ork ಬ್ರಹ್ಮ ಶಿರಚ್ಛೇದನವು ಳೆಲ್ಲರೂ ಇನ್ನೇನನಾಹುತವಾಗುವುದೋ ! ಎಂದು ಬೆದರಿದರು, ವಿಷ್ಣುವು ಬ್ರಹ್ಮನ ಮರುಳನವನ್ನು ಕುರಿತು ಜರೆಯುತ್ತಿದ್ದನು. ಆಗ ಪರಶಿವನು ರವರೂಪದಿಂದ ಕರದಾಯುಧಗಳನ್ನು ಜಳಪಿಸಲು, ಓಲಗದವರೆಲ್ಲರೂ ದಿಕ್ಕು ದಿಕ್ಕಿಗೆ ಓಡಿದರು. ಬ್ರಹ್ಮನು ಬೆದರಿದನು. ಶಿವನು ಬ್ರಹ್ಮನ ೫ ನೆ ಮುಖವನ್ನು ನೋಡಿ, “ ಹಾಸ್ಯಮಾಡು, ಹಾಸ್ಯವಾಡು ” ಎಂದು ನುಡಿಯುತ್ತ, ಕೂರಾಸ್ತ್ರದಂತೆ ಕಾಂತಿಯನ್ನುಗಿಯುತ್ತಿರುವ ತನ್ನ ಡಗೈಯ ಕಿರುಬೆರಳಿನುಗುರಿನಿಂದ ಆ ೫ ನೆಯತಲೆಯನ್ನು ಲೀಲಾಮಾತ್ರದ ಲ್ಲಿ ಜಿಗುಟಬಿಟ್ಟು, ಕೂಡಲೇ ಆ ಬ್ರಹ್ಮನ ದೇಹದಿಂದ ರಕ್ತವು ಪ್ರವಾ ಹನಾಗಿ ಹರಿದು ಲೋಕವನ್ನೆಲ್ಲ ಮುಳುಗಿಸುತ್ತಿದ್ದಿತು. ಈ ಅನರ್ಥವನ್ನು ತಪ್ಪಿಸುವುದಕ್ಕಾಗಿ ಪರಶಿವನು ತನ್ನ ಫಾಲನೇತ್ರವನ್ನು ತೆರೆಯಲು, ಅಗ್ನಿ ಯು ಕ್ಷಣಮಾತ್ರದಲ್ಲಿ ಆ ರಕ್ತವನ್ನೆಲ್ಲ ಹೀರಿ ಬ್ರಹ್ಮನ ತಲೆಯೋಡ ನ್ನು ದೊಳುವಾಡಿತು, ಆ ಕಪಾಲವನ್ನು ಶಿವನು ತನ್ನ ಕೈಗೆ ತೆಗೆದು ಕೊಂಡನು. ಬ್ರಹ್ಮನಾದರೋ ಶಿವನ ಕರದಲ್ಲಿರುವ ತನ್ನ ಶಿರಃಕಪಾಲ ನನ್ನೂ, ರಕ್ತವನ್ನೆಲ್ಲ ತಿನನ ನೇತಾಗ್ನಿಯು ಹಿರಿಮವನ್ನೂ, ಶಿವನ ನ್ನು ಬಳಸಿ ಹೊಗಳುತ್ತಿರುವ ದೇವತೆಗಳನ್ನೂ, ಸ್ತುತಿಸುತ್ತಿರುವ ವೇ ದಗಳನ್ನೂ ಕೊಂಡಾಡುತ್ತಿರುವ ವಿಷ್ಣುವನ್ನೂ, ನೋಡಿ ಬೆರಗಾಗಿ, ಶಿ ವಶಿವಾ ! ಈ ಮಹಾದೇವದೇವೋತ್ತಮನ ಪ್ರಭಾವವನ್ನು ಅರಿಯದೆ ನಾನು ಇವನೊಡನೆ ಹೋರಾಡಿದೆನಲ್ಲ ! ಎಂದು ಚಿಂತಿಸಿ, ತಲೆಯಮೇಲೆ ಕೈಯನ್ನು ಹೊತ್ತುಕೊಂಡು, “ ಅಕಟಕಟಾ ! ಇಂತಹ ಮಹಾದೇವ ನೊಡನೆ ನನಗೆ ಸೆಣಸಾಟವೆಂದರೇನು ? ಈ ವಿಶಭರಿತನೊಡನೆ ನನಗಹಂ ಕಾರವೆಂದರೇನು ? ಲೋಕಶಿಕ್ಷಕನಾದ ಇವನನ್ನು ನಿಂದಿಸುವುದೆಂದರೇ ನು ? ಕಂತೂ ಕಂಡು, ಕೇಳಿಯೂ ಕೇಳಿ, ನಾನು ಮರುಳಾಗಬಹುದೆ? ಈ ನನ್ನ ಶಿವಯೋಹದ ಪ್ರಾಯಶ್ಚಿತ್ತಕ್ಕಾಗಿ ನನ್ನ ಉYದ ಶಿರಸ್ಸುಗ ಳನ್ನೂ ಕತ್ತರಿಸಿ, ಧನ್ಯನಂ ಮಾಡು ” ಎಂದು ಶಿವನ ಪಾದಕ್ಕೆ ನಮಸ್ಕ Cಸಿದನು, ಭಕ್ತಿಭರದಿಂದ ಅವನ ಕಣ್ಣಿನಲ್ಲಿ ಸುರಿಯುತ್ತಿದ್ದ ಬಾತ್ಮವೇ ಶಿವನ ಪಾದಕ್ಕೆ ಅಭಿಷೇಕ ಜಲವಾಯಿತು, ಅವನ ಕಿರೀಟರತ್ನಗಳೇ ರನ್ನ ದ ಹೂವುಗಳಾದುವು, ಸ್ತೋತ್ರವಚನವೇ ಮಂತ್ರವಾಯಿತು, ನೇತ್ರಹ
ಪುಟ:ಚೆನ್ನ ಬಸವೇಶವಿಜಯಂ.djvu/೧೦೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.