ವೀರಭದ್ರವಿಜಯವು 64, ಯ ಮಾತುಗಳೂ, ಉತ್ಸಾಹವಾದ್ಯಗಳೂ ಮೊಳಗುತ್ತಿದ್ದುವು, ರಕ್ತಪ ವಾಹವು ಮಾಂಸದೊಟ್ಟಿಲನ್ನು ಕೊಚ್ಚಿ ಹರಿಯುತ್ತಿದ್ದಿತು. ಭೂತಬೇ ತಾಳ ಪೈಶಾಚ ಶಾಕಿನಿ ಡಾಕಿನಿಯರು ಮಾಂಸವನ್ನು ತಿಂದು ರಕ್ತವನ್ನು ಹೀರಿ ತೇಗಿ, ಮೂಳೆಯ ಸರವನ್ನು ಹಾಕಿ, ಕೈಯಲ್ಲಿ ರುಂಡವನ್ನು ಹಿಡಿ ದು, ತಲೆಗೆ ಕರುಳನ್ನು ಸುತ್ತಿ, ಮೈಗೆ ಚನ್ನವನ್ನುಟ್ಟು, ಕೋರೆದಾಡೆಗಳ ನ್ನು ಕಿರಿದು ಕುಣಿದಾಡುತ್ತಿದ್ದುವು. ವೀರೇಶನ ಮಹಾಗರ್ಜನೆಯು ಕ್ಷಣಕ್ಷಣಕ್ಕೆ ' ತನ್ನ ಸೇನೆಯ ಶೌದ್ಯವನ್ನು ಉಕ್ಕಿಸುತ್ತಲಿದ್ದಿತು. ರುದ್ರ ಗಣದ ಹೊಡೆತದಿಂದ ಗಗನತಟದಲ್ಲಿ ರುಂಡಮುಂಡಗಳ ಹಾರಾಟವು ಹೆಚ್ಚಿ ತು, ಬರಬರುತ್ತ ರುದ್ರಸೇನೆಯ ಹೊಡೆತವು ಪ್ರತಿಪಕ್ಷದವರಿಗೆ ದುಸ್ಸ ಹವಾಯಿತು. ಕಿಚ್ಚನ್ನು ಕಂಡ ಇರುವೆಗಳಂತೆ ದೇವತೆಗಳು ಮುಖವ ನ್ನು ಹಿಂದಿರುಗಿಸಿದರು, ಕೆಲರು ದಿಕ್ಕುಗೆಟ್ಟು ಓಡಿದರು, ಕೆಲರು ಗಡಗ ಡನೆ ಕೈ ಕಾಲ್ನಡುಗಿ ಶರಣಾಗತರಾದರು. ಕೆಲರು ಹುಲ್ಲನ್ನು ಕಚ್ಚಿ ಹಲ್ಲ ನ್ನು ಕಿರಿದು ಪ್ರಾಣದಾನವನ್ನು ಬೇಡಿದರು, ಮತ್ತೆ ಕೆಲರು ಕೈಕಾಲು ರಿದು ರಕ್ತವನ್ನು ಸುರಿಸಿ ಕುಂಟುತ್ತ ಕುಪ್ಪರಿಸುತ್ತೆ ಬ್ರಹ್ಮನಬಳಿಗೆ ಹೋ ಗಿ, ಓ ! ಯೆಂದು ಕೂಗಿಕೊಂಡು ಬಿದ್ದು ಅತ್ತು, ತಮಗಾದ ಪರಿಭವ ವನ್ನೆಲ್ಲ ಹೇಳಿಕೊಂಡು, ಅಯ್ಯೋ ! ನನಗೇನು ವಿಪತ್ತನ್ನು ತಂದಿರಿ ? ಇದೆಲ್ಲಿಯ ಹಾಳುಯಾಗ ! ಅವನೇನು ಪ್ರಳಯಕಾಲದರುದ್ರನೋ ! ಕರಿ ಯ ಮೋಡದ ತಾತನೋ ! ಭೂತನಾಥನೋ ! ಶಿವನೇ ಬಲ್ಲ. ಅವನಿದಿರಿ ಗೆ ನಿಂತು ಉಳಿದು ಬರುವವರಾರು ? ಇನ್ನು ನಮಗೆ ಗತಿಯೇನು ? ಎಂದು ಮೊರೆಯಿಟ್ಟರು. ಬ್ರಹ್ಮನು... ಇದೇನು ಮಹಾಸುದ್ದಿಯೆಂದು ತತ್ತರಿ ಸುವಿರಿ ? ಬಿಡಿ; ಎಂದು ತಿರಸ್ಕರಿಸಿ, ರೂಪದಿಂದ ಹುಂಕರಿಸಿ ಹಂಸವ ಸ್ನೇರಿ ತನ್ನ ಮುಖ್ಯಸೇನೆಯೊಡನೆ ತಾನೇ ವೀರಭದ್ರನಮೇಲೆ ಯುದ್ಧಕ್ಕೆ ಸಾಗಿದನು. ಇವನ ಸೈನಿಕರು ಮುರಿದುಬಿದ್ದೋಡುತ್ತಿದ್ದ ಕಿನ್ನರ ಯಕ್ಷ ವಿದ್ಯಾಧರ ಗಂಧರಾದಿಗಳನ್ನೆಲ್ಲ ಜರೆದು, ಹುರಿಮಾಡಿ ಒಟ್ಟುಗೂಡಿಸಿ, ರು ದ್ರಗಣಸೈನ್ಯದ ಮೇಲೆ ಬಿದ್ದರು. ಆದರೇನು ? ಹಾವುಗಳ ಗುಂಪು ಗರು ಡನ ಮೇಲೆ ಬಿದ್ದರೆ ಅದು ಅಂಐವುದೆ ? ತರಗೆಲೆಗಳು ಅಗ್ನಿಯನ್ನು ಮು ತಿ ಆರಿಸಬಲ್ಲವೆ ? ಕುರಿಗಳ ಹಿಂಡು ಹುಲಿಯನ್ನು ಕೆಣಕಿ ಬದುಕಿರುವು
ಪುಟ:ಚೆನ್ನ ಬಸವೇಶವಿಜಯಂ.djvu/೧೮೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.