ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಜಲಂಧರಸುರತ

ದೇವೇಂದ್ರನ ವಸ್ತು ವಾಹನಗಳೆಲ್ಲ ಸಮುದ್ರದಲ್ಲಿ ಮುಳುಗಿದ್ದುವು, ಬ೪ ಕ ಶಿವನಪ್ಪಣೆಯನ್ನು ಪಡೆದು ಸಮುದ್ರವನ್ನು ಕಡೆದು ಕಳೆದುಕೊಂಡಿದ್ದ ನಮ್ಮ ವಸ್ತುಗಳನ್ನೆಲ್ಲ ತೆಗೆದುಕೊಂಡು ಬಂದಿರುವೆವು, ಆ ಹೊರ ತು ದೇವರಾಜನು ಹೆರರ ಒಡವೆಗೆ ಆಸೆ ಮಾಡತಕ್ಕವನೆ ? ಎನ್ನಲು, ದ ತನು ಕೇಳಿ, ಹಾಗಾದರೆ ನೀವು ಯುದ್ಧವನ್ನೇ ಹೊರುವವರನ್ನೈ ? ಬೇ ಡಿರಿ, ಸುಮ್ಮನೆ ನನ್ನ ವಸ್ತುಗಳನ್ನು ನಮಗೆ ಕೊಟ್ಟು ಬದುಕಿ, ಬಂಡು ಮತ್ತೆ ಹೇಳಿ, ಅವರು ಒಪ್ಪದಿರಲು, ಹಿಂದಿರುಗಿ ತನ್ನೊಡೆಯನ ಒಳಗೆ ಬಂದು, ಮಣಿದು, ಜೀಯಾ ! ನಿಮ್ಮಪ್ಪಣೆಯಾದಂತ ದೇವೇಂದ್ರನ ಬಳಿ ಯಲ್ಲಿ ತಿಳಿಸಿ ವಸ್ತುವನ್ನು ಬೇಡಿದೆನು. ಅದಕ್ಕೆ ಅವರು ವಿರೋಧಾಭಿ ಪ್ರಾಯವನ್ನು ತಿಳಿಸುವರೇ ಹೊರತು ಕೊಡುತ್ತೇವೆಂಬ ಮಾತನ್ನೇ ಆಡು ವುದಿಲ್ಲ, ಎಂದು ಬಿನ್ನೈಸಿದನು. ಇದನ್ನು ಕೇಳಿದ ಕೂಡಲೇ ಜಲಂಧ ರನ ದೇಹದಲ್ಲಿ ಕೋಪಾಗ್ನಿಯು ಭುಗುಭುಗನೆ ಸ್ಸುರಿಸಿತು. “ ಸಕಲ ದೈತ್ಯನಾಯಕರನ್ನೂ ಬರಮಾಡು, ಸೇನಾಪ್ರಯಾಣಸೂಚಕವಾದ ಭೇ ರಿಯನ್ನು ಹೊಡೆ ?” ಎಂದು ಆಗಳೇ ಅಪ್ಪಣೆಯನ್ನು ಮಾಡಿದನು. ಒಡ ನೆಯೇ ಭೇರಿಯನ್ನು ತಾಡಿಸಲು, “ ದೇವದಾನವರ ಸಂಧಿಯು ತಪ್ಪಿತು. ದಾನವರು ಯುದ್ಧ ಸನ್ನದ್ದರಾಗಿ ಹೊರಡುತ್ತಿರುವರು ! ಶತ್ರು ಮದಗಜ ಗಳಿಗೆ ಸಿಂಹನಾದ ಜಲಂಧರಾಸುರನು ಇಗೊ ಬರುತ್ತಿರುವನು, ದಿಕ್ಕಾ ಲಕರೆಲ್ಲ ಕಂಡ ಕಂಡ ಕಡೆಗೆ ಓಡಿಹೋಗಿ ತಲೆಯನ್ನುಳುಹಿಕೊಳ್ಳಿರಿ” ಎಂದು ಸಾರುತ್ತಿರುವಹಾಗೆ ಭೇರೀ ಶಬ್ದವು ದಿಂಡಲವನ್ನೆಲ್ಲ ವ್ಯಾಪಿ ಸಿತು. ಚತುರಂಗಸೈನ್ಯವೂ ಸಿದ್ಧವಾಯಿತು. ವಾದ್ಯಗಳು ಮುಂಗಡೆ ಯಲ್ಲಿ ಆರ್ಭಟಿಸುತ್ತಿದ್ದುವು. ಈ ಅಬ್ಬರಕ್ಕೆ ಮೂರುಲೋಕವೂ ತಲ್ಲ ಣಿಸಿತು. ತನ್ನ ಗುರುವಾದ ಶುಕ್ರಾಚಾರನು ಗೊತ್ತು ಮಾಡಿದ್ದ ಸುಮು ಹೂರದಲ್ಲಿ ಜಲಂಧರಾಸುರನು ಪ್ರಯಾಣಮಾಡಿದನು. ಕಾಲಾಳುಗಳ ಹೂಂಕಾರವೂ, ಆನೆಗಳ ಗರ್ಜನೆಯೂ, ಅವುಗಳ ಗಂಟೆಯ ಶಬ್ದವೂ, ಕುದುರೆಗಳ ಕೆನೆಯುವಿಕೆಯ, ಕಡಿವಾಣದ ಖಣಖಣಧನಿಯ, ಗೊ ರನಿನ ಶಬ್ದವೂ, ರಥಗಳ ಚೀರುವಿಕೆಯ, ವೀರರ ಹಸ್ತಾಯುಧದ ಖಣಿಖಣಿಯೆಂಬ ಶಬ್ದವೂ, ತಮ್ಮಟೆ ನಗಾರಿ ಮೊದಲಾದ ವಾದ್ಯಗಳ