ದಕ್ಷಶಿರಚ್ಛೇದನವು ೧೬n ಳುಹಿಕೊಳ್ಳಿರಿ ?” ಎಂದು ವಿಷ್ಣುವು ಗರ್ಜಿಸಿ ನುಡಿಯುತ್ತ, ತೀಕ್ಷ್ಯ ವಾದ ಬಾಣಾವಳಿಗಳನ್ನು ಹೂಡಿ, ಕರ್ಣಾಂತವಾಗಿ ಸೆಳೆದು ವೀರಭದ್ರ ಶನ ಸೇನೆಯ ಮೇಲೆ ಪ್ರಯೋಗಿಸುತ್ತ ಬಂದನು. ಆ ಯೇ ತಿನಿಂದ ಪ್ರತಿಪಕ್ಷದ ಸೇನೆಯಲ್ಲಿ ಆನೆ ಕುದುರೆ ಕಾಲಾಳು ರಥಗಳೆಲ್ಲ ನುಚ್ಚುನೂ ರಾಗಿ, ಕಳೆದುಳಿದವರು ಪ್ರಾಣಭೀತಿಯಿಂದ ವೀರಭದ್ರೇಶನ ಮರೆಹೊಕ್ಕು ಗೊ೪ಟ್ಟರು, ಅದನ್ನು ನೋಡಿ ವೀರೇಶನು ಪ್ರಳಯಕಾಲದ ರುದ್ರನಂತ ಕೆರಳ, “ ನನ್ನ ಸೇನೆಗೆ ಇಷ್ಟು ಭೀತಿಯನ್ನುಂಟುಮಾಡಿದ ಆ ಕಡುಗಲಿ ಯಾರು ? ಅವನನ್ನಿಗಳೇ ನೀಳುವೆನು ?” ಎಂದು ಹೇಳಿ, ಕಿಡಿಕಿಡಿಯಾ ಗಿ, ರಥವನ ಮುಂಗಡೆಗೆ ಸರಿಸಿದನು. ಇದೋ ಅಷ್ಮೆದಿಕ್ಕಾಲಭೈರ ವನು ಬಂದನು ! ಇದೋ ಬ್ರಹ್ಮಾಂತಕನು ಬಂದನು ! ಎಂದು ಮೊದ ಲಾಗಿ ಕೂಗಿದಂತೆ ಕಹಳೆಗಳು ಭೋರ್ಗರೆದುವು. ಆಗ ವೀರೇಶನು ಹರಿ ಯ ಮುಂಗಡೆಗೆ ಬಂದು, ಭಲಾ ಭಲಾ ! ಧೀರನೇ ! ಈ ಸೈನ್ಯದಲ್ಲೆಲ್ಲ ನೀನೊಬ್ಬನೆ ಶೂರನಾಗಿ ಕಾಣುತ್ತೀಯೆ ! ನನ್ನ ಸೇನೆಯನ್ನು ಹಿಮ್ಮೆ ಟ್ಟುವಂತೆ ಮಾಡಿದ ನಿನ್ನ ಬಾಣಪ್ರಯೋಗಶಕ್ತಿಗೆ ನಾನು ಮೆಚ್ಚಿದೆನು, ನಿನ್ನ ಹೆಸರೇನು ? ಎಂದು ಕೇಳುತ್ತ, ಬಾಣವರ್ಷವನ್ನು ವಿಷ್ಣುವಿನ ಮೇಲೆ ಕರೆದನು. ಹರಿಯು ನಸುನಗೆ ನಗುತ್ತ, “ ವೀರನೇ ! ನೀನು ನನ್ನ ಸಾಹಸವನ್ನು ಮೆಚ್ಚಿದರೆ ಫಲವೇನು ? ನೀನು ಮಾನವನ್ನುಳುಹಿ ಕೊಳ್ಳಬೇಕಾದರೆ ಸೆರೆಯಲ್ಲಿಟ್ಟಿರುವ ನಮ್ಮ ದೇವಸೇನೆಯವರನ್ನು ಬಿಟ್ಟು, ಶರಣಾಗತನಾಗು ?” ನಾನೇ ಲೋಕರಕ್ಷಕನಾದ ಅಚತನು, ಎಂದು ಹೇಳುತ್ತ, ಪ್ರತಿಬಾಣಗಳಿಂದ ವೀರೇಶನ ಬಾಣಗಳನ್ನೆಲ್ಲ ಖಂಡಿಸಿದನು. ವೀರೇಶನಾದ ವಿಷ್ಣುವಿನ ಮಾತನ್ನು ಕೇಳಿ, ನಕ್ಕು, ದೇವತೆಗಳ ನ್ನು ಬಿಡಿಸಿಕೊಳ್ಳುವ ಶಕ್ತಿಯು ನಿನಗಿದೆಯೆ ? ನಿನ್ನ ದಶಾವತಾರಗಳಲ್ಲ ದಲೇ ನಿನ್ನ ಅಚ್ಚತತವು ಗೊತ್ತಾಗಿದೆಯಷ್ಮೆ ! ಈಗ ಮೊದಲು ನಿನ್ನ ನ್ನು ನೀನು ಕಾಪಾಡಿಕೊಂಡರೆ ನಿನ್ನ ಲೋಕರಕ್ಷಕತ್ರವು ಗೊತ್ತಾಗು ವುದು! ಯಾಗದಲ್ಲಿ ಪಶುಗಳನ್ನು ಒಪ್ಪಿಸಿಕೊಂಡ ಕೊಬ್ಬು ನಿನಗೆ ಹೆಚ್ಚಾ ಗಿರಬಹುದು ! ಅದನ್ನೆಲ್ಲ ಕಕ್ಕಿಸುತ್ತೇನೆ ?” ಎಂದು ಹೇಳಿ, ಒಂಭತ್ತು ಬಾಣಗಳನ್ನು ಬಂದೇ ಆವೃತ್ತಿ ವಿಷ್ಣುವಿನ ಮೇಲೆ ಪ್ರಯೋಗಿಸಿ, ವು
ಪುಟ:ಚೆನ್ನ ಬಸವೇಶವಿಜಯಂ.djvu/೧೮೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.