೧೦) ಗಿರಿಜಾಕಲ್ಯಾಣವು. cb ನ್ನು ಆಕರ್ಷಿಸಿ ತೆಗೆದುಕೊಂಡು ಹೋಗಿ ತನ್ನ ಶಿಷ್ಯರಾದ ರಾಕ್ಷಸರಿಗೆ ಕೊಟ್ಟು ಕುಡಿಸಿ ಅವರನ್ನು ಸವಿಲ್ಲದವರನ್ನಾಗಿ ಮಾಡಬೇಕೆಂದು ಶು ಕನು (ಚುಕ್ಕಿಯು) ಯೋಚಿಸಿ ಒಂದು, ಚಂದ್ರಮಂಡಲದ ಮಧ್ಯದಲ್ಲಿ ಸೇರಿಕೊಂಡಿರುವನೋ ಎಂಬಂತೆ ದೇವಿಯ ಮುಖಮಂಡಲದ ಮಧ್ಯದ ಲ್ಲಿರುವ ಮುತ್ತಿನ ಮೂಗುತಿಯ ತೋರುತ್ತಿದ್ದಿತು. ಆ ದೇವಿಯ ಪ್ರತಿ ಯೊಂದು ಕಣ್ಣನ್ನೂ ಇದು ನೈದಿಲೆ, ಇದು ತಾವರೆ, ಇದು ನನ್ನದು, ತ ದು, ಎಂದು ಪರಸ್ಪರಸ್ಪರ್ಧೆಯಿಂದ ಪ್ರೀತಿಸುವುದಕ್ಕಾಗಿ ಸೂರ ಚಂದ್ರಮಂಡಲಗಳೇ ಬಂದು, ಆ ಕಣ್ಣುಗಳ ಒತ್ತಿನಲ್ಲಿ ನಿಂತುಕೊಂಡಿ ರುವಂತೆ ದೀರ್ಘವಾದ ಲೋಚನದ ಪಕ್ಕದಲ್ಲಿರುವ ರನ್ನದೋಲೆಗಳು ಒ ಪ್ಪುತ್ತಿದ್ದುವು. ನಾರತಿಯನ್ನು ನೋಡಿದ ಒಬ್ಬ ಸಖಿಯ- ನಾರೀಕುಲ ಕೈಲ್ಲ ಭೂಷಣವಾದ ಈ ತಾಯಿಗೆ ಬೇರೆ ಭೂಷಣಗಳೇತಕ್ಕೆ ? ಸಕಲ ದೇವಾಂಗನೆಯರ ಮಸ್ತಕದ ಮನೆಯೇ ತಾನಾಗಿರುವ ಈ ದೇವಿಗೆ ಬೇ ರೆ ನಿಮಂತದ ಮಣಿ ಬೆತಕ್ಕೆ ? ಸತೀಕುಲಕ್ಕೆ ತಿಲಕವಾಗಿರುವ ಈ ಜ ಗದಂಬೆಗೆ ಬೇರೆ ತಿಲಕವೇತಕ್ಕೆ ? ತಾನೇ ಕುಸುಮಕೋಮಲೆಯಾದ ಈ ನಮ್ಮ ಧ್ವನಿಗೆ ಬೇರೆ ಹೂವಿನ ಮಾಲೆಯೇತಕ್ಕೆ ? ಎಂದು ಇನ್ನೊಬ್ಬ ಸವಿಯನ್ನು ಕೇಳಲ, ಆಕೆಯು- ( ಶೃಂಗಾರಕ್ಕೆ ಮತ್ತೊಂದು ಶೃಂಗಾ ರವಿಲ್ಲದಿದ್ದರೂ ಮಂಗಳ ಒರ್ಘವಾಗಿ ಅಲಂಕರಿಸಿರುವೆವು ' ಎಂದಳು. ಮ ತೊಬ್ಬಳು- ಸರಮಂಗಳೆಗೆ ಮಂಗಳವನ್ನು ಮಾಡುವುದೆಂದರೇನು ? ಎಂದು ಕೇಳಲು, ಇನ್ನೊಬ್ಬಳು- ಲೋಕಾಚಾರನಿಯೋಗಕ್ಕಾಗಿ ಮಾ ಡಿರುವೆವು ಎಂದು ಹೇಳಿ ಸಮಾಧಾನಗೊಳಿಸಿದಳು, ಹೀಗೆ ಅಲಂಕಾರವೂ ರಿತೆಯಾದ ಸ್ವರಮಂಗಳಯು ರಾಣಿವಾಸದಲ್ಲಿ ಪರಶಿವನ ಮೋಹನದ ಖನಿ ಯಾಗಿ ರಂಜಿಸಿರುತ್ತಿದ್ದಳು ಎಂದು ಚೆನ್ನಬಸವೇಶನು ನುಡಿದ ನೆಂಬೆಲ್ಲಿಗೆ ಒಂಭತ್ತನೆ ಅಧ್ಯಾಯವು ಸಂಪೂರ್ಣವು. - ೧೦ ನೆ ಅಧ್ಯಾಯ. ��) ಗಿ ರಿ ಜಾ ಕ ಲ್ಯಾ ಣ ವು - ಕಲ್ಯಾಣಮಂಟಪದಲ್ಲಿ ವಿವಾಹಾಂಗವಾದ ಪೂರ್ವಕಾರಗಳಲ್ಲವೂ
ಪುಟ:ಚೆನ್ನ ಬಸವೇಶವಿಜಯಂ.djvu/೨೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.