ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನ ಬಸವೇಶವಿಜಯಂ (ಕಾಂಡ 4) [ಅಧ್ಯಾಯ ಧನುಸ್ಸು ಬತ್ತಳಿಕೆಯೆಲ್ಲ ನುಚ್ಚು ನೂರಾದುವು, ರಥವು ಮುರಿದುಬಿದ್ದಿತು. ಸಾರಥಿಯೂ ಅಶ್ವಗಳೂ ಯಮಲೋಕಕ್ಕೆ ತೆರಳಿದುವು. ಆಗ ಮಹಾನಾ ಛನು ಇವನು ಬಹುಪರಾಕ್ರಮಶಾಲಿಯಾಗಿ ಕಾಣುತ್ತಾನೆ, ಇಲಿ, ನೋಡಿಕೊಳ್ಳುತ್ತೇನೆ, ಎಂದು ಝಗ್ಗನೆ ಭೂಮಿಗೆ ದುಮಿಕಿ, ಖಾಸೆಯ ನ್ನು ತಿರುಹಿ, ದೊಡ್ಡ ಕತ್ತಿಯನ್ನು ಹಿಡಿದು ಆರ್ಭಟಿಸಿ, ಕುಮಾರಸಾಂ ಮಿಯ ಬಳಿಗೆ ಬರಲನುವಾದನು, ಕರಿಯ ಮೋಡದಂತೆ ಸ್ಕೂ'ಕೃಷ್ಣ ದೇಹಿಯಾಗಿ ಬರುತ್ತಿರುವ ರಾಕ್ಷಸನನ್ನು ಪೂಣ್ಮುಖನು ಕಂಡು ನಕ್ಕು, ತೀಕವಾದ ಮೊನೆಯ ಬಾಣಗಳೆರಡನ್ನು ಗುರಿಯಿಟ್ಟು ಪ್ರಯೋಗಿಸಲು, ಮಹಾನಾಭನ ತಲೆಯನ್ನು ಅವು ಹಾರಿಸಿಕೊಂಡು ಹೋದುವು. ಕೂಡಲೇ ದೇವತೆಗಳ ಸೇನೆಯಲ್ಲಿ ವಾದ್ಯಗಳು ಮೊಳಗಿದುವು. ಜಯಘೋಪವು ವಿಜೃಂಭಿಸಿತು. ರಾಕ್ಷಸನ ಸೇನೆಯಲ್ಲಿ ಹಾಹಾಕಾರವು ಹುಟ್ಟಿತು, ಈ ಆದ ಸೆನೆಯೆಲ್ಲವೂ ಕುಮಾರನ ಮೇಲೆ ಕವಿದಿತು, ಸೊಳ್ಳೆಗಳ ಬಳಗವ ನ್ನು ಹೊಸಗುವಂತೆ ನಿಮಿಷಮಾತ್ರದಲ್ಲಿ ಕುಮಾರ ಮಿಯು ಅವರನ್ನೆಲ್ಲ ಭೂವಿ:ಗುರುಳಿಸುತ್ತ ಬಂದನು ಬಳಿಕ ಗಜಶಿ, ಸರ್ಭಾನು, ಶಬಲ, ವಾಮನ ಮೊದಲಾದ ಮಹಾಮಹಾ ದೈತ್ಯರೆಲ್ಲ ಆರ್ಭಟಿಸಿ ಎದ್ದು, ತಮ್ಮ ತನ್ನ ಸೇನೆಯೊಡನೆ ಕೂಡಿ ಓಹೋ ! ನಿಲ್ಲಿಸು ನಿಲ್ಲಿಸು, ಎಂದು ಮದಲಿಸುತ್ತ ಕುಮಾರನ ಒಳಿಗೆ ಬಂದು, ಸುತ್ತಲೂ ಬಳಸಿಕೊಂಡರು. ಎಂಟು ದಿಕ್ಕಿನಿಂದಲೂ ಬಾಣದ ಒಟ್ಟಿಲನ್ನು ಸುರಿಸುತ್ತ ಬಂದರು. ಕಣ್ಣಿಗೆ ಕಾಣಿಸುವ ದೂರದವರೆಗೂ ರಾಕ್ಷಸರೇ ಕಾಣುತ್ತಿದ್ದರು. ಅವ ರಲ್ಲಿದ್ದ ಪ್ರಮುಖರಾಕ್ಷಸರೇ ಮೂವತ್ತು ಪದಗಳಾಗಿರುವಾಗ ಅವರ ಚತುರಂಗಸೈನ್ಯದ ಲೆಕ್ಕವನ್ನು ಇನ್ನು ಮಾಡುವವರಾರು ? ಇಂತಹ ಮ ಸಾಸೇನೆಯೆಲ್ಲವೂ ಒಂದೇ ಬಾರಿಗೆ ಆರ್ಭಟಿಸುತ್ತ, ನಾನಾಆಯುಧಗಳ ನ್ನು ಪ್ರಯೋಗಿಸುತ್ತ ಬಂದುವು. ಆದರೇನು ? ಕೊಟ್ಟನುಕೋಟಿ ಇರುವೆಗಳು ಒಂದು ಕೆಂಡವನ್ನು ಮುತ್ತಿ ಕೆಡಿಸಬಲ್ಲುವೆ ? ಈ ಸೇ ನಾಜಲಧಿಯನ್ನು ಕಂಡು ಕುಮಾರನ ಎದೆಗೆಚ್ಚು ಸ್ವಲ್ಪವೂ ಕುಗ್ಗಲಿಲ್ಲ. ನೋಡಿ ನೋಡಿದಂತೆ ಅವನ ಶೌರವೂ ದೈವೂ ಸಾಹವೂ ಹೆಚ್ಚಹೆ “ು ತಬಂದುವು. ಮರಳ ಬಾಣಗಳನ್ನು ಸುರಿಸುವುದಕ್ಕೆ ಆರಂಭಿಸಿ