ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ff ೧ ಚನ್ನಬಸವೇಶವಿಜಯಂ (Fಾ ಡ ೩) [ಅಧ್ಯಾಯ ರತಿಯ ಗಂಡನನ್ನು ಕರೆದುಕೊಂಡು ಹೋಗಿ ಸುಡಿಸಿಬಿಟ್ಟಳೆಂಬ ಲೋ ಕಾಸವಾದವು ೫, ಮತ್ತೂ ಈ ನಡುಗಾಡಿನಲ್ಲಿ ಈ ಯವನದಣೆಯೊಳಗೆ ವಾಸಮಾಡಿಕೊಂಡಿರಬೇಕಾದುದು ೬, ಶಿವನು ಆ ಸ್ಥಲವನ್ನೇ ಬಿಟ್ಟು ಹೊರಟುಹೋಗಿ ತನ್ನ ಸಂಕಲ್ಪಕ್ಕೆ ಭಂಗವನ್ನುಂಟುಮಾಡಿದುದು ೬, ಹೀಗೆ ಈ ಏಳರಾಟಕ್ಕೆ ನಾನು ಗುರಿಯಾದೆನಲ್ಲ ! ಎಂದು ಕೊರಗಿದಳು. ಬಳಿಕ ಮಹಾಕರುಣದಿಂದ ರತಿಯನ್ನು ಕರೆದು, ತಲೆ ಸವರಿ, ಅಮ್ಮಾ ! ನಿನ್ನ ಗಂಡನನ್ನು ನಾನು ಕರೆದುಕೊಂಡು ಬಂದುದೇನೋ ನಿಜ, ಅದ ಕ್ಯಾಗಿ ನಾನು ತಪಸ್ಸನ್ನಾದರೂ ಮಾಡಿ ಶಿವನನ್ನು ಮೆಚ್ಚಿಸಿ, ನಿನ್ನ ಗಂಡ ನನ್ನು ನಿನ್ನಲ್ಲಿಗೆ ಕಳುಹಿಕೊಡುತ್ತೇನೆ, ಶೋಕಿಸಬೇಡ, ಎಂದು ಹೇಳಿ, ಸಮಾಧಾನಪಡಿಸಿ, ಕಳುಹಿ, ಮುಂದೆ ಶಿವನನ್ನು ಒಲಿಸಿಕೊಳ್ಳುವ ಮಾ ರ್ಗವೇನೆಂಬುದನ್ನು ಯೋಚಿಸ ತೊಡಗಿದಳು. ಎಂದು ಚೆನ್ನಬಸವೇಶನು ನುಡಿದನೆಂಬಿಲ್ಲಿಗೆ ಎಂಟನೆ ಅಧ್ಯಾಯವು ಸಂಪೂರ್ಣವು. - - ೯ ನೆ ಅಧ್ಯಾಯವು. -+#- ಗಿ ರಿ ಜಾ ವಿವಾಹ ಪ ಯ ತ ವು - ಎಲೆ ಸಿದ್ದರಾಮೇಶನೆ ! ಕೇಳು, ಬ೪ಕ ಸಾರ ತಿಯು ಸಂಘಕ್ಷೇ ತ್ರದೊಳಗೆಲ್ಲ ತನ್ನ ಮನಸ್ಸಿಗೆ ಅನುಕೂಲವಾದ ಸ್ಥಲವಾವುದೆಂಬುದನ್ನು ಹುಡುಕುತ್ತ ದಟ್ಟವಾದ ನೆಳಲಿನ ಮರಗಳ ಬುಡದಲ್ಲಿ ನಿಂತು, ಶಿವನು ತ ಇಲ್ಲಿ ತೋರಿಸಿದ ಔದಾಸೀನ್ಯವನ್ನು ನೆನೆದು ವ್ಯಸನಪಡುತ್ತ, ತನ್ನ ಸಖಿ ಯರಾದ ಜಯವಿಜಯೆಯರನ್ನು ಕುರಿತು ಪರಶಿವನಿದ್ದ ಬಳಿಗೆ ನಾನೇ ಹೋಗಿ ಸೇವೆಮಾಡಿಕೊಂಡಿದ್ದರೂ ನನ್ನನ್ನು ಮಾತನಾಡಿಸದೆ ತಿರಸ್ಕರಿಸಿ ಹೊರಟುಹೋದನು, ಇರಲಿ; ಇನ್ನು ಆತನೇ ನನ್ನನ್ನು ಹುಡುಕಿಕೊಂಡು ಬರುವಂತೆ ಮಾಡುತ್ತೇನೆ ನೋಡಿರಿ : ” ಎಂದು ಧೈದ್ಯದಿಂದ ನುಡಿದು, ಈ