ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܪܘܘ ಏಷಕಂಠರೀತಿ 164 ಕೊಟ್ಟರೆ, ನೀನದನ್ನು ವಿಶ್ವಾಸದಿಂದ ಪರಿಗ್ರಹಿಸದೆ, ಅಹಂಕಾರದಿಂದ ಆನೆಯ ತಲೆಯ ಮೇಲಿಟ್ಟು ಹೊಸಗಿಸಿಬಿಟ್ಟೆ, ಇದರಂತೆಯೇ ನಿನ್ನ ಐಶ: ರವೂ ಸಮುದ್ರದಲ್ಲಿ ಮುಳುಗಿ ಹಾಳಾಗಲಿ ಎಂದು ಶಪಿಸಿದನು. (ಮಹಾ ತ್ಮರ ವಿರೋಧವು ಬಳೆದ ಬಳಿಕ ನಿರಿಗೆ ಕೊನೆಯಾಗದಿದ್ದೀತೆ ? ಆಗ ಇಂ ದ್ರನು ಮರುಗಿ, ಕೊರಗಿ, ಆನೆಯಿಂದಿಳಿದು, ಸುಪ್ರೀಶನ ಪಾದಕ್ಕೆ ನನ ಸ್ಕರಿಸಿ, ನನ್ನ ತಪ್ಪನ್ನು ಕ್ಷಮಿಸಿ ಕಾಪಾಡಬೇಕೆಂದು ಬೇಡಿಕೊಳ್ಳಲು, “ ನಿನಗೆ ಶಿವನನುಗ್ರಹದಿಂದ ಎಲ್ಲ ಸಂಪತ್ತೂ ದೊರೆಯಲಿ ?” ಎಂದು ವಿಶಾಪವನ್ನು ಕೊಟ್ಟು, ತೆರಳಿದನು. ದೇವೇಂದ್ರನು ಮಹಾದುಃಖಸ ಮುದ್ರದಲ್ಲಿ ಮಗ್ನನಾಗಿದ್ದನು. ಇತ್ತ ಐರಾವತ ಉಚ್ಛಿಶ್ರವಸ್ಸು ಕಾ ಮಧೇನು ಕಲ್ಪವೃಕ್ಷ ಚಿಂತಾಮಣಿ ಮೊದಲಾದ ಸಕಲ ಸಂಪತ್ತೂ ಬ ಯಲಾಯಿತು. ಆಗ ಇಂದ್ರನು ಶಿವನನ್ನು ಕುರಿತು ದೀರ್ಘತಪಸ್ಸನ್ನಾ ಚರಿಸಿದನು. ಪರಶಿವನು ಪ್ರತ್ಯಕ್ಷನಾಗಿ ತಪಸ್ಸಿಗೆ ಕಾರಣವೇನೆಂದು ಕೆಳಲು, ತನ್ನ ವಿಪತ್ತನ್ನು ಇಂದ್ರನು ಬಿನ್ನೈಸಿದನು. ಅದಕ್ಕೆ ಶಿವನು. ವಿಶ್ಯಬ್ರಹ್ಮಾದಿ ಸಕಲ ದೇವತೆಗಳೂ ರಾಕ್ಷಸರೂ ಸಹ ಕೂಡಿ ಕ್ಷೀರ ಸಮುದ್ರವನ್ನು ಕಡೆದರೆ ನಿನ್ನ ಸಂಪತ್ತೆಲ್ಲ ಪುನಃ ಹುಟ್ಟಿ ಬರುವುವು, ಎಂ ದು ಅಪ್ಪಣೆ ಕೊಟ್ಟು ತೆರಳಿದನು, ಇತ್ತ ದೇವೇಂದ್ರನು ಶಿವನಪ್ಪಣೆ ಯನ್ನು ಬ್ರಹ್ಮ ವಿಷ್ಣುಗಳಿಗೆ ಹೇಳಲು, ಅವರು ಸಕಲ ದೇವತೆಗಳನ್ನೂ ರಾಕ್ಷಸರನ್ನೂ ಬರಮಾಡಿ, ಸರರೂ ಹೀರಸಮುದ್ರಕ್ಕೆ ಹೋದರು. ಮಂದರಪರತವನ್ನೇ ಕಿತ್ತು ಕಡೆಗೋಲಾಗಿ ನಿಲ್ಲಿಸಿದರು, ಆದಿಶೇಷನ ನ್ನು ಕಡೆಯುವ ಹಗ್ಗ ವನ್ನಾಗಿ ಮಾಡಿ ಸುತ್ತಿದರು, ಒಂದು ಕಡೆ ರಾಕ್ಷ ಸರೂ ಒಂದು ಕಡೆ ದೇವತೆಗಳ ಹಿಡಿದು ಸಮುದ್ರವನ್ನು ಮಥಿಸಿದರು. ಮೊದಲು ಹುಟ್ಟಿದ ವಸ್ತುವು ವಿಷ್ಣುವಿಗೆಂತಲೂ, ಆಮೇಲೆ ಹುಟ್ಟಿದ ವಸ್ತುವು ನಮಗೆ ತಮಗೆಂತಲೂ ಆಲೋಚಿ ಸಿಕೊಳ್ಳುತ್ತಿದ್ದರು. ಆಗ ಉಂಟಾದ ಆಕ್ಷ ರವನ್ನೇನು ಹೇಳ © ! ಮೊದಲು ಹುಟ್ಟಿದ ವಸ್ತುವು ಶಿವನಿಗಾಗಲಿ ಎಂದು ಹೇಳದೆ ಆರಂಭಿಸಿದ ಕಾರವು ಶುಭಮುಖವಾಗುವುದೆ ? ಎಂದಿಗೂ ಇಲ್ಲ. ಕಡ ಯುವಿಕೆಯು ಬಲವಾದಂತೆಲ್ಲ ಆದಿಶೇಪನಿಗೆ ದಣಿವು ಹೆಚ್ಚಿತು. ಅದು