೧*o ಚನ್ನಬಸವೇಶವಿಜಯಂ, (೪ಾಂಡ 4) [ಅಧ್ಯಾಯ ಯೋಗವನ್ನು ಮಾಡುವುದಕ್ಕಾಗಿ ಹೋಗೆಂದು ನೀವು ಬೆಸಸಿ ಕಳುಹಬ ಹುದೆ? ನಾನು ಶಿವನನ್ನು ಕೆಣಕಿ ಉರಿದುಹೋಗದೆ ಬದುಕುವುದುಂಟೆ? ೨೨ ಎಂದು ದೈನ್ಯದಿಂದ ಕೇಳಿಕೊಂಡನು, ಆದರೂ ಹರಿ ಬ್ರಹ್ಮಾದಿಗಳು ಜಗನ್ನಾಶವಾಗುತ್ತಿರುವ ಸ್ಥಿತಿಯನ್ನೂ, ಅದರ ಉಳಿವು ನಿನ್ನಿಂದಲೇ ಆಗ ಬೇಕಾಗಿರುವುದೆಂಬುದನ್ನೂ, ಇಂಥ ಮಹಾಕಾಗ್ಗಕ್ಕಾಗಿ ನಿನ್ನೊಬ್ಬನ ಪ್ರಾಣವನ್ನು ಕೊಡುವುದು ಅತ್ಯಂತ ಕಿರಿ ಪ್ರತಿಷ್ಠೆಗೆ ಕಾರಣವಾಗು ವುದೆಂಬುದನ್ನೂ, ಬಹುವಿಧವಾಗಿ ಮನ್ಮಥನಿಗೆ ಹೇಳಿ, ಒಡಂಬಡಿಸಿದ ರು, ಮದನನು ತಥಾಸ್ತು ಎಂದು ನಮಸ್ಕರಿಸಿ, ಅಪ್ಪಣೆಪಡೆದು ಹೊರ ಟನು, ವಿಷ್ಣುವು ಸರದೇವತೆಗಳಿಗೂ ಧೈರವನ್ನು ಹೇಳಿ ಕಳುಹಿಕೊ ಟ್ಟನು. ಎಂದು ಚೆನ್ನಬಸವೇಶನು ನುಡಿದನೆಂಬಿಲ್ಲಿಗೆ ೭ ನೆ ಅಧ್ಯಾಯವು ಸಂಪೂರ್ಣವು.
- - V ನ ಅ ಧ್ಯಾ ಯ ವು.
- - ಕಾ ಮ ದ ಹ ನ ವು - ಎಲೆ ನಿದ್ದ ರಾಮೇಶನೆ ! ಬಳಿಕ ಮನ್ಮಥನು ತನ್ನ ಪಟ್ಟಣಕ್ಕೆ ಬಂ ದು, ಮಿತ್ರನಾದ ಮಂದಮಾರುತನನ್ನು ಸವಿಾಪಕ್ಕೆ ಕರೆದು, ಸಖನೆ ! ಈಗ ನಾವು ಶಿವನ ಮೇಲೆ ಯುದ್ಧಕ್ಕೆ ಹೋಗಬೇಕಾಗಿದೆ ; ಸೇನಾಪತಿ ಯಾದ ವಸಂತನನ್ನು ಸಕಲಸೈನ್ಯದೊಡನೆ ಕೂಡಿ ಬರಬೇಕೆಂದು ತಿಳಿ ಸು, ಎಂಬದಾಗಿ ಬೆಸಸಿ ಕಳುಹಿದನು, ಅದರಂತೆಯೇ ಅವನು ಹೋಗಿ ತಿಳಿಸಲು, ವಸಂತನು ಸರ ಸೇನೆಯೊಡನೆ ಸನ್ನದ ನಾಗಿ ಹೊರಟನು, ಮಾ ವಿನ ಮರಗಳು ಚಿಗುರಿದುವು. ಮಲ್ಲಿಗೆಯು ಮೊಗೇರಿತು, ಸಂಪಗೆಯು ಸೋಂಪೇರಿತು. ಬಕುಳವು ಮುಕುಳಿತವಾಯಿತು. ಮಾದರಿಯು ಹೂವೇ ರಿತು, ಅದರ್ಗಂಚಿಯು ಸುವಾಸನೆಯನ್ನು ಬೀರಿತು. ಅಶೋಕೆಯು ಚಿಗು ರ್ಗವಿದಿತು. ತಾವರೆಗಳು ಅರಲೇರಿದುವು. ಇವುಗಳ ವೈಭವದಿಂದ ವಸಂ