ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩] ಜಲಂಧರನಿಂದ ದೇವೇಂದ್ರನಸಜಯ ಓಡಿಸಿದರು. ಎತ್ತ ನೋಡಿದರೂ ಹೆಣಗಳ ರಾಶಿ, ಎತ್ತ ನೋಡಿದರೂ ಕರು ಳುಗಳ ಮಾಲೆ, ಎತ್ತ ನೋಡಿದರೂ ರಕ್ತದ ಕಾಲಿನೆ ಎಲ್ಲಿ ನೋಡಿದರೂ ಮುರಿದಾಯುಧಗಳ ಗುಡ್ಡೆ, ಎಲ್ಲಿ ನೋಡಿದರೂ ಸುಂಡಿಲು ಮುರಿದು ತೊಡೆ ಯು ಕಡಿದು ಬಿದ್ದು ಕಿರುಚುತ್ತಿರುವ ಆನೆಗಳು, ಎತ್ತ ನೋಡಿದರೂ ರಕ್ತವನ್ನು ಕಾರುತ್ತ ಕುಂಟುತ್ತ ಒದ್ದಾಡುತ್ತಲಿರುವ ಕುದುರೆಗಳು, ಎಲ್ಲಿ ನೋಡಿದರೂ ಅಚ್ಚು ಮುರಿದು ನುಚ್ಚು ನೂರಾಗಿ ಒಟ್ಟಲಾಗಿರುವ ತೇರುಗಳು ಕಾಣುತ್ತ, ರಣಾಂಗಣವು ಬಹು ಭಯಂಕರವಾಗಿದ್ದಿತು ಅರಲ್ಲಿ ದೈತ್ಯಬಲವು ದೇವತೆಗಳ ಪೆಟ್ಟನ್ನು ತಾಳಲಾರದೆ, ಧೈರಗುಂದಿ ಹಿಂತಿರುಗಿ ಓಡುತ್ತಿರುವುದನ್ನು ರಾಕ್ಷಸದಳ ಪತಿಯಾಗಿದ್ದ ಶುಂಭಾಸುರನು ನೋಡಿ, ಬಹುಕೋ ಸಾಮೀಪದಿಂದ ಕಣ್ಣಿನಲ್ಲಿ ಕೆಂಡವನ್ನು ಕರೆಯು , ಹುಬ್ಬು ಗಂಟಿಕ್ಕಿ, ಆರ್ಭಟಿಸಿ, ಕೈ ಕತ್ತಿಯನ್ನು ಝಳಪಿಸಿ, ಮೊ ರೆದು, ಭೂಮಿಯನ್ನು ರಾಡಿನಿ, ತುಳಿದು, ತನ್ನ ಬಲವನ್ನೆಲ್ಲ ಕೈಬೀಸಿ ಮುಂದಕ್ಕೆ ದೇವತೆಗಳ ಮೇಲೆ ಸಾಗಿಸಿದನು. ಮತ್ತೂ ಎಲೆ ಜಂಭಾ ಸುರನೆ ನಡೆ, ೧ಲೆ ನಿಶುಂಭನೆ ಸೇನೆಯನ್ನು ನಡಸು, ಚಂಡನೆ ಮುಂ ದಕ್ಕೆ ಸಾಗು, ಖತೃ ರೋಮನೆ ಪರಸೇನೆಯನ್ನು ಹಿಡಿ, ವಾಮನನೆ ನಿನ್ನ ಕೌಗ್ಯವನ್ನು ತೋರಿಸು, ಲೇವಾಸುರನೆ ನಿನ್ನ ಶಕ್ತಿಯೇನಾಯಿತು ? ವಿರೂಪಾಕ್ಷನೆ ನಿನ್ನ ಕೈತೋರಿಸು, ದೀರ್ಘಬಾಹುವೆ ಏನು ಅಳ್ಳಾಡದೆ ಸುಮ್ಮನಿರುವೆ ? ಮದಿರಾಸುರನೆ ಅದೇಕೆ ನಿಂತಿರುವೆ ? ಕಾಲನೇಮಿಯ ತಡವೇಕೆ ? ಎಲೈ ರಾಕ್ಷಸಭಟಸ್ಕೋಮುವೆ ನಿಮ್ಮ ಶೌಗೃಧೈರ ಸಾವು ರ್ಥಾದಿಗಳೆಲ್ಲ ಎಲ್ಲಿ ಹೋದುವು ? ಎಂದು ಮೊದಲಾಗಿ ಹೀಯಾಳಿಸಿ ಈ ಬ್ರಿನಿ ದೇವತೆಗಳ ಮೇಲೆ ಸಾಗಿಸಿದನು, ರಾಕ್ಷಸನ ಚತುರಂಗಸೈನ್ಯವೂ ಕಟಪಟಾಟೋಪದಿಂದ ಮುರಿದೆದ್ದು, ತೋಳ್ಳನ್ನು ತಟ್ಟಿ, ಆರ್ಭಟಿಸಿ ಊಾಸೆಗಳನ್ನು ಹುರಿಮಾಡಿ, ಕೈಕತ್ತಿಗಳನ್ನು ಜಳಪಿಸಿ, ತಮ್ಮ ತಮ್ಮ ವಾಹನಗಳನ್ನು ಹತ್ತಿ, ಅರಣ್ಯವನ್ನು ಮುತ್ತಿದ ಕಾಳ್ಜೈನಂತೆ ದೇವ ವಾಹಿನಿಯಮೇಲೆ ಬಿದ್ದಿತು. ಈ ಅಬ್ಬರವನ್ನು ಕೇಳಿದಕೂಡಲೇ ದೇ ವೇಂದ್ರನು ಆರ್ಗಹಿಸಿ, ತನ್ನ ಸುತ್ತಲಿನ ದೇವರನ್ನೆಲ್ಲ ಕೈಬೀಸಿ ಕರೆದು, ಉತ್ಸಾಹಗೊಳಿಸಿ, ದೈತ್ಯರ ಮೇಲೆ ಸಾಗಿಸಿದನು. ಸಕಲ