ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಕ್ಷಯಾಗವು ೧೫# ಎಲ್ಲವನ್ನೂ ಕೇಳುತ್ತ ಹುಸಿನಗೆನಗುತ್ತಿದ್ದನು. ತಂದೆಯ ದುಸ್ಮಸಂಕ ಲ್ಪವನ್ನು ಮಾರುತಿಯು ಕೇಳಿ, ಮನದಲ್ಲಿ ನೊಂದು, ಏನನ್ನಾದರೂ ಮಾ ಡಿ, ಇದರಿಂದ ಮುಂದೆ ಬರುವ ತಂದೆಯ ವಿಪತ್ತನ್ನು ಪರಿಹರಿಸಬೇಕೆಂದು ಯೋಚಿಸಿ, ಪೀಠದಿಂದೆದ್ದು , ಶಿವನ ಪಾದಕ್ಕೆ ನಮಸ್ಕರಿಸಿ, ಯಾಗಶಾಲೆಗೆ ಹೊಗಿ, ತಂದೆಗೆ ಹಿತವಾವವನ್ನು ಹೇಳಿ, ಅವನ ದುರ್ಬುದ್ಧಿಯನ್ನು ಬಿ ಡಿಸಿ, ಜ್ಞಾನೋದಯವನ್ನು ಮಾಡಿ ಬರುತ್ತೇನೆಂತಲೂ, ಅದಕ್ಕೆ ಅಪ್ಪಣೆ ಕೊಡಬೇಕೆಂತಲೂ ಬೇಡಿದಳು. ಶಂಕರನು ಸತಿಯೆ ! ಕರೆಯದವನ ಬಳಿಗೆ ಹೋಗಬಹುದೆ ? ನಿನ್ನ ಮಾತನ್ನು ಆ ಮೂರ್ಖನು ಕೇಳುವನೆ ? ಅಂತಹ ಸುಮತಿಯೇ ಅವನು ? ಆ ದುರುಳನ ಬಳಿಗೆ ಹೋಗುವುದು ನಿ ನಗೆ ತಕ್ಕುದಲ್ಲ, ಹೋಗಿ ಅವಮಾನಪಡಿಸಿಕೊಂಡು ಬರಬಾರದು, ಬೇಡ ಬೇಡ; ನಮ್ಮ ಮಾತನ್ನು ಕೇಳು ?” ಎಂದು ನುಡಿದನು, ಆದರೂ ದಾಕ್ಷಾ ಯಣಿಯು ಮತ್ತೆ ಮಣಿದು,- ತಂದೆಯ ಮನೆಗೆ ಮಗಳು ಹೋದರೆ ಅಪಮಾನವಾಗುವುದೆ ? ಎಂದಿಗೂ ಇಲ್ಲ, ಹೇಗಾದರೂವಾಡಿ ತಂದೆಯ ಮೂಡಬುದ್ಧಿಯನ್ನು ಬಿಡಿಸಿ ಬರುವೆನು ಎಂದು ಬಹು ವಿಧವಾಗಿ ಬೇಟ ದಳು. ಕೊನೆಗೆ ಶಿವನುಹಾಗಾದರೆ ಮುಂದೆ ಆದುದಾಗಲಿ; ನಾವೇನು ಮಾಡುವುದು ? ಹೋಗು, ಎಂದು ಅಪ್ಪಣೆಯಿತ್ತು, ನಂದಿ ಮೊದಲಾದ ಅಮರಗಣಂಗಳನ್ನು ಜತೆಯಲ್ಲಿ ಕಳುಹಿಕೊಟ್ಟನು. ಶಂಕರಿಯು ಬೇಗ ಬೇಗನೆ ಯಾಗಶಾಲೆಗೆ ಬರುತ್ತಿದ್ದಳು. ಒಬ್ಬ ಗಣವರನು ಮುಂದಾಗಿ ಯಾಗಶಾಲೆಗೆ ನಡೆದು ವಿಷ್ಣು ಬ್ರಹ್ಮಾದಿಗಳ ಮಧ್ಯದಲ್ಲಿ ಯಜ್ಞದೀಕ್ಷೆಯ ನ್ನು ಹೊಂದಿ ಕುಳಿತಿದ್ದ ದಕ್ಷನ ಮುಂಗಡೆಗೆ ಹೋಗಿ, ದೇವಾಧಿದೇವ ನಾದ ಪರಶಿವನ ಪತ್ನಿಯು ನಿನ್ನ ಯಾಗವನ್ನು ನೋಡುವುದಕ್ಕಾಗಿ ದಯ ಮಾಡಿಸುತ್ತಿರುವಳು, ಎಂದು ನುಡಿದನು. ದಕ್ಷನು ಕೇಳದವನಂತೆ ಗರ ದಿಂದ ಸುನ್ನು ನಿದ್ದನು. ಆ ಗಣವರನಾದರೋ- ಅಯ್ಯೋ ಮರುಳೇ ! ಇದೇಕೆ ಸುಮ್ಮನಿರುವೆ ? ನಾನು ಹೇಳಿದ ಮಾತು ಕೇಳಿಸಲಿಲ್ಲವೆ ? ಜಗ ದೀಶನ ಪತ್ನಿಯು ನಿನ್ನ ಪುಣ್ಯದ ಫಲವೇ ಆಕಾರವನ್ನು ಧರಿಸಿಬಂದಂತೆ ನಿನ್ನ ಮನೆಗೆ ಬರುತ್ತಿರುವಲ್ಲಿ ಇದಿರ್ಗೊಳ್ಳದೆ, ಅಮೃತವನ್ನೊದೆದು ಹೆಂಡ ವನ್ನು ಪರಿಗ್ರಹಿಸುವ ನೀಚರಂತೆ ನೀನು ನಡೆದುಕೊಳ್ಳಬಹುದೆ ? ಏಳು,