ಈ ಪುಟವನ್ನು ಪರಿಶೀಲಿಸಲಾಗಿಲ್ಲ.

466 ಚನ್ನಬಸವೇಶವಿಜಯಂ (ಕಾಂಡ) [ಅಧ್ಯಾಯ ತಯೂ, ಉಳಿದ ಜಗತ್ಪಾಮಾನ್ಯಕ್ಕೂ ಅನಂಗನಾಗಿ ಮನೋಭವ ನಾಗುವಂತೆಯೂ ವರವನ್ನು ಕೊಟ್ಟಿರುವೆನು ; ನಿನ್ನಿಷ್ಟದಂತೆ ಗಿರಿರಾಜ ನರಮನೆಯಲ್ಲಿ ವಿವಾಹವಾಗುವೆನು ; ಎಂದು ವರವಿತ್ತು, ಕೈಲಾಸಕ್ಕೆ ನಡೆದನು. ಇದೆಲ್ಲವನ್ನೂ ಕಂಡು ಜಯ ವಿಜಯೆಯರು ಪರಮಾನಂ ದಗೊಂಡರು, ರತಿಯು ಪತಿಯನ್ನು ಕಂಡು ಹಿಗ್ಗಿ, ಪಾರತಿಯ ಪಾದಕ್ಕೆ ನಮಸ್ಕರಿಸಿ, ಬೀಳ್ಕೊಂಡಳು. ನಡೆದ ಸುದ್ದಿಯು ಪರತರಾಜನಿಗೆ ಮು ಟ್ಟಲು, ಸತಿಪತಿಗಳು ಸಂತೋಷಸಮುದ್ರದಲ್ಲಿ ಮುಳುಗಿ, ಪಟ್ಟಣವನ್ನೆಲ್ಲ ಅಲಂಕರಿಸುವಂತೆ ಅಪ್ಪಣೆ ಮಾಡಿ, ಮಗಳನ್ನು ಇದಿರ್ಗೊಂಡು ಕರೆತರು ವುದಕ್ಕಾಗಿ ಕಲಶಕನ್ನಡಿಗಳಿಂದಲೂ ವಾದ್ಯವೈಭವದಿಂದಲೂ ಹೊರಟು, ಊರಹೊರಗೆ ಬಂದ ಜಗದಂಬಿಕೆಯನ್ನು ಕಂಡು, ಪಾದಕ್ಕೆ ಮಣಿದು, ಪ್ರತಿಯಾಗಿ ನಮಸ್ಕರಿಸಿದ ದೇವಿಯನ್ನು ತೆಗೆದೆತ್ತಿ ತಬ್ಬಿ ಮುದ್ದಾಡಿ, ಹರ್ಷ ಗೊಂಡರು, ಮತ್ತೂ “ ಎಲೌ ತಾಯೆ : ತಪಸ್ಸಿನಲ್ಲಿ ಎಷ್ಟು ಬಳಲಿದೆ ! ಶಿವನನ್ನು ತಪಸ್ಸಿನಿಂದ ಮೆಚ್ಚಿಸುವುದು ಸಾಮಾನ್ಯವೆ ? ಹರಿಬ್ರಹ್ಮಾದಿಗ ೪ಗೂ ಕೂಡ ಸುಲಭಗೋಚರನಲ್ಲದ ಮಹಾದೇವನನ್ನು ನನ್ನ ಮನೆಗೆ ಬರುವಂತೆ ಮಾಡಿ ನನ್ನ ವಂಶವನ್ನು ಪಾವನಗೊಳಿಸಿದೆ ! ನಿನ್ನ ದೆಸೆ ಯಿಂದ ನಾವು ಕೃತಾರ್ಥರಾದೆವು. ?” ಎಂದು ಮೊದಲಾಗಿ ನುಡಿಯುತ್ತ, ಮನೆಗೆ ಕರೆದುಕೊಂಡುಹೋದರು. ಬಾಗಿಲಲ್ಲಿ ಆರತಿಗಳನ್ನು ಬೆಳಗಿ ಪಾದವನ್ನು ತೊಳೆದು ಒಳಹೊಗಿಸಿ, ಪೀತಾಂಬರವನ್ನು ಡಿಸಿ, ರತ್ನಾಭರ ಮಾಲ್ವಾದಿಗಳಿಂದಲಂಕರಿಸಿ, ಪಡಸಾನ್ನಭೋಜನವನ್ನು ಮಾಡಿಸಿ, ಗಿ ರಿರಾಜಮೇನಕಿಯರು ಪಾರತಿಯಲ್ಲಿ ಪುತ್ರೀಭಾವವನ್ನು ಬಿಟ್ಟು ಪರಾಶ * ಯೆಂಬ ಭಾವದಿಂದ ಭಕ್ತಿಯುತರಾಗಿ ಉಪಚರಿಸುತ್ತಿದ್ದರು. ಅತ್ತ ಪರಶಿವನು ಕೈಲಾಸದಲ್ಲಿ ತನ್ನ ಬಳಿಗೆ ಸಪ್ತ ಮಹರ್ಷಿಗಳನ್ನು ಬರಮಾಡಿ ಕೊಂಡು, ಗಿರಿರಾಜನ ಕುವರಿಯನ್ನು ತಾನು ಮದಿವೆಯಾಗಬೇಕೆಂದು ಸಂ ಕಲ್ಪಿಸಿರುವೆನೆಂತಲೂ, ಅದಕ್ಕಾಗಿ ನೀವುಗಳು ಅಲ್ಲಿಗೆ ಹೋಗಿ ಹೆಣ್ಣನ್ನು ಕೇಳ ಬನ್ನಿರೆಂತಲೂ ಹೇಳಿಕಳುಹಿದನು, ಅವರು ಹಾಗೆಯೇ ಆಗಲೆಂದೋ ೩, ಸಂತೋಷದಿಂದ ಗಿರಿರಾಜನ ಬಳಿಗೆ ಬಂದರು. ಆತನು ಮಹರ್ಷಿಗಳ ನ್ನು ಉಚಿತರೀತಿಯಿಂದ ಸತ್ಕರಿಸಿ,ಬಂದಕಾರಣವೇನೆಂದು ಬೆಸಗೊಂಡನು.