೧ T ಗಜಾಸುರಸಾರ 684 ಕಾಲಾಳುಗಳೂ, ನುಚ್ಚುನುರಿಯಾದ ತೇರುಗಳೂ, ಸದ್ದಡಗಿ ಕಣ್ಣು ಉಬ್ಬರಿಸಿ ಉರುತ್ತಿರುವ ಆನೆಗಳೂ, ಕತ್ತರಿಸಿ ಕಡಿತುಂಡಾಗಿ ಒಟ್ಟಲಾಗಿರು ವ ಕುದುರೆಗಳೂ, ರಣಾಂಗಣದಲ್ಲೆಲ್ಲ ಬಿದ್ದು ಭೀಕರವಾಗಿದ್ದುವು. ಎತ್ತ ನೋಡಿದರೂ ರಕ್ತಪ್ರವಾಹವೂ, ಮಾಂಸಖಂಡಗಳೂ, ಗುಂಡಮುಂಡಗ , ಕಿರೀಟಬಾಹುರೂರಗಳೂ, ಮುರಿದ ಛತ್ರಚಾಮರಗಳೂ ಹರಡಿಕೊಂ ಡಿದ್ದುವು. ಇದನ್ನೆಲ್ಲ ನೋಡಿ ಹರಿಬ್ರಹ್ಮರಿಗೂ ಇಂದ್ರಾದಿದಿತ್ಸಾಲಕರಿಗೂ ರೋಪವು ನೂರಡಿಯಾಯಿತು. ಈ ದೇವನಾಯಕರುಗಳೇ ಸತಃ ಯು ದೈಕ್ಕೆ ಅಣಿಯಾಗಿ, ಸುತ್ತಲೂ ಗಜಾಸುರನನ್ನು ಮುತ್ತಿ, ಮುಸಲ ಮುದ್ಧರ ಕುಂತ ಗದಾ ಬಾಣ ಪರಶುಗಳಿಂದ ಹೊಡೆದು ಬಡಿದು ಕಡಿದು ಬೊಬ್ಬಿರಿ ಯುತ್ತ ಬಂದರು. ಗಜರಾಜನು ಬುಗುರಿಯಂತೆ ಬಿರುಬಿರನೆ ತಿರುಗುತ್ತ ಸುಂಡಿಲನ್ನು ನಾಲ್ಕು ಕಡೆಯೂ ರಭಸದಿಂದ ತಿರುಗಿಸುತ್ತ, ಪ್ರಳಯಕಾಲ ದ ಮೆಘದಂತೆ ಗರ್ಜಿಸುತ್ತ, ಮೇಲೆಬಿದ್ದು, ಒಬ್ಬೊಬ್ಬರನ್ನಾಗಿ ರಥದಿಂ ದೆಳೆದು ಸುಂಡಿಲಿನಲ್ಲಿ ಸುತ್ತಿ ಅವರವರ ದಿಕ್ಕಿಗೆ ಒಗೆದು,ರಥಗಳನ್ನು ನೂಲ ಕಿ ಉರುಳಿಸುತ್ತಿದ್ದಿತು. ಬ್ರಹ್ಮನಮೇಲೆ ಬಲವಾಗಿ ಉಸುರನ್ನು ಬಿಟ್ಟು ಸೂತ್ಕರಿಸಿ ( ಸತ್ಯಲೋಕದಲ್ಲಿ ಸುಖವಾಗಿರು ಹೋಗು ?” ಎಂದು ಅಟ್ಟ ದಂತೆ ಆಕಾಶಕ್ಕೆ ಹಾರಿಸಿಬಿಟ್ಟಿತು. ಅಸ್ಟ್ರಲ್ಲಿ ವಿಷ್ಣುವು ಗಜಾಸುರನ ಮಹಾಪ್ರಳಯವನ್ನು ನೋಡಿ ಅತ್ಯಂತ ರೋಪಾವಿಷ್ಟನಾಗಿ, ತನ್ನ ಸುತ್ತ ರಥವನ್ನು ಗಜಾಸುರನ ಮುಂದಕ್ಕೆ ಸರಿಸಿ, ಪುಂಖಾನುಪುಂಖವಾಗಿ ಬಾಣಗ ಳನ್ನು ಆನೆಯಮೇಲೆ ವರ್ವಿಸಿದನು. ಇದನ್ನು ಕಂಡಕೂಡಲೇ ದೈತ್ಯನು ಸನೆ ಬಂದು, ಅವನ ರಥವನ್ನೆ ಸುಂಡಿಲಿನಿಂದ ಸುತ್ತಿ ಗರಗರನೆ ತಿರುಗಿ ನಿ ಬೀಸಿ ಎಸೆದನು. ಹರಿಯು ಕೈಯಲ್ಲಿ ಗದೆಯನ್ನು ಹಿಡಿದು ರಥದಿಂದ ದುಮಿಕಿ ನಿಮ್ಮನಾದವನ್ನು ಮಾಡಿ, ಆನೆಯ ಕುಂಭಸ್ಥಲದಮೇಲೆ ಬಲವಾಗಿ ಅಪ್ಪಳಿಸಿದನು. ಆಯೇಟನ್ನು ಆನೆಯು ಲಕ್ಷಿಸದೆ ಭನೆ ಹರಿಯನ್ನು ಅಟ್ಟ ಕೊಂಡುಹೋಗಿ ಹಿಡಿದುಕೊಂಡಿತು, ವಿಷ್ಣುವು ಅದರ ಸುಂಡಿಲಿನಿಂದ ನು ಣುಚಿಕೊಂಡು ಹಾರಿ, ದೂರದಲ್ಲಿ ನಿಂತು ಗರ್ಜಿಸಿದನು. ಹಗ್ಗಜೇಂದ್ರಾದಿಗ ಳ ಅವಸ್ಥೆಯಲ್ಲಿ ಹೀಗಾದುದನ್ನು ಲೋಕದ ಜನವು ನೋಡಿ,ಭೀತಿಪಟ್ಟು ನನಗಿನ್ನುಳಿಗಾಲವು ಬರಲಿಲ್ಲವೆಂದು ಚಿಂತಿಸುತ್ತ, ಶಿವನ ಮರೆಹೊಕ್ಕು ಟಿ
ಪುಟ:ಚೆನ್ನ ಬಸವೇಶವಿಜಯಂ.djvu/೧೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.