- ೧೦] ಕುಮಾರ ತಾರಕಸೇನಯುದ್ದವ en* ದಿಟ್ಟ ಹೆಜ್ಜೆಯನ್ನು ಹಿಂದೆಗೆಯದಿರಿ, ರಾಕ್ಷಸರ ಪೌರುಷವನ್ನು ಲಕ್ಷ ಮಾಡಬೇಡಿರಿ, ಹೊಡೆಯಿರಿ, ತಿವಿಯಿರಿ, ಬಗಿಯಿರಿ, ಹಿಡಿಯಿರಿ, ಬಡಿ ಯಿರಿ ” ಎಂದು ಮೊದಲಾಗಿ ಹೇಳಿ ಉತ್ಸಾಹಗೊಳಿಸುತ್ತ, ರಾಕ್ಷಸರ ಮೇಲೆ ಬಿದ್ದು ಕತ್ತರಿಸುತ್ತ ಬಂದು, ವಜನಾಭನು ದೇವತೆಗಳ ಸಾಹ ಸವನ್ನು ನೋಡಿ ರೋಷಾರುಣನೇತ್ರನಾಗಿ, ಧನುಸ್ಸಿನಿಂದ ಎಡೆವಿಡದೆ ಬಾಣದ ಸಮೂಹವನ್ನು ಎಲ್ಲ ಕಡೆಗೂ ಪ್ರಯೋಗಿಸುತ್ತ, ಕ್ಷಣೇ ಕ್ಷಣೆ ಹೆಚ್ಚುತ್ತಿರುವ ವೀರಾವೇಶದಿಂದ ಆರ್ಭಟಿಸುತ್ತ, ಪ್ರಳಯಕಾಲದ ರುದ್ರ ನಂತೆ ಭೀಕರವಾಗಿ ಪ್ರತಿಭಟರನ್ನು ಕಡಿದು ಮಲಗಿಸುತ್ತ, ದೇವನಾಯ ಕರನ್ನು ಮೂದಲಿಸಿ, ಇಂದ್ರನನ್ನು ಹೊಡೆದು, ಅಗ್ನಿಯನ್ನು ಹಿಂದಕ್ಕೆ ಸರಿಸಿ, ಯಮನ ಸಾಹಸವನ್ನು ನಿಲ್ಲಿಸಿ, ನಿಖರುತಿಯ ಶರೀರವನ್ನು ಜ ರ್ರುರಗೊಳಿಸಿ, ವರುಣನನ್ನು ಗಾಯಮಾಡಿ, ವಾಯುವಿನ ದೇಹವನ್ನು ಸೀಳಿ, ಕುಬೇರನ ರಥವನ್ನು ಹಾಳ್ಳಾಡಿ, ಈಶಾನನ ಎದೆಯಲ್ಲಿ ಬಾಣ ವನ್ನು ನಟ್ಟ, ಉಳಿದ ಸಾಧಾರಣದೇವತೆಗಳಿಗೆಲ್ಲ ಕೈಕಾಲುಮುರಿದು ಗಾಯಮಾಡಿ ರಕ್ತವನ್ನು ಕಾರಿಸಿ, ನಾನಾವಿಧವಾಗಿ ಭಂಗಿಸಿದನು. ಆಗ ದೇವತೆಗಳು ಮುಖವನ್ನು ಹಿಂದೆಗೆದು... ಅಯ್ಯೋ ! ಸುಮ್ಮನೆ ಕುಮಾ ರನನ್ನು ನಂಬಿ ನಾವು ಇಲ್ಲಿಗೆ ಬಂದು ಮೃತ್ಯುವಿನ ಬಾಯ್ದೆ ತುತ್ತಾಗುವಂ ತಾಯ್ತಲ್ಲ ! ಎಂದು ಗೋಳಿಟ್ಟು ಓಡುತ್ತಿದ್ದರು. ವಿಷ್ಣುವು ಇವರನ್ನು ಕಂಡು ಥೀಗುಟ್ಟಿ, ತನ್ನ ವಾಹನವನ್ನು ವಜನಾಭನ ಮುಂದಕ್ಕೆ ಸರಿಸಿ ದನು. ಅವರಿರರಿಗೂ ಮಹಾಯುದ್ದ ವು ಜರುಗಿತು. ಯುದ್ಧಾಂಗಣವೆಲ್ಲ ಇವರುಗಳ ಬಾಣಗಳಿಂದ ತುಂಬಿಹೋಯಿತು. ಆಕಾಶವು ಇವರ ಗರ್ಜ ನೆಯನ್ನು ಹಿಡಿಯಲಾರದಂತಾಯಿತು. ಗರುಡನ ಹಾರಾಟಕ್ಕೂ ರಾಕ್ಷಸನ ರಥದ ಗಾಲಿಗಳ ಓಡಾಟಕ್ಕೂ ಭೂಮಿಯು ಸಾಂದಂತಾಯಿತು, ಇಬ್ಬ ರೂ ಸಮಜೋಡಿಯಾಗಿ ಶಸ್ತ್ರಾಸ್ತ್ರ , ದಿವ್ಯಾಸ್ತ್ರ, ಮಂತ್ರಾಸ್ತ್ರಗ ಳನ್ನೆಲ್ಲ ಪ್ರಯೋಗಿಸುತ್ತ ಬಂದರು. ಒಬ್ಬನು ಸರ್ಪಾಸ್ತ್ರವನ್ನು ಬಿ ಟ್ಟರೆ ಮತ್ತೊಬ್ಬನು ಗರುಡಾಸ್ತ್ರವನ್ನೂ, ಒಬ್ಬನ ಅಗ್ರ ಕ್ಕೆ ಮ ತೊಬ್ಬನು ಜಲಾಸ್ತ್ರ ವನ್ನೂ, ಒಬ್ಬನ ಪತಾಸ್ತ್ರಕ್ಕೆ ಮತ್ತೊಬ್ಬನು ವಾಸ್ತ್ರವನ್ನೂ ಬಿಟ್ಟು, ಕತ್ತರಿಸುತ್ತ ಬಂದರು. ಆಗ ವಿಷ್ಣುವು ಬೇ
ಪುಟ:ಚೆನ್ನ ಬಸವೇಶವಿಜಯಂ.djvu/೨೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.