ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಓ € ಬ , ೨ ). ಬ ವಿಷ್ಣು ಪುಕಾಣ - [ಅಧ್ಯಾಯ ಶುಕೂ ಸೆಮಾಡಲ್ಪಟ್ಟವನಾದ ಕಾರಣ ವರವ ಕೊಟ್ಟನು.-ಕೇಳಿ, ನಿಯರುಗಳಿರಾ ? ನೀವು ಮಾಡಿದ ಶುಶ ಪೆಯಿಂದ ಪ್ರಸನ್ನನಾದೆನು. ನಿಮ್ಮಿಬರೊಳಗೊಬ್ಬಳು ವಂಶಕರನಾದ ಓರ್ವ ಪುತ್ರನಂ ಪಡೆದಾಳು. ಮತ್ತೊಬ್ಬಳು ಅಲವತ್ತು ಸಾವಿರ ಮಂದಿ ಪುತ್ರರಂ ಪಡೆದಾಳು ಒಬ್ಬ ಪುತ್ರನು ಆರಿಗೆ ಬೇಕೊ, ಅಲವತ್ತುಸಾಸಿರ ಪುತ್ರರು ಆರಿಗೆ ಬೇಕೆ? ವರವಂ ಕೇ೪” ಎನ್ನಲಾಗಿ; ಸ್ವಲ್ಪ ಕಾಲದಲ್ಲಿಯೇ ವಿದರ್ಭರಾಯಸ ಕುಮಾ ರ್ತಿಯಾದ ಕೇಶಿನಿಯು ಒಬ್ಬ ಪುತ್ರನಂ ಬೇಡಿದಳು. ಅದುಕಾರಣ ಅಸ ಮಂಜಸನನ್ನು ಪಡೆದಳು. ಇನ್ನು ಕಶ್ಯಪ ಕುಮಾರ್ತಿಯಾದ ಸುಮತಿಯು ಆವತ್ತು ಸಾಸಿರ ಕುಮಾರರಂ ಪಡೆದಳು. ಆ ಅಸಮಂಜಸಂಗೆ ಅಂಶುಮಂತನೆಂಬ ಕುಮಾರನು ಜನಿಸಿದನು. ಆ ಅಸಮಂಜಸನು ಬಾಲ್ಯಾವಸ್ಥೆಯಲ್ಲಿದೆ: ( ದುಶ ರಿತನಾದುದಿಂದ) ರಾಜ್ಯದಿಂದ ಹೊಅಡಿಸಲ್ಪಟ್ಟನು, ಮೊದಲು “ ಇವನಯದ ಬಾಲ ಕನು, ಬುದ್ಧಿವಂತನಾದಾನು ” ಎಂದು ಇದ್ದ ಮತ್ತೂದು ಪೈಯಂ ಮಾಡಿದನು. ಆದುದ°ಂದ ತಂದೆಯು ಆತನನ್ನು ಬಿಟ್ಟನು. ಅರುವತ್ತು ಸಾವಿರ ಮಂದಿ ಪುತ್ರರೂ ಅಸಮಂಜಸನ ಕೃತ್ಯವನ್ನೇ ಅನು ಸರಿಸಿದವರಾದರು. ಈ ಸಾಗರರಿಂದ ಕೆಡಿಸಲ್ಪಟ್ಟ ಯಜ್ಞಾದಿಪಟ್ಟರ್ಮಗ ಳನುಳ್ಳ ಜಗತ್ತನ್ನು ದೇವತೆಗಳು ನೋಡಿ ಸಕಲವಿದ್ಯಾಸರೂಪನಾಗಿ ಸಕ ಅದೋಷಗಳಿ೦ ಸಂಸ್ಕೃಷ್ಟನಾಗದ ಪುರುಷೋತ್ತಮನ ಅಂಶಭೂತನಾದ ಕಪಿ ಲಮಹಾಮುನಿಗೆ ದಂಡವಿಕ್ಕಿ ಈ ಮಾತನ್ನಾಡಿದರು:- ಭಗವಂತನೇ ! ಕೇಳು, ಈ ಸಗರಕುಮಾರರಿಂದ ಅಸಮಂಜಸನ ಚರಿತ್ರವು ಅನುಸರಿಸು ಟಿತು; ಇವರಿಂದ ಈ ಜಗತ್ತು ಹೇಗೆ ಆಗುವುದೋ ! ಆರ್ತಜನರಕ್ಷಣೆ ಗೋಸ್ಕರ ನಿಮ್ಮ ಶರೀರಪರಿಗ್ರಹವು ' ಎಂದು ಹೇಳಲು; ಅವಾತಂ ಕೇಳಿ ಭಗವಂತನಾದ ಕಪಿಲನು--ಅವರು ಸಲ್ಪಕಾಲಂಗಳಲ್ಲಿಯೇ ನಾಶವನೈದಿ ಯಾರು” ಎಂದು ನುಡಿದನು. ಈಪ್ರಕಾರದೊಳಿರುವ ಕಾಲದಲ್ಲಿ ಸಗರಚಕ್ರವರ್ತಿಯು ಅಶ್ಚಮೇ ಧಯಾಗವ ಮಾಡಬೇಕೆಂದು ಯತ್ನವ ಮಾಡಿ ಪುತ್ರರುಗಳಿಂದಲಾಶಯಿ ಸಲ್ಪಟ್ಟ ಅಕ್ಷಗಳನ್ನು ಇಂದ್ರನು ಅಪಹರಿಸಿ ಬಿಲವಂ ಪ್ರವೇಶಮಾಡಿದನು.