#ಳ ಚನ್ನಬಸವೇಶವಿಜಯಂ (ಕಾಂಡ ೪) [ಅಧ್ಯಾಯ ಜಗತ್ತಿನವರೆಲ್ಲರೂ ನೋಡಿ ಆಶ್ಚಗೃಪಡುತ್ತಿದ್ದರು. ಹಿಂದೆ ತಾರಕನ ಯು ದ್ದದ ಕಾಲದಲ್ಲಿ ಮಡಿದಿದ್ದ ಶೂರದೈತ್ಯರ ವಂಶಿಕರಾದ ನಳ ನೀಳ ಮೂ ಕ ಜಂಭ ಧೂಮ್ರಾಕ್ಷ ಜಟಾಸುರ ಮುಂತಾದ ಮಹಾಮಹಾ ಶೂರ ರಾಕ್ಷಸರೆಲ್ಲ ಗುಡ್ಡಗಳನ್ನು ಬಿಟ್ಟು ತ್ರಿಪುರವನ್ನು ಸೇರಿಕೊಂಡರು. ಒಂ ದುದಿನ ತಾರಕಾಪ್ತಾದಿಗಳ ಸಭೆಯಲ್ಲಿ ಶಿಲ್ಪಿಯಾದ ಮಯನು ಬಂದು ಕು ಇತಿರುವಲ್ಲಿ, ಅವನು ತ್ರಿಪುರವನ್ನು ನಿರಿಸಿದ ಚಮತ್ಕಾರವನ್ನು ಕುರಿತು ಮೂವರು ರಾಜರೂ ಬಹಳವಾಗಿ ಅವನನ್ನು ಕೊಂಡಾಡುತ್ತಿದ್ದರು. ನ ಯನಾದರೆ- “ ರಾಕ್ಷಸೇಶರರೆ ! ನೀವು ಘೋರತಪಸ್ಸನ್ನು ಮಾಡಿ ಮಹತ್ತರಗಳಾದ ವರಗಳನ್ನು ಪಡೆದು ಈಗ ಲೋಕೊತ್ತರಪದವಿಯನ್ನೇ ನೋ ಅನುಭವಿಸುತ್ತಿರುವಿರಿ, ಒಂದುಸಾವಿರ ವರ್ಷಗಳು ಕಳೆದ ನಂತರ ಯಾವನಾದರೊಬ್ಬ ದೇವನಿಂದ ನಿಮ್ಮ ಈ ತ್ರಿಪುರಕ್ಕೂ ಅತುಲವಾದ ಸಂ ಪತ್ನಿಗೂ ಹಾನಿಯು ಬಂದರೂ ಬರಬಹುದು ; ಅದಕಾರಣ, ಆಗ ಯಾವ ಭಂಗವೂ ತಟ್ಟದಂತೆ ನೀವು ಮಾಡಿಕೊಳ್ಳುವುದಕ್ಕಾಗಿ, ಸೃಷ್ಟಿ ತಿ ಪ್ರಳಯಗಳಿಗಧಿಪತಿಯೆಂತಲೂ, ದೇವಾಧಿದೇವನೆಂತಲೂ, ಭಕ್ತವತ್ಸ ಲನೆಂತಲೂ ಪ್ರಸಿದ್ಧನಾಗಿರುವ ಪರಮೇಶ್ವರನಲ್ಲಿ ನೀವುಗಳು ಭಕ್ತಿಯು ಕರಾಗಿ ಸದಾ ಪೂಜಿಸುತ್ತಲಿರಿ, ಇದೇ ನಿಯಮವನ್ನು ನಿಮ್ಮ ಪಟ್ಟಣದ ನಿವಾಸಿಗಳೆಲ್ಲ ಕೈಕೊಳ್ಳುವಂತೆ ಆಜ್ಞೆ ಮಾಡಿರಿ ; ಆಗ ನೀವು ನಿಷ್ಕಂಟಕ ರಾಗಿ ಬಾಳುವಿರಿ. ” ಎಂದು ಹೇಳಿದನು. ಅದಕ್ಕೆ ದಾನವೇಶ್ವರರು ಒಪ್ಪಿ ಕೊಂಡು, ಕೂಡಲೇ ಲಿಂಗಗಳನ್ನು ರಚಿಸಿಕೊಡಬೇಕೆಂದು ಮಯನಿಗೆ ಆಜ್ಞಾಪಿಸಿದರು. ಮನೆಗೆ ಒಂದೊಂದು ಲಿಂಗದಂತೆ ಅವನು ಮಾಡಿಕೊಟ್ಟ ನು. ಸರೂ ಭಸ್ಮರುದ್ರಾಕ್ಷಧಾರಿಗಳಾಗಿ ಪಂಚಾಕ್ಷರಗಳನ್ನು ಜಪಿಸು ತ್ಯ ಶಿವಾಗಾಧನೆಯಲ್ಲಿ ತತ್ಪರರಾದರು, ಪುರುಷರೆಲ್ಲರೂ ಜಿತೇಂದ್ರಿಯರೂ, ಸ್ತ್ರೀಯರೆಲ್ಲರೂ ಪತಿವ್ರತೆಯರೂ ಪಾಪದೂರೆಯರೂ ಭಕ್ತಿತತ್ಸರೆಯರೂ ಆಗಿ ಬಾಳುತ್ತಿದ್ದರು. ಕಾಮಧೇನು ಕಲ್ಪವೃಕ್ಷ ಚಿಂತಾಮಣಿಗಳೆಲ್ಲ ರಾಕ್ಷಸರ ಲೋಕದಲ್ಲಿ ಸೇರಿದುವು. ಸಕಲೋತ್ಸವವೂ ರಾಕ್ಷಸರ ಪಾಲಾಯಿತು. ಸ್ವರ್ಗ ಮರ್ತ್ಯ ಪಾತಾಳಗಳಲ್ಲಿ ಎಲ್ಲಿ ನೋಡಿದರೂ ರಾ ಕಸರ ರಥ, ರಾಕ್ಷಸ ಕುದುರೆ, ರಾಕ್ಷಸರ ಆನೆ, ರಾಕ್ಷಸರ ವಿಮಾನ,
ಪುಟ:ಚೆನ್ನ ಬಸವೇಶವಿಜಯಂ.djvu/೨೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.