ತ್ರಿಪುರದಿಜಯಯಾತ್ರಯು ܕܐܩ ರ್ಗರೆದುವು; ದೇವಸೇನೆಯು ಕೋಟೆಯ ಸುತ್ತಲೂ ಬಳಸಿ ಮೇಲಕ್ಕೆ ಅಟ್ಟಣೆಗಳನ್ನು ಕಟ್ಟುತ್ತಲೂ ಏರುದಿಣ್ಣೆಗಳನ್ನು ರಚಿಸುತ್ತಲೂ, ಕೋ ಲಾಹಲವನ್ನು ಮಾಡುತ್ತಿದ್ದಿತು. ಅಸ್ಟ್ರಲ್ಲಿ ತಾರಕಾಕ್ಷಾದಿಗಳ ಸೇನೆಯು ತಮ್ಮ ಸೇನಾಪತಿಯ ಅಪ್ಪಣೆಯನ್ನು ಪಡೆದು ಕೋಟೆಯಮೇಲೆ ಬಂದು ನಿಂತು ದೇವಸೇನೆಯ ಚಾಪಲ್ಯವನ್ನು ನೋಡಿದರು. ಭಿಂಡಿ, ತೋಮರ, ಗದೆ, ಮುಸಲ, ಕುಂತ, ಅಸಿ, ಬಾಣ ಮೊದಲಾದ ಆಯುಧಗಳನ್ನು ಜಳ ಪಿಸಿ, ಮಹಾವೀರನಾದವನ್ನು ಮಾಡಿ, ಎಲೆಲೊ ನೀಚದೇವತೆಗಳಿರಾ! ಹುಲಿಯ ಹುತ್ತನ್ನು ಮೊಲಗಳು ಕೆಣಕುವಂತೆ ತ್ರಿಪುರಕ್ಕೆ ಮುತ್ತಿಗೆಯ ನ್ನು ಹಾಕುವ ದುರ್ಬುದ್ಧಿಯು ನಿಮಗೇಕೆ ? ಎಂದು ಮೂದಲಿಸಿ, ಬಾ ಣದ ಮಳೆಯನ್ನು ದೇವತೆಗಳಮೇಲೆ ಕರೆದರು, ಕವಣೆಗಳನ್ನೆಸೆದರು. ಕಾದ ಎಣ್ಣೆಯನ್ನು ಸುರಿದರು, ಸುಟ್ಟ ಸುಣ್ಣವನ್ನು ಬಗ್ಗಿ ಸಿದರು. ಸುಡು ವ ಮಳಲನ್ನು ಸುರಿದು, ದೊಡ್ಡ ದೊಡ್ಡ ಗುಂಡುಗಳನ್ನುರುಳಿಸಿದರು. ಕೆಳಗಿದ್ದ ದೇವತೆಗಳು ರಾಕ್ಷಸರ ಏಟುಗಳಿಗೆ ಸಿಕ್ಕಿ ಹತರಾಗುತ್ತಲೂ, ಮೈಗಳಲ್ಲಿ ಹೊಪ್ಪಳೆಗಳೇಳಲು ಕಿರುಚುತ್ತಲೂ, ಕೈಕಾಲುಗಳನ್ನು ಮು ರಿದುಕೊಂಡು ರೋದಿಸುತ್ತಲೂ, ತಲೆಯೊಡೆದು ರಕ್ತವನ್ನು ಕಾರುತ್ತ ಲೂ, ಆನೆಗಳ ಮರೆಯಲ್ಲಿ ಅವಿತುಗೊಳ್ಳುತ್ತಲೂ, ಹೆಣಗಳನ್ನು ಮೇಲೆ ಎಳೆದುಕೊಂಡು ಬಿದ್ದು ಕೊಳ್ಳುತ್ತಲೂ ದಿಕ್ಕು ದಿಕ್ಕಿಗೆ ಓಡುತ್ತಲೂ, ಪರಿಭ ವಗೊಂಡರು. ಇದನ್ನು ದೇವೇಂದ್ರನು ನೋಡಿ, ಆಗುಟ್ಟ, ನೀಚರಾದ ದೈತ್ಯರಿಗೆ ನೀವುಗಳು ಹೆದರಿಕೊಳ್ಳಬಹುದೆ ? ಜಗದೀಶನಾದ ಮಹಾದೇ ವನು ಬೆಂಬಲನಾಗಿರುವಾಗ ನಮಗೆ ಭೀತಿಯೆಂದರೇನು ? ಮುಂದಿಟ್ಟ ಕಾ ಲನ್ನು ಹಿಂದೆಗೆದು ದೇವಕುಲಕ್ಕೆ ಅಪಯಶಸ್ಸನ್ನು ತರಬೇಡಿರಿ, ಎಂದು ಮೊದಲಾಗಿ ಹೇಳಿ, ಹುರಿದುಂಬಿಸಿ, ಮತ್ತೆ ಕೋಟೆಯಮೇಲೆ ನುಗ್ಗಿಸಿ ದನು, ದೇವತೆಗಳು ದೇಹಾಭಿಮಾನವನ್ನು ತೊರೆದು ಲಗ್ಗೆ ಹತ್ತುವುದಕ್ಕಾ ರಂಭಿಸಿದರು. ರಾಕ್ಷಸರ ಏಟಿಗೆ ಮುಂದಿನವರು ಬಿದ್ದರೆ ಹಿಂದಿನವರು ಅದ ನ್ನು ಸರಕುಗೊಳ್ಳಗೆ ಬಿದ್ದವರನ್ನೇ ಗುಡ್ಡೆ ಹಾಕಿ ಮೇಲೇರುತ್ತಲೂ, ಮೇ ಲೆ ಹತ್ತಿದವರು ಕೆಳಗಿದ್ದವರಿಗೆ ನಡುಕಟ್ಟುಗಳನ್ನೂ ಭಲ್ಲೆ ಯಗಳನ್ನೂ ನಿಡುಗಾಲ್ಕಳನ್ನ ಇಳಯಬಿಟ್ಟು ಹಿಡಿಸಿ ಸೇದಿಕೊಳ್ಳುತ್ತಲೂ, ಆಳ್ವರಿ
ಪುಟ:ಚೆನ್ನ ಬಸವೇಶವಿಜಯಂ.djvu/೨೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.