ತ್ರಿಪುರವಿಜಯಯಾತ್ರಯು J೪4 ಲ್ಪಟ್ಟಿತು. ಪಣ್ಮುಖನಿಗೆ ಮುಖ್ಯಸೇನಾಧಿಪತ್ಯವು ಕೊಡಲ್ಪಟ್ಟಿತು. ಈ ಆದ ಯುದ್ಧ ಸಾಮಗ್ರಿಗಳ ಯಾಜಮಾನ್ಯವೆಲ್ಲ ವೀರಭದ್ರೇಶ್ವರನಿಗೆ ಒಪ್ಪಿ ಸಲ್ಪಟ್ಟಿತು. ಅಪ್ಪರಲ್ಲಿ ಸಂಧ್ಯಾಕಾಲವಾಗಲು ಸೂರನು ಅಸ್ತನಾದನು. ಕತ್ತಲೆಯು ಆವರಿಸಿತು. ಆಗ ತಾರಕನು ತನ್ನ ಅರಮನೆಯೊಳಗೆ ಸಕಲ ಸೇನಾಪ್ರಮುಖರಿಂದ ಕೂಡಿದ ಬಡೋಲಗದಲ್ಲಿದ್ದನು. ಸಿಕ್ಕಾಸನದ ಬ ಲಗಡೆಯಲ್ಲಿ ಕುಳಿತಿದ್ದ ಕುಲಗುರುವಾದ ಶುಕ್ರಾಚಾರನನ್ನು ಕುರಿತು ಮುಗುಳ್ಳಗೆಯಿಂದ- ( ಗುರುವೇ ! ಆಶ್ಚರವನ್ನು ಕೇಳಿದಿರಾ ? ದೇವ ತೆಗಳು ನಮ್ಮಿಂದ ಹೆದರಿ ಓಡಿಹೋಗಿ ಶಿವನೊಡನೆ ದೂರನ್ನು ಹೇಳಿಕೊ೦ ಡು, ನಮ್ಮನ್ನು ಜೈಸುವುದಕ್ಕಾಗಿ ಶಿವನನ್ನೇ ಕರೆದುಕೊಂಡು ಬಂದಿರು ವರಂತೆ ! ಈಗ ನಾವು ಮಾಡತಕ್ಕ ಕಾರವೇನು ? ?” ಎಂದು ಕೇಳಿದನು. ಶುಕ್ರಾಚಾನಾದರೋ ( ಶಿವನೇ ಕೊಲ್ಲಬೇಕೆಂದು ಪ್ರಯತ್ನಿಸಿದರೆ ಇನ್ನು ಬಿಡಿಸಿಕೊಳ್ಳುವುದಕ್ಕೆ ಯಾರಿಂದತಾನೇ ಆದೀತು ? ಈಗ ಶಿವನ ಬಗೆ ನಾವೆ: ರೋಗಿ ಶರಣಾಗತರಾಗುವುದೇ ನ್ಯಾಯವು ?” ಎಂದು ಉತ್ತರ ಕೊಟ್ಟನು. ಅದನ್ನು ಕೇಳಿ ವಿದ್ಯುನ್ಮಾಲಿಯು ಕಿಡಿಕಿಡಿಯಾಗಿ, ಗುರುವೆ ! ಏಕೆಂದಿರಿ ? ಶರಣಾಗತರಾಗುವುದೆ ? ಸು ಸರಿ ! ಸಮುದ್ರವ ನ್ನೆಲ್ಲ ಸುತ್ತನೆ ಹೀರಿಬಿಡ ನ ಬಡಬಾಗ್ನಿಯು ನೀರಿನ ಸಣ್ಣ ಹನಿಗೆ ಅಂಜ ಬೇಕೆ ? ನನ್ನ ಶಕ್ತಿಯನ್ನು ಪರೀಕ್ಷಿಸಬೇಕಾದರೆ ಆ ದೇವತೆಗಳಮೇಲೆ ಬಿಟ್ಟು ನೋಡಿರಿ, ಅವರು ನಮಗೆ ಸಣ್ಣ ಕೀಟಗಳಿಗೆ ಸಮಾನರು, ನಮ್ಮ ತ್ರಿಪುರದ ಎಲ್ಲೆಯನ್ನು ಮೆಟ್ಟುವುದಕ್ಕಾದರೂ ಅವರಿಗೆ ಸಾಮರ್ಥವುಂ ಟೆ ? ಅವರ ಬೆದರಿಕೆಯನ್ನು ನಮಗೆ ತೋರಿಸುವುದು, ಹುಲಿಯ ಬಿರುದನ್ನು ಹುಲ್ಲೆಯು ಅಳಿಸಿಬಿಡುವುದೆಂದು ಹೇಳಿದಹಾಗಾಯಿತು ! ಎಂದನು. ಅ ಸ್ಮರಲ್ಲಿ ಉಳಿದ ಸೇನಾಪ್ರಮುಖರೆಲ್ಲ ಎದ್ದು ನಿಂತು ಗುರುವೆ ! ನಮ್ಮ ಪರಾಕ್ರಮವನ್ನು ಪರೀಕ್ಷಿಸಬೇಕು, ಸಕಲ ದಿಕ್ಷಾಲಕರನ್ನೂ ಕಟ್ಟಿ ಪಾದಕ್ಕೆ ತಂದೊಪ್ಪಿಸುವೆವು; ಸಪ್ತಸಮುದ್ರಗಳನ್ನೂ ಕುಡಿದುಬರುವೆವು; ಕುಲಾಚಲಗಳನ್ನೆಲ್ಲ ಕಿತ್ತು ತರುವೆವು; ಸಕಲದೇವತೆಗಳ ಪ್ರಾಣವನ್ನೂ ತೆಗೆವುದಕ್ಕೆ ಸಂಚಕಾರವನ್ನು ಹಿಡಿದೆವು; ಕೊನೆಗೆ ಶಿವನೇ ಬಂದರೂ ತಡೆ ದು ನಿಲ್ಲಿಸುವೆವು; ನನ್ನನ್ನು ಬಿಟ್ಟು ನೋಡು ” ಎಂದು ಗರ್ಜಿಸಿದರು.
ಪುಟ:ಚೆನ್ನ ಬಸವೇಶವಿಜಯಂ.djvu/೨೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.