ಚನ್ನ ಬಸವೇಕವಿಜಯಂ (ಕಾಂಡ 4) [ಅಧ್ಯಯ ವವರು ಯಾರೂಇಲ್ಲ; ಇಂಥ ನನ್ನ ಪರಾಕ್ರಮಾತಿಶಯವನ್ನು ನೀನು ಕೇ ೪ ತಿYಯೆಯಾ ? ಜಗತ್ತಿನಲ್ಲಿ ಜಯಲಕ್ಷ್ಮೀಕಾಂತನು ನಾನೊಬ್ಬನೇ ಸರಿಯೆಂಬುದು ನಿನಗೆ ಗೊತ್ತಿಲ್ಲ; ಪಾಪ ! ನೀನು ಹಸುಳೆ; ಎಂದು ಗ ರೋಕ್ಕಿಯನ್ನಾಡಿ, ತೀಕ್ಷಬಾಣಗಳನ್ನು ಪ್ರಯೋಗಿಸಿ, ನಿಕ್ಕನಾದ ವನ್ನು ಮಾಡಿದನು. ಕುಮಾರನಾದರೋ-ಥಟ್ಟನೆ ಪ್ರತಿಬಾಣದಿಂದ ಅವು ಗಳನ್ನು ಖಂಡಿಸಿ, ಎಲೊ ಖಳನೆ, ನೀನು ಹರಿಬ್ರಹ್ಮಾದಿಗಳನ್ನೆಲ್ಲ ಯುದ್ಧದಲ್ಲಿ ಗೆದ್ದು ಓಡಿಸಿರುವೆಯೆಂಬ ಸುದ್ದಿಯನ್ನು ನಾನು ಕೇಳಿ, ಅವ ರನ್ನು ಕಾಪಾಡಿ ನಿನ್ನನ್ನು ಕೊಲ್ಲುವುದಕ್ಕಾಗಿಯೇ ಇಲ್ಲಿಗೆ ಬಂದಿರುವೆನು; ನನ್ನ ಪರಾಕ್ರಮವನ್ನು ಈಗ ನೋಡು; ನೀನು ತಪಸ್ಸನ್ನು ಮಾಡಿ ಬ್ರ ಹೈನಿಂದ ವರವನ್ನು ಪಡೆದುಕೊಂಡಿದ್ದು ದು ಇಂದಿಗೆ ಸರಿಯಾಯ್ತು; ವರ ವನ್ನು ಕೊಟ್ಟವನಮೇಲೆಯೇ ನೀನು ತಿರುಗಿಬಿದ್ದೆ; ಅದಕ್ಕೆ ತಕ್ಕ ಫಲವ ನ್ನು ಈಗ ಉಣ್ಣಿಸುತ್ತೇನೆ; ನಾನು ಪರಶಿವನ ಕುಮಾರನೆಂಬುದನ್ನು ನೀ ನು ತಿಳಿದಿಲ್ಲವೊ ? ಎಂದು ಮೂದಲಿಸಿ, ಮತ್ತೆ ಬಾಣಗಳನ್ನು ದೈತ್ಯನ ಮೇಲೆ ಸುರಿಸಿದನು. ತಾರಕನು ಅವನ್ನು ಖಂಡಿಸಿ,– “ ಎಲೊ ಕಂದ ನೆ! ನೀನು ಹಲವರಿಗೆ ಹುಟ್ಟಿ ಶಿವಕುಮಾರನೆಂದು ಹೇಳಿಕೊಳ್ಳುವುದನ್ನು ನೋಡಿದರೆ, ಮಗ್ಗುಲಲ್ಲಿರುವವರು ಕೇಳಿ ನಗುವುದಿಲ್ಲವೆ ? ಬಿಡು; ಬುಡ ವನ್ನೆಲ್ಲ ಬಲ್ಲವರಿಗೆ ಮೇಲಣ ಎಲೆಯನ್ನು ತೋರಿಸಿ ಮುಟ್ಟುವುದಕ್ಕಾ ದೀತೆ ? ಸಾಕುಸಾಕು, ನಿನ್ನ ಜಂಭದ ಮಾತನ್ನು ಬಿಡು; ನಿನ್ನ ಸಾಲುದ ಲೆಗಳನ್ನೆಲ್ಲ ಒಂದೇ ಏಟಿಗೆ ಕತ್ತರಿಸುತ್ತೇನೆ, ನೋಡು ” ಎಂದು ಜರೆದು ಬಾಣಗಳನ್ನು ಬಿಟ್ಟನು. ಅವನ್ನೆಲ್ಲ ಕುಮಾರನು ಖಂಡಿಸಿ, ತಾನು ಕೆಲ ವು ಬಾಣಗಳನ್ನು ಬಿಟ್ಟನು. ಅವನ್ನು ಅವನು ಕತ್ತರಿಸಿದನು. ಹೀಗೆ ಈ ರ್ವರೂ ಯುದ್ದ ಕಲಾಕಾತುರವನ್ನು ತೋರಿಸಿ ಎರಡೆರಡು ಕೈಗಳಿಂದಲೂ ಅತಿಚಮತ್ಕಾರದಿಂದ ಅವಿಚ್ಛಿನ್ನವಾಗಿ ಬಾಣಗಳನ್ನು ಒಬ್ಬರಮೇಲೊಬ್ಬ ರು ಕರೆಯುತ್ತ ಬಂದರು.' ಖಣಖಣಿಲು ಛಟಛಟಲು ಭುಗಿಭುಗಿಲು ಎಂಬ ಶಬ್ದವು ಅಂತರಿಕ್ಷಮಂಡಲವನ್ನೆಲ್ಲ ವ್ಯಾಪಿಸಿಕೊಂಡಿತು, ಬಾಣಬಾ ಣಗಳ ತಾಟುವಿಕೆಯಿಂದ ಹುಟ್ಟಿದ ಕಿಡಿಗಳು ಲೋಕವನ್ನೆಲ್ಲ ಸುಡುತ್ತ ಬಂ ದುವು, ಈರ್ವರೂ ಒಂದೇಸಮನಾಗಿ ಸೆಣಸುತ್ತ, ಹುಬ್ಬುಗಂಟಿಕ್ಕಿ,
ಪುಟ:ಚೆನ್ನ ಬಸವೇಶವಿಜಯಂ.djvu/೨೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.