ಹೀಗೆ ಭೂಲೋಕದಲ್ಲಿ ಶಿವಜ್ಞಾನವನ್ನು ಉದ್ಧರಿಸುವುದಕ್ಕಾಗಿ ಶ್ರೀ ವನಪ್ಪಣೆಯಿಂದ ಅವತರಿಸಿದ್ದ ಚೆನ್ನಬಸವೇಶನ ಚರಿತ್ರದ ವಿವರಣವನ್ನೇ ಮುಖ್ಯಲಕ್ಷವನ್ನಾಗಿಟ್ಟು ಕೊಂಡು, ಚೆನ್ನಬಸವೇಶ್ವರ ಪುರಾಣವನ್ನು ರ ಚಿಸಿದ ವಿರೂಪಾಕ್ಷಪಂಡಿತರು ವಿಜಯನಗರದಲ್ಲಿ ಈಗ್ಗೆ ೪ ನೆ ಶತಮಾನ ದಲ್ಲಿದ್ದರು. ಅವರಿದ್ದಾಗ್ಗೆ ಮಹಮ್ಮದೀಯರು ವಿಜಯನಗರವನ್ನು ಹಿಡಿದು ಕೊಂಡು ೨೦ ವರ್ಷಗಳಾಗಿದ್ದುವು. ಇವರು ಮೇಲೆಕಂಡ ಪುರಾಣಗ್ರಂಥನ ನ್ನು ಈಗ್ಗೆ ೨೦ ವರ್ಷಗಳಲ್ಲಿ ಎಂದರೆ- ಕ್ರಿ. ಶ. ೧೫v೫ ರಲ್ಲಿ ರಚಿಸಿ ಮುಗಿಸಿದರು. ಆ ಕಾಲವನ್ನು ಇವರು ತಮ್ಮ ಗ್ರಂಥದ ಅಂತ್ಯದಲ್ಲಿ ವಿಶದ ಪಡಿಸಿರುತ್ತಾರೆ, ಇವರಿಗೆ ವಿಜಯನಗರದ ಹಿರೀಮಠದ ಸಿದ್ದ ವೀರಸ್ವಾಮಿ ಗಳೆಂಬ ಯತಿಗಳು ಗುರುಗಳಾಗಿದ್ದರು, ಅವರು ಮಳೆಯಮಲ್ಲೇಶನ ಸಾಂ ಪ್ರದಾಯಸ್ಥರು, ಸ್ವಲ್ಪ ಹಿಂದುಮುಂದಾಗಿ ಚೆನ್ನಬಸವೇಶ್ವರಪುರಾಣರ ಚನೆಯ ಕಾಲದಲ್ಲೇ ಹುಟ್ಟಿರುವ ಪಢರಾಯಚರಿತ್ರವೆಂಬ ಗ್ರಂಥಕ್ಕೆ ಕರರಾದ ಅಬ್ರೇಶಪ್ಪ ಎಂಬುವರು ಕೂಡ ತಮ್ಮ ಗುರುವನ್ನು ಮಳೆ ಯಮಲ್ಲೆಶನೆಂದು ಹೇಳಿಕೊಂಡಿರುತ್ತಾರೆ. ಚೆನ್ನಬಸವೇಶರಪುರಾಣವು ೫ ಕಾಂಡಗಳಾಗಿ ವಿಭಾಗಿಸಲ್ಪಟ್ಟು ೧೫ ನೆ ಕಾಂಡಗಳಲ್ಲಿ ಚೆನ್ನಬಸವೇಶನ ಸಕೀಯ ವಿಷಯಗಳೂ, ಪಟ್ಟ ಲಾವ್ಯಾವರಣವಿವರಣಗಳೂ, ವಿಂಡೋತ್ಪತ್ತಿ, ಕರಣ ಹಸುಗೆ, ವೀಕ್ಷಕ ವಗಳೂ, ಅನೇಕ ಶರಣರ ಸಂಕ್ಷಿಪ್ತಚರಿತ್ರಗಳೂ, ಸೂಚಂದ್ರವಂಶ ಪರಂಪರೆಯ, ಕಾಲಜ್ಞಾನವೆಂಬ ಚರಿತ್ರಭಾಗವೂ, ಹೇಳಲ್ಪಟ್ಟಿರುವು ವು, ಮಧ್ಯದ ೩ ಕಾಂಡಗಳಲ್ಲಾದರೋ- ಪರಶಿವನ ಸಂಚವಿಂಶತಿಲೀಲೆಗಳು ವರ್ಣಿಸಲ್ಪಟ್ಟಿರುವುವು. ಈ ಕ್ರಮದಿಂದ, ಪ್ರಸಕ್ತವಾದ ಗ್ರಂಥಗೊ ಳಗೆ ಅನೇಕ ಉಪಯುಕ್ತ ವಿಷಯಗಳನ್ನು ಸಂಗ್ರಹಿಸಿ ಹೇಳಬೇಕೆಂಬುದು ಗ್ರಂಥಕರರ ಉದ್ದೇಶವಾಗಿದ್ದಿತೆಂದು ತೋರುವುದು, ಹಿಂದೂ ಗ್ರಂಥ ಕಾರರಲ್ಲಿ ಚರಿತ್ರಭಾಗಕ್ಕೆ ದೃಸ್ಮಿಕೊಟ್ಟು, ವಿಷಯಗಳ ನಿರೂಪಣವನ್ನು ಮಾಡಿರತಕ್ಕವರು ಅತ್ಯಂತ ವಿರಳರು, ಅಂಥ ಲೋಪವನ್ನು ಈ ಗ್ರಂಥ ಕರರು ಸ್ವಲ್ಪಮಟ್ಟಿಗಾದರೂ ನಿವಾರಣಗೊಳಿಸಿರುವರೆಂಬುದು ಈ ಗ್ರಂಥದ ಕಡೆಯ ಭಾಗದ ೨ ಸಂಧಿಗಳಿಂದ ವ್ಯಕ್ತವಾಗುವುದು, ಇವ
ಪುಟ:ಚೆನ್ನ ಬಸವೇಶವಿಜಯಂ.djvu/೧೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.