ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಷ್ಣು ಪುರಾಣ [ಅಧ್ಯಾಯ ವೈಶಾಲಿಯೆಂಬ ಪಟ್ಟಣವಂ ನಿರ್ಮಿಸಿದನು. ಆ ರಾಯಂಗೆ ಹೇಮಚಂದ್ರ ನೆಂಬ ಕುಮಾರಂ ಜನಿಸಿದಂ, ಆತಂಗೆ ಚಂದ್ರನೆಂಬ ಕುಮಾರಂ, ಚಂದ್ರಂಗೆ ಧಮಾಕ್ಷರಿ, ಆತಂಗೆ ಸೃಂಜಯನೆಂಬ ರಾಯಂ, ಸ್ಪಂಜಯನಿಂ ಸಹದೇವಂ, ಅವನಿಂ ಕೃಶಾಶ್ಚಂ, ಅವನಿಂ ಹತ್ತು ಅಶ್ವಮೇಧಯಾಗವ ಮಾಡಿದ) ಸೊ ಮದಂ, ಆತನ ಕುಮಾರಂ ಜನಮೇಜಯಂ', ಜನಮೇಜಯನಿಂ ಸುಮತಿ. ಈರಾಯರುಗಳು ವಿಶಾಲನೆಂಬ ರಾಯನ ವೈಶಾಲೀ ಪಟ್ಟಣದಲ್ಲಿ 'ಸಂಪ್ರದಾ ಯದವರು.ಈ ಯರ್ಥದಲ್ಲಿ ಈಶ್ಲೋಕವು ಗಾನಮಾಡಲ್ಪಡುತಲಿದ್ದೀತು. - (ಶ್ಲೋ1 ತೃಣಬಿ೦ಗೋಃ ಪ್ರಸಾದೇನ ಸ್ವರೇ ವೈಶಾಲಿಕಾ, ನೃಪಾ$1. - ದೀರ್ಘಾಯುಷೋ ಮಹಾತ್ಮಾನೋ ವೀರವಂತಿಧಾರ್ಮಿಕಾ81) ಈಶ್ಲೋಕದ ತಾತ್ಸರ್ಯವು ತೃಣಬಿಂದುರಾಯನ ಪ್ರಸಾದದಿಂ ಸಮ ಸ್ತವಾದ ವೈಶಾಲೀನಗರದ ರಾಯರುಗಳು ದೀರ್ಘಾಯುಸ್ಸನುಳ್ಳ ಮಹಾ ತರು, ಪರಾಕ್ರಮಶಾಲಿಗಳು, ಧಾರ್ಮಿಕರು ಆಗಿದ್ದರು-ಎಂದು, ಪರ್ಯಾತಿ ರಾಯಂಗೆ ಸುಕನ್ಯಾ ಎಂಬ ಕನ್ಯಯಾದಳು. ಆಯಕ್ಕನನ್ನು ಚ್ಯವನನೆಂಬ ಮುನೀಶರನು ವಿವಾಹವ ಮಾಡಿಕೊಂಡನು. ಶರ್ಖಾತಿ ರಾಯಂಗೆ ಆನ ರ್ತ'ನೆಂಬಾತಂ ಪುತ್ರನಾದಂ, ಆನರ್ತ೦ಗೆ ರೇವತರಾಯಂ; ಆನರ್ತದೇಶಾಧಿ ಪತಿಯಾಗಿ ಕುಶಸ೪ಯೆಂಬ ಪಟ್ಟಣವಂ ಆಶ್ರಯಿಸಿದವನಾದನು, ರೇವತ ರಾಯಂಗೆ ರೈವತನೆಂಬ ಕುಮಾರನು, ರೈವತಂಗೆ ನೂಲುಮಂದಿ ಕುವಾ ರರೊಳು ಜೈಷ್ಣನು ಕಕುತಪ್ರಿಯನೆಂಬಾತನಾದಂ, ಆರೈವತರಾಯನು ರೇವತಿಯೆಂಬ ಕನ್ನೆಗೆ ಪ್ರತಿಯಾಗತಕ್ಕವನಾರು ಎಂದು ಕೇಳಬೇಕು ಎಂಬುದ°ಂದ ಬ್ರಹ್ಮದೇವರ ಬಳಿಗೆ ಸತ್ಯಲೋಕವನೆಯ್ದಿ ದನು. ಅಲ್ಲಿ ಹಾಹಾ ಹೂಹ ಎಂಬ ಗಂಧರ್ವರು ಅತಿತಾನವೆಂಬ ದಿವ್ಯಗಾಂಧರ್ವ ಗಾನವನು ಹಾಡುತಿರಲಾಗಿ ಅದನು ಕೇಳುತಿದ್ದಂಥವನಾದಂ, ಗಾನಕ ವ ಆದಿಂ ತದಾಸಕ್ಕಚಿತ್ತನಾಗಿ ಅನೇಕಯುಗಪರಿವೃತ್ತಿಯಾದಲ್ಲಿಯೂ ಮು ಇ--- ---- ಪಾ-1. ಅವನಿಂ ಸೋಮದತ್ತಂ, ಅವನಿಂ ವರ್ಧನಂ, ವರ್ಧನನಿಂ ದಶಾ ಶ್ವಮೇಧಿಗಳಾದ ರಾಯರುಗಳ ಮಧ್ಯದಲ್ಲಿ ಆಜಹಾರನೆಂಬಾತಂ, ಆತನ ಕುಮಾರಂ ಜನಮೇಜಯಂ~ ಎಂದು ಈ ಮಾತೃಕೆಯ ಪಾಠ. ವಿವರಣ-2, ಸಂಪ್ರದಾ೦ದವರು = ಒಬ್ಬೊಬ್ಬರಾಗಿ ಆಳಿದವರು ಎಂದರ್ಥ.