ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಳ! ಕಮಲಾಕ್ಷದೇವಸೇನಾಯುದ್ಧ ವು. ದೇವತಾಸ್ತೋಮವನ್ನೆಲ್ಲ ತೋಳಗಳು ಕುರಿಗಳನ್ನಟ್ಟಿಕೊಂಡು ಹೋದಂ ತೆ ಅಟ್ಟ ಓಡಿಸಿ, ಕೋಟೆಯ ಹೊರಗಣ ಬೈಲನ್ನು ಸೇರಿತು. ಅಲ್ಲಿ ದಿವಿ ಜದಾನವ ಸೈನ್ಯಗಳೆರಡಕ್ಕೂ ಮಹಾಯುದ್ಧವು ನಡೆದಿತು. ಎರಡು ಕಡೆ ಯಲ್ಲಿಯೂ ಆನೆಗೆ ಆನೆ ಕುದುರೆಗೆ ಕುದುರೆ ರಥಕ್ಕೆ ರಥ ಕಾಲಾಳ್ಳ೪ಗೆ ಕಾಲಾಳುಗಳು ಸಂಧಿಸಿ, ತಮ್ಮ ತಮ್ಮ ಆಯುಧಗಳಿಂದ ಕಡಿದಾಡಿದರು. ರ ಕಸರ ಅತುಳಪ್ರತಾಪವು ದೇವಸೇನೆಯನ್ನು ಮುಖಗೆಡಿಸಿತು, ಅರಿಗಳಿಗೆ ಬೆನ್ನು ಚಾಚಿ ದೇವತೆಗಳು ಮುರಿದೋಡಿ ಇಂದ್ರನ ಮರೆಹೊಕ್ಕರು. ಆಗ ದಿಕಾಲಕರೆಲ್ಲರೂ ತಮ್ಮ ಸೇನೆಗೆ ಧೈರಗೊಟ್ಟರು, ಇಂದ್ರನು ತಾನೇ ಶತ್ರಗಳಿಗೆ ಇದಿರಾದನು. ರಾಕ್ಷಸರಲ್ಲಿ ಪ್ರಬಲನಾದ ಜಂಭಾಸುರನು ಇಂದ್ರನ ಮುಂಗಡೆಗೆ ಬಂದನು. ಈ ಉಭಯವಿರರಿಗೂ ಒಂದು ಗಳಿಗೆ ಯೊಳಗಾಗಿ ನಡೆದ ಯುದ್ಧವು ಉಭಯಸೇನೆಯನ್ನೂ ತಲೆದೂಗುವಂತೆ ಮಾಡಿತು, ಇಂದ್ರನ ಬಾಣಗಳು ತ್ರಿಪುರಕ್ಕೆಲ್ಲ ಬಾಣದ ಹಂದರವನ್ನು ಕಟ್ಟಿದಂತೆ ಮಾಡಿದುವು. ಜಂಭನು ಬಿಟ್ಟ ಬಾಣಗಳು ದೇವಸೇನೆಯ ಮೇಲೆಲ್ಲ ಬಿಸಿಲು ನುಗ್ಗುವುದಕ್ಕೂ ಎಡೆಗೊಡದಂತೆ ಕವಿದುಕೊಂಡುವು. ಇಂದ್ರನು ಜಂಭನ ಎದೆಗೆ ಗುರಿಕಟ್ಟಿ ಹೊಡೆದ ೧೨ ಬಾಣಗಳನ್ನು ಜಂಭ ನು ಮಧ್ಯದಾರಿಯಲ್ಲಿ ಕತ್ತರಿಸಿ, ಇಂದ್ರನ ಎದೆಗೆ ಗುರಿಕಟ್ಟಿ ೫ ಬಾಣ ಗಳನ್ನು ತಾನು ಬಿಟ್ಟನು, ಅವನ್ನು ಇಂದ್ರನು ಕಡಿದು ಮತ್ತೆ ೫ ಬಾಣ ಗಳನ್ನು ಬರಸೆಳೆದು ಬಿಡಲು, ಅವು ದೈತ್ಯನ ಹೊಟ್ಟೆಯನ್ನು ಹೊಕ್ಕು ಬೆ ನ್ನಿನಲ್ಲಿ ಮಡಿ ಹೊರಹೋದುವು. ಅದರಿಂದ ಜಂಭನು ನಿಶ್ಚಿತನನಾಗಿ ಮಲಗಲು, ಇಂದ್ರನು ಮತ್ತೆ ೧೪ ಬಾಣಗಳನ್ನು ಬಿಟ್ಟು ಅವನ ರಥ ಸಾರ ಥಿ ಹಯಾದಿಗಳನ್ನೆಲ್ಲ ತರಿದುರುಳಿಸಿದನು. ಆಗ ದೈತ್ಯಸೇನೆಯು ಬೇರೊಂ ದು ರಥವನ್ನು ಅಣಿಮಾಡಿ ಅದರಲ್ಲಿ ಸಂಭನನ್ನು ಮಲಗಿಸಿಕೊಂಡುಹೋದ ರು, ಇಂದ್ರನು ಉಳಿದ ರಾಕ್ಷಸರಮೇಲೆಲ್ಲ ಬಾಣಗಳನ್ನು ಕರೆದು, ಆನೆ ಯ ಹಿಂಡಿಗೆ ನುಗ್ಗಿದ ನಿಕ್ಕದಂತೆ ಗರ್ಜಿಸಿ ಪ್ರಳಯವನ್ನುಂಟುಮಾಡುತ್ತಿ ದ್ದನು. ಇವನ ಶೌರಾಡಂಬರವನ್ನು ವಿದ್ಯುನ್ಮಾಲಿಯು ಕೇಳಿ ಕೆರಳಿ ಇ ದಿರಾಗಿ,– ಎಲೋ ನೀಚನೆ ! ನೀನೆಯೊ ನನ್ನ ಜಂಭಾಸುರನನ್ನು ನಿಶ್ಲೇ ತನ ಗೊಳಸಿದವನು ? ನೀನೆಯೋ ದೇವರಾಜ ? ನಮ್ಮ ತಿರ್ಪುವನ್ನು ಸು