044 ಪಶುಪತಿಪಟ್ಟವು ಶಿವನು ಅವರ ವಿಷಯದಲ್ಲಿನ ಕಾರುಣ್ಯವನ್ನು ತೊರೆಯುವನು; ಮುಂದೆ ಶಿವನಿಂದಲೇ ಅವರ ಅಂತ್ಯವನ್ನು ಕಾಣಿಸಬಹುದು, ಹಾಗಲ್ಲದೆಹೋದರೆ ನಮಗೆ ಮೇರುಪರ್ವತದ ಗುಹಾನಾಸನೇ ಗತಿಯಾಗುವುದು, ಎಂದು ನುಡಿದರು. ಅದನ್ನು ಕೇಳಿದ ವಿಷ್ಣುವು ಹಾಗೆಯೇ ಆಗಲಿ, ನಾನು ಅದಕ್ಕೆ ಪ್ರಯತ್ನಿಸುತ್ತೇನೆ, ನೀವು ಅವರ ನಾಶಕ್ಕೆ ಶಿವನ ಅನುಮತಿಯ ನ್ನು ಪಡೆದುಕೊಳ್ಳಿರಿ ಎಂದು ಹೇಳಿ, ನಾರದರನ್ನು ಕರೆದುಕೊಂಡು ತ್ರಿ ಪುರದ ಕಡೆಗೆ ಪ್ರಯಾಣಮಾಡಿದನು. ಹರಿಯು ಬುದ್ಧಾವತಾರ ಮಾಡಿ ದನು, ನಾರದನು ಅವನ ಶಿಷ್ಯನಾದನು. ಅಜ್ಞಾನವರ್ಧಕವಾದ ಶಾಸ್ತ್ರ ಗಳನ್ನು ವಿಷ್ಣುವು ರಚಿಸಲು, ಇಬ್ಬರೂ ಮೃದುಮಧುರವಾದ ವಚನಗಳ ನಾಡುತ್ತ ರಾಕ್ಷಸರ ಪಟ್ಟಣವನ್ನು ಸೇರಿದರು. ಇಬ್ಬರೂ ಬಹುಸುಂ ದರರಾಗಿ ನಡೆ ನುಡಿ ಮೊದಲಾದುವುಗಳಿಂದ ಸ್ತ್ರೀ ಕುಲದ ಚಿತ್ರವನ್ನು ಕೆಡಿಸುತ್ತ, ನಾನಾರತ್ನ ಭೂಷಣ ವಸನಾದಿಗಳನ್ನು ರಾಕ್ಷಸಸ್ತಿ ಯರಿಗೆ ತೋರಿಸುತ್ತಲೂ, ಕೇಳಿದಂತೆ ಕೊಡುತ್ತಲೂ, ಅವರ ಮನಸ್ಸನ್ನು ಸೆಳೆ ದುಕೊಂಡರು. ತಮ್ಮ ಇಂದ್ರಜಾಲದ ಕಾಪಟ್ಟದಿಂದ ಎಲ್ಲರನ್ನೂ ಬೆರ ಗುಗೊಳಿಸಿದರು, ಎಲ್ಲೆಲ್ಲ ಈ ಗುರುಶಿಷ್ಯರ ಸತ್ಕಾರವೇ ನಡೆಯುವಂ ತಾಯಿತು. ರಾಕ್ಷಸರ ನಾಯಕರು ಈತನಾರೆಂಬುದನ್ನು ತಿಳಿಯುವುದ ಕ್ಯಾಗಿ ತಿಪ್ಪನನ್ನು ಗುಟ್ಟಾಗಿ ಕರೆದು ಈ ಮಹಿಮನು ಯಾರು ? ನ ಮ್ಮನ್ನು ಅನುಗ್ರಹಿಸುವುದಕ್ಕಾಗಿ ಎಲ್ಲಿಂದ ಬಂದನು ? ಎಂದು ಕೇಳಿದ ರು, ಶಿಷ್ಟನಾದರೊ._ ಈತನು ಜಗತೃ ಷ್ಟು ವಾದ ಭಗವಂತನು; ಲೋಕವನ್ನು ಸಂಚರಿಸಿ ನೋಡಿಕೊಂಡು ಹೋಗುವುದಕ್ಕಾಗಿ ಬಂದಿರು ವನು; ಎಲ್ಲಿ ತನ್ನ ಮನಸ್ಸಿಗೆ ಸೊಗಸು ಕಾಣುವುದೋ ಅಲ್ಲಿ ನಿಂತು ತನ್ನ ಮಹಿಮೆಯನ್ನು ಪ್ರಕಾಶಪಡಿಸಿ, ಆಶ್ರಿತರಿಗೆ ಸಕಲಾಭೀಷ್ಟ್ಯವನ್ನೂ ಕೊ ಡುವನು, ಎಂದು ನುಡಿದನು. ಅದನ್ನು ಕೇಳಿ ಸರ್ವರೂ ಭಕ್ತಿಯಿಂದ ಆ ಬುದ್ದನನ್ನೇ ಓಲೈಸುವವರಾದರು, ಅವರು ಕೇಳಿ ಕೇಳಿದುದನ್ನೆಲ್ಲ ಈ ಮಾಯಾವಿಯು ಕೊಟ್ಟು, ವಶಮಾಡಿಕೊಂಡನು. ಬಳಿಕ ರಾಕ್ಷಸರಲ್ಲಿ ಕೆ ಲರು ಬುದ್ದಿವಂತರು ನಾರದನನ್ನು ರಹಸ್ಯವಾಗಿ ಕರೆದು, ಈ ಮಹಿಮ ನಲ್ಲಿ ಹೀಗೆ ಧನಕನಕಾದಿಗಳನ್ನು ದಾನಮಾಡುವ ಮಹಿಮೆಯು ಮಾತ್ರ
ಪುಟ:ಚೆನ್ನ ಬಸವೇಶವಿಜಯಂ.djvu/೨೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.