ܘܰܩܗܰ. ೧೩] ಜಲಂಧರನಿಂದ ದೇವೇಂದ್ರನಸಜಯ ರೊಡನೆ ಕೂಡಿ ಅರಮನೆಗೆ ಬಂದು, ರಹಸ್ಯವಾಗಿ ಕುಳಿತು, ದೇವಗುರು ವಾದ ಬೃಹಸ್ಪತ್ಸಾಚಾರರೊಡನೆ ಯುದ್ಧದ ಸಂಕಟವನ್ನು ಕುರಿತು ಪ್ರ ಸ್ತಾಪಿಸಲನುವಾಗಿ “ ಈ ನಮ್ಮ ಕೋಟೆಯು ಸಾಮಾನ್ಯವಾದುದಲ್ಲ, ಇದನ್ನು ಕಾಪಾಡಿಕೊಂಡಿರುವ ಭಟರ ಶೌಗ್ಯವೂ ಸಾಧಾರಣವಾದುದಲ್ಲ, ನಮ್ಮಲ್ಲಿರತಕ್ಕೆ ಯುದ್ಧ ಸಾಮಗ್ರಿಗಳಾದರೂ ಸ್ವಲ್ಪವಾಗಿವೆಯೆ ? ಹೀಗಿ ದ್ದರೂ ಶತ್ರುಗಳು ನಿವಿಷಮಾತ್ರದಲ್ಲಿ ನಮ್ಮನ್ನು ಪರಾಭವಗೊಳಿಸಿದರು. ಈ ದಿವಸವೇ ಕೋಟೆಯು ಅವರ ವಶವಾಗದೆ ಉಳಿದಿರುವುದು ಶಿವಕ ಟಾಕ್ಷವೇ ಹೊರತು ಶೂರರಾದ ಆ ರಾಕ್ಷಸರನ್ನು ಕೊಂದು ನಾವಿದನ್ನು ಉಳುಹಿಕೊಳ್ಳುವುದು ಸಾಧ್ಯವೆ ? ಇನ್ನು ನಾವು ಈ ಪಟ್ಟಣದಲ್ಲಿರು ವುದು ಸರಿಯಲ್ಲ ; ಬೆಳಗಾವರೆ ರಾಕ್ಷಸರ ಹಾವಳಿಯನ್ನು ನಾವು ತಾಳ ಲಾರೆವು; ಇದಕ್ಕೆ ಹೇಗೆ ಮಾಡವ ? ” ಎಂದನು. ಆಗ ಗುರುವುಎಲೈ ದೇವೇಂದ್ರನೇ ! ಒಳ್ಳೆಯ ಮಾತನ್ನಾಡಿದೆ; ಇನ್ನು ನಾವಿಲ್ಲಿದ್ದರೆ ರಾಕ್ಷಸರಿಂದ ಗಾಸಿಗೊಳ್ಳುವುದೆ ನಿಜ, ನಾವು ನಮ್ಮ ವಸ್ತುವಾಹನಧನಕನ ಕಾದಿಗಳಿಗೆ ಅಪೇಕ್ಷೆ ಮಾಡದೆ ಬ್ರಹ್ಮಲೋಕಕ್ಕೆ ಹೊರಟುಹೋಗುವು ದೇ ಯೋಗ್ಯವೆಂದು ಹೇಳಲು, ಇಂದ್ರಾದಿದಿಕಾಲಕರೆಲ್ಲರೂ ಆ ಕೂ ಡಲೇ ತಮ್ಮ ತಮ್ಮ ರಾಣಿವಾಸದವರೊಡನೆ ಗಢದ್ದಾರದಿಂದ ಅಮರಾವತಿ ಯನ್ನು ಬಿಟ್ಟು ಬ್ರಹ್ಮನ ಸತ್ಯಲೋಕಕ್ಕೆ ಹೋದರು. ಅಲ್ಲಿ ಬ್ರಹ್ಮನು ಇವರೆಲ್ಲರನ್ನೂ ಕಂಡು ಸಂಗತಿಯೇನೆಂಬುದನ್ನು ತಿಳಿದು, ಇದರ ಪರಿ ಹಾರೋಪಾಯಚಿಂತನೆಗಾಗಿ ವಿಷ್ಣುವಿನಲ್ಲಿಗೆ ಹೋಗುವುದೇ ಸರಿಯೆಂದು ನಿರ್ಧರಿಸಿ, ಎಲ್ಲರೂ ಒಟ್ಟುಗೂಡಿ ವೈಕುಂಠಕ್ಕೆ ಹೋದರು. “ ನೀಚ ಜಲಂಧರಾಸುರನು ಅಮರಾವತಿಗೆ ದಂಡೆತ್ತಿ ಬಂದು ಸ್ವರ್ಗಲೋಕವನ್ನು ಸ್ವಾಧೀನಪಡಿಸಿಕೊಂಡುದರಿಂದ ಈ ದಿಕ್ಷಾಲಕರೆಲ್ಲರೂ ದಿಕ್ಕುಗೆಟ್ಟು ನನ್ನ ಬಳಿಗೆ ಬಂದರು, ನಾನು ನಿಮ್ಮ ಬಳಿಗೆ ಕರೆದುಕೊಂಡು ಬಂದೆ ನು ?” ಎಂಬದಾಗಿ ಬ್ರಹ್ಮನು ವಿಷ್ಣುವನ್ನು ಕುರಿತು ಹೇಳಿದನು. ಆಗ ವಿಷ್ಣುವು ಚೆನ್ನಾಗಿ ಯೋಚಿಸಿ, ಬಲಶಾಲಿಯಾದ ಜಲಂರ್ಧನು ಹರನಿಂ ದಲ್ಲದೆ ಇತರರಿಂದ ಸಾಯುವವನಲ್ಲವೆಂಬುದನ್ನು ತಿಳಿದುಕೊಂಡನಾದರೂ, ದೂರು ಹೇಳಿಕೊಂಡವರನ್ನು ಸುಮ್ಮನೆ ಕಳುಹಿಬಿಡುವುದು ಯೋಗ್ಯವಲ್ಲ 16
ಪುಟ:ಚೆನ್ನ ಬಸವೇಶವಿಜಯಂ.djvu/೧೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.