افلامه ಚನ್ನಬಸವೇಶವಿಜಯಂ (ಕಾಂಡ 4) [ಅಧ್ಯಾಯ ಟ್ಟು, ರಥವನ್ನು ಮುಂದೆ ಸರಿಸಿದನು. ಆಗ ಅವನ ಭೀಕರಾಕೃತಿಯ ನ್ನು ನೋಡಿದರೆ ಏಟನ್ನು ತಿಂದ ಕಾಳಸರ್ಪವೊ, ನೊಂದಿರುವ ಹು ಲಿಯೋ, ಕೋಪವೇರಿದ ಕಾಡಹಂದಿಯೋ, ಹಸಿದು ಬಂದ ಹೆಮ್ಮಾರಿ ಯೊ, ಜಗನ್ನಾಶಕ್ಕಾಗಿ ಬರುವ ಮೃತ್ಯುವೋ, ಸಿಟ್ಟುಗೊಂಡ ಯಮ ನೋ, ಕೆರಳದ ವೀರಭದ್ರನೋ, ಕಾಲಭೈರವನೋ, ಪ್ರಳಯಕಾಲ ರುದ್ರನೋ, ಎಂಬಂತೆ ತೋರುತ್ತಿದ್ದನು. ಈ ಮಹಾದೈತ್ಯನನ್ನು ನೋಡಿದ ಕೂಡಲೆ ದೇವತೆಗಳ ಕಹಳೆಗಳ ಸದ್ದೇ ಅಡಗಿತು; ನಗಾರಿ ಯವನ ಕೈ ಹಾಗೆಯೇ ನಿಂತುಹೋಯಿತು; ಮಾವುತರ ಕಣ್ಣು ಬಿಟ್ಟು ದು ಬಿಟ್ಟಂತೆಯೇ ಇದ್ದಿತು; ಕುದುರೆಗಳು ನೊಗವನ್ನು ಮುರಿದು ರಥವ ನುರುಳಿಸಿ, ವಾಫೆಯನ್ನು ಕಿತ್ತು ಓಡಿಹೋದವು; ಆನೆಗಳು ಕಿರೆಂದು ಕಿ ರುಚಿ ಬಾಲವನ್ನು ಮಡಿಸಿ ಸೊಂಡಿಲನ್ನು ಸುತ್ತಿ ಹಿಂದಿರುಗಿದುವು; ಇಂ ದೈನು ಓರೆಯಾದನು; ಅಗ್ನಿಯು ಮರೆಯಾದನು; ಯಮನು ಕಾಲಿಗೆ ಬು ದಿ ಹೇಳಿದನು; ನಿಮೃತಿಯು ಪಲಾಯನ ಪಾರಾಯಣವನ್ನು ಮಾಡಿದನು; ವರುಣನು ಎದೆಯೊಣಗಿ ನೀರನ್ನು ಹುಡುಕುತ್ತಿದ್ದನು; ಗಾಳಿಯು ಎ ಲ್ಲೋ ಅವಿತುಕೊಂಡನು ; ಕುಬೇರನು ವೇಷಾಂತರವನ್ನು ಧರಿಸಿದನು ; ಈಶಾನನು ಇವರೆಲ್ಲರಿಗೂ ಗುರುವಾಗಿ ಅದೃಶ್ಯನಾದನು ; ಹರಿಬ್ರಹ್ಮರು ಎಲ್ಲಿ ಹೋದರೂ ಕಾಣಲೇಇಲ್ಲ. ತಾರಕನನ್ನು ಕಂಡಮಾತ್ರದಿಂದಲೇ ತನ್ನ ಸೇನಾನಿಕರದ ಅವಸ್ಥೆಯೆಲ್ಲ ಹೀಗಾದುದನ್ನು ಕುಮಾರಮೂರಿಯು ಕಂ ಡು, ಖತಿಗೊಂಡು, ತನ್ನ ವಾಹನವನ್ನು ತಟ್ಟಿ ಸಮಾಧಾನಗೊಳಿಸಿ, ಬೆಂ ಬಲಕ್ಕೆ ಅಭಯವನ್ನಿತ್ತು, ಕಣ್ಣುಗಳಲ್ಲಿ ಕಿಡಿಯನ್ನು ಸುರಿಸುತ್ತ, ಕೈ ಗೆ ಬಿಲ್ಲನ್ನು ತೆಗೆದುಕೊಂಡು ವಾಹನವನ್ನು ತಾರಕನ ಮುಂಗಡೆಗೆ ನಡಸಿ ದನು, ನಿಂಜೆನಿಯನ್ನು ಮಿಡಿದಮಾತ್ರದಿಂದ ಅದರ ದನಿಯು ಕೊಟಸಿ ಡಿಲಿನ ಆರ್ಭಟದಂತೆ ಕೇಳಿದವರಿಗೆ ಮೂರ್ಛಿಯನ್ನುಂಟುಮಾಡಿತು. ಭೂ ಮಿಯು ಬಿರಿದಿತು, ಸಮುದ್ರವು ತುಳುಕಾಡಿತು. ಇದಿಗಾದ ಶಿವಪುತ್ರ ನನ್ನು ತಾರಕನು ಕಂಡನು, ಬೇಸಗೆಯ ಮಧ್ಯಾಹ್ನದ ಸೂರನಂತೆ ತೇ ಜೊಮೂರಿಯಾಗಿ ರಂಜಿಸುತ್ತಿರುವ ಈ ದೇವನನ್ನು ನೋಡಿ ತಾರಕನ ಕಣ್ಣು ಮುಚ್ಚಿಹೋದುವು, ಎದೆಯು ರು ಗೈಂದಿತು. ಈ ಶೂರನು ತನ್ನ
ಪುಟ:ಚೆನ್ನ ಬಸವೇಶವಿಜಯಂ.djvu/೨೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.