ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಚನ್ನ ಬಸವೇಶವಿಜಯಂ, (ಕಾಂಡ 4) ಅಧ್ಯಾಯ ಕ್ಕೆ ತಕ್ಕಂತೆಯೇ ನಾನೂ ಅವನಿಗೆ ಮುಯ್ಯಾಡದಿದ್ದರೆ ಈ ಬಾಳಿನಿಂದ ಹ ಲವೇನು ? ನನಗೆ ಸೃಷ್ಟಿಕರ್ತತವು ತಾನೇ ಏತಕ್ಕೆ ? ಕಾಡಿಗೆ ಹೋಗಿ ಸೇರಿ ತಪಸ್ಸನ್ನು ಮಾಡುತ್ತ ಕುಳಿತುಕೊಳ್ಳುವುದೇ ಮೇಲು ; ಅದಕ್ಕಾಗಿ ನನಗೆ ಅಪ್ಪಣೆಯನ್ನು ಕೊಡು, ಎಂದು ಕೈಮುಗಿದು ಬೇಡುತ್ತ ನಿಂತಿದ್ದ ನು, ಬ್ರಹ್ಮನಾದರೋ- ಅಯ್ಯಾ ! ಶಿವನಿಗೆ ಪ್ರತೀಕಾರವನ್ನು ಮಾಡು ವುದೆಂದರೆ ನನಗೂ ನಿನಗೂ ಅದು ಸಾಧ್ಯವೆ ? ಸುಲಭವಾಗಿ ನುಂಗುವ ಕೈತುತ್ತೇ ಅದು ? ಈ ಸಂಗತಿಯನ್ನೆಲ್ಲ ವಿಷ್ಣುವಿಗೆ ಹೇಳಿ ಅವನುತ್ತರವ ನ್ನು ಕೇಳುವ ” ಎಂದು ದಕ್ಷನೊಡನೆ ಕೂಡಿ, ಬ್ರಹ್ಮನು ನಾರಾಯಣನ ಒಳಗೆ ಹೋದಳು. ಇಬ್ಬರೂ ಕಂಡು ನಮಸ್ಕರಿಸಿದರು. ಶಿವನಿಂದ ದಕ್ಷ ನಿಗೆ ಆದ ಅಪಮಾನವನ್ನೆಲ್ಲ ಬ್ರಹ್ಮನು ತಿಳಿಸಿದುದಲ್ಲದೆ, ಅಶ್ವಮೇಧಯಾಗ ವನ್ನು ಮಾಡಿ, ಅಲ್ಲಿಗೆ ಶಿವನನ್ನು ಕರೆಯದೆ ಅವನಿಗೆ ಅಗ್ರಹವಿರ್ಭಾಗವನ್ನು ಕೊಡದೆ, ನಿಮಗೆ ಪುರೋಭಾಗವನ್ನು ಕೊಟ್ಟ, ಆ ಯಜ್ಞ ಸಮಯದಲ್ಲಿ ಸಕಲದೇವತೆಗಳ ಮಧ್ಯದೊಳಗೆ : ಶಿವನು ಬಹಿನ್ನತನು ” ಎಂದು ಸರಿ ರದ್ರನಿಗೆ ಅಪಮಾನಪಡಿಸಬೇಕೆಂದು ಯೋಚಿಸಿ, ಈ ದಕ್ಷನನ್ನು ನಿಮ್ಮ ಒಳಗೆ ಕರತಂದಿರ ವೆನು ; ಇದರ ವಿಷಯದಲ್ಲಿ ನಿಮ್ಮ ಭಿಪ್ರಾಯ ವೇನು ? ಎಂದು ಕೇಳಿದನು. ನಾರಾಯಣನಾದರೊ-ಶಿವಶಿವಾ ! ಸಕ ಲ ಯಸ್ಥ ವಿಕ7 ಆಗೆಲ್ಲ ಶಿವ ಅಧಿಪತಿ ; ಅಂಥವನನ್ನು ಬಿಟ್ಟು ಯಾಗ ದಲ್ಲಿ ನನಗೆ ಅಗ್ರಪೂಜೆಯನ್ನು ಕೊಡಬೇಕೆಂದು ಯೋಚಿಸುವುದು ನ್ಯಾ ಯವಲ್ಲ ; ಆತನೇ ಜಗದೇಕಾರಾಧ್ಯ; ನಮಗೂ ಆತನೆ ಯಜಮಾನ ; ಎಂದು ನುಡಿಯಲು, ಬ್ರಹ್ಮನು ತಾವು ಹಾಗೆ ಹೇಳಕೂಡದು, ನಿಮ್ಮ ನ್ನು ಮರೆಹೊಕ್ಕವರನ್ನು ಕೈಬಿಡದೆ ಉದ್ಧರಿಸಬೇಕು ಎಂದು ಮೊದಲಾಗಿ ಹೇಳಿ ಒಡಂಬಡಿಸಿ, ಕೊನೆಗೆ “ ಇನ್ನೆನುಮಾಡುವುದು ? ಶಿವನು ಇದ ನ್ನು ಕೇಳಿದರೆ ಕೋಪಿಸಿಕೊಳ್ಳದೆ ಬಿಡುವುದಿಲ್ಲ, ಆದುದಾಗಲಿ, ಯಜ್ಞಕಾ "ವನ್ನಾರಂಭಿಸಿರಿ, ನಾನೂ ಬರುತ್ತೆ ನೆ ?” ಎಂದು ವಿಷ್ಣುವು ಉತ್ತರ ಕೆನಿಡು.. ದಕ್ಷನೂ ಬ್ರಹ್ಮನೂ ಹೊರಟುಬಂದರು. ಮುಂದಾಗಿ ದಕ್ಷ ನು ಹೋಗಿ ತನ್ನ ಪಟ್ಟಣದಲ್ಲಿ ಯಾಗದ ಸುದ್ದಿಯನ್ನು ಸಾರಿಸಿ, ಹಿಮಾಲ ಯದ ಗಂಗಾದ್ವಾರದ ಹತ್ತಿರ ಯಜ್ಞಶಾಲೆಯನ್ನು ವಿರಚಿಸಿದನು, ಬ್ರಹ್ಮ