ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಲಂಧರನಿಂದ ದೇವೇಂದ್ರನಸಜಯ tck ಹೋದನು, ಎಂದು ರಾಕ್ಷಸನು ಹೇಳಲು, ಅವರೆಲ್ಲರನ್ನೂ ನಾನು ವೈ ಕುಂಠದಲ್ಲಿ ಕಂಡೆನೆಂದು ನಾರದನು ನುಡಿದನು. ಆ ಕೂಡಲೇ ಜಲಂಧರ ನು ಘುಡುಘುಡಿಸಿ ಎದ್ದು , ಆಹಾ ! ಆ ವಿಷ್ಣುವು ಇಂದ್ರನನ್ನು ಬೆನ್ನು ಹಾಕಿಕೊಂಡು ನಮ್ಮೊಡನೆ ಕಾದಿ ಬದುಕುವನೆ ? ನೋಡುವ ! ಏ೪ರಿ ಎಂದು ತನ್ನ ಸಕಲ ಬಲವನ್ನೂ ವೈಕುಂಠಲೋಕಕ್ಕೆ ತೆರಳಲು ಅಪ್ಪಣೆ ಮಾಡಿದನು, ಪ್ರಯಾಣದ ಭೇರಿಯಾಗಲು, ರಾಕಸಸೇನೆಯು ಮಹಾ ಸಮುದ್ರದಂತೆ ಮೊರೆಯುತ್ತ ಹೊರಟು. ವೈಕುಂಠಪುರವನ್ನು ಸಮಿ ವಿಸಿತು, ಎಂದು ಚೆನ್ನಬಸವೇಶನು ಸಿದ್ದರಾಮೇಶನನ್ನು ಕುರಿತು ನುಡಿದ ನೆಂಬಿಲ್ಲಿಗೆ ಹದಿಮೂರನೆ ಅಧ್ಯಾಯವು ಸಂಪೂ‌ವು. ಇ ೧೪ ನೆ ಅಧ್ಯಾಯ. -ಎ- ವಿಜ್ಞುಬ್ರಹ್ಂದ್ರಾದಿಗಳ ಪರಾಜಯ. ಜಲಂಧರಾಸುರನ ಸೈನ್ಯವು ಅತ್ಯಂತ ಸಮೀಾವಿಸಿತೆಂಬ ವಾರೆಯ ನ್ನು ವಿಷ್ಣುವು ಕೇಳಿದಕೂಡಲೇ ರೋಪದಿಂದ ಕೆಂಪೇರಿದ ಕಣ್ಣುಗಳನ್ನು ಬಿರುಬಿರನೆ ಬಿಡುತ್ತ, ತನ್ನ ಸಕಲ ಸೈನ್ಯವೂ ಯುದ್ಧಕ್ಕೆ ಸಿದ್ಧವಾಗಲಿ ಯೆಂದು ಅಪ್ಪಣೆಮಾಡಿದನು, ವಿಷ್ಣುವಿನ ಮತ್ತೂ ಬ್ರಹ್ಮನ ಚತುರಂ ಗಸೈನ್ಯವೂ ಸಡಗರದಿಂದ ಅಣಿಯಾಗಿ ನಿಂತಿತು. ವಿಷ್ಟು ಬ್ರಹ್ಮರುಗಳು ತಮ್ಮ ತಮ್ಮ ವಾಹನವನ್ನೇರಿ ಹೊರಟರು. ದೇವತೆಗಳ ಅಪರಿಮಿತವಾ ದ ಮಹಾಸೇನೆಯು ರಭಸದಿಂದ ಬರುತ್ತಿರುವ ವರಮಾನವನ್ನು ಧಾನವೇ ಶರನು ಕೇಳಿ, ಕೊಸಾವೇಶಗೊಂಡು ವೈಕುಂಠಪುರದಕಡೆಗೆ ಬೇಗ ಬೇಗನೆ ತನ್ನ ಸೈನ್ಯವನ್ನು ಸಾಗಿಸಿದನು. ಉಭಯಸೇನೆಗಳೂ ಮಹಾಸ ಮುದ್ರದಂತೆ ಭೋರ್ಗರೆಯುತ್ತ ಒಂದನ್ನೊಂದು ಸಂಧಿಸಿದುವ, ಬೆಟ್ಟ ಬೆಟ್ಟಗಳಿಗೆ ಗುದ್ದಾಟವೆಸಗಿದಂತೆ ಸೇನೆಯ ಮುಂಭಾಗದವರಿಗೆ ಪರಸ್ಪರ ಯುದ್ಧ ವಾರಂಭಿಸಿತು. ಕತ್ತಿಯನ್ನು ಹಿಡಿದವರು ಕತ್ತಿಯವರೊಡನೆಯ, ಭಯದವರು ಭಲ್ಲೆ ಯದವರೊಡನೆಯೂ, ಧನುರ್ಧಾರಿಗಳು ಧನುರ್ಧಾರಿ