನಿಯು ಕೈಲಿತ್ತು ಶೈವಲಿನಿಯು ಹಿಡಿದೆಳ ದಳು. ಪ್ರತಾಪನು ಎದ್ದನು. ಶೈವಲಿನೀ-ನಾನು ಶಪಥವನ್ನು ಮಾಡುವೆನು. ಆದರೆ ನೀನು ಬಂದು ತಡವೆ ಯೋಚಿಸಿ ನೋಡು, ನನ್ನ ಸರಸ್ವವನ್ನೂ ಅಪಹರಿಸುತ್ತಿ, ನಾನು ನಿನ್ನನ್ನು ಅಪೇ ಕ್ಷಿಸುವುದಿಲ್ಲ, ನಿನ್ನ ಸ್ಮರಣೆಯನ್ನು ಬಿಡಲೇತಕ್ಕೆ ? ಪ್ರತಾಪನು ಕೈಬಿಟ್ಟನು. ಶೈವಲಿನಿಯು ಪುನಃ ಹಿಡಿದುಕೊಂಡಳು. ಆಗವಳು ಅತಿ ಗಂಭೀರವಾದ ಸ್ಪಷ್ಟವಾದ, ಬಾಪ್ಪದಿಂದ ವಿಕೃತವಾದ ಸ್ವರದಿಂದ ಹೇಳತೊಡಗಿ ದಳು. ಪ್ರತಾಪ ! ಕೈಯನ್ನು ಭದ್ರವಾಗಿ ಹಿಡಿದುಕೊಂಡಿರು, ಪ್ರತಾಪ ! ಕೇಳು, ನಿನ್ನನ್ನು ಸ್ಪರ್ಶಮಾಡಿಕೊಂಡು ರಸಘಮಾಡುತ್ತೇನೆ. ನಿನ್ನ ಜೀವನ ಮರಣಗಳಿಗೂ,
ಪುಟ:ಚಂದ್ರಶೇಖರ.djvu/೯೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.