ಚನ್ನಬಸದೇಕೆವಿಜಯಂ (Fಂಡಳ) [ಅಧ್ಯಾಯ ಗಿಲೆಯ ಧ್ವನಿಯೆಂಬ ಕೂಗಿನಿಂದ ನಿನ್ನ ಆಗಮನವನ್ನು ಬಯಸಿ ಪ್ರ ರ್ಥಿಸುತ್ತ ನನ್ನನ್ನು ಕರೆಯಲಟ್ಟಿರುವಳು; ಕೃಪೆಯಿಟ್ಟು ಚಿತ್ರಸಿ ಪರಾವರಿಸಬೇಕು; ಎಂದು ವಿಜ್ಞಾವಿಸಿದನು. ಶಿವನು ಅವನಿಗೆ ಉಡು ಗೊರೆಗಳನ್ನು ಕೊಟ್ಟು ಕಳುಹಿ, ಸತಿಯೊಡನೆ ವನವಿಹಾರೋತ್ಸವಕ್ಕೆ ನಡೆಗೊಂಡನು. ದೇವಿಯೊಡನೆ ಸುಂದರಿಯರಾದ ಸಖಿಯರನೇಕರು ಹೊ ರಟರು. ಅವರ ವಾದವೇ ಚಿಗುರುಗಳು, ಕೂದಲೇ ತುಂಬಿಗಳು, ಮುಖ ವೇ ತಾವರೆ, ತೋಳುಗಳೇ ಬಳ್ಳಿಗಳು, ತೊಡೆಗಳೇ ಚಾಳಗಂಬಗಳು, ಹೊಕ್ಕುಳ ಕೊಳಗಳು, ಮೊಲೆಗಳೇ ಚಕ್ರವಾಕಪಕ್ಷಿಗಳು, ಮಾತುಗ ೪ ಗಿಳಿಗಳು, ನಡೆಯೆ ಹಂಸಗಳು, ಮುಡಿಗಳೇ ನವಿಲ್ಲಳು, ಎಂಬಂತೆ ತೋರುತ್ತಿರಲು, ಚಲಿಸುವ ವನದಂತಿರುವ ದೇವಾಂಗನೆಯರು ಸ್ಥಾವರ ವನದರ್ಶನಕ್ಕೆ ಹೊರಟರು. ಸರಪಳಿಗಳನ್ನು ಕಿತ್ತು ಬಂದಿರುವ ಕಾಮ ನ ಮದದಾನೆಗಳಂತಿರುವ ಈ ಸಖಿಯರೊಡನೆ ಹೊರಟ ಪಾತೀ ಪರಶಿ ವರು ಚೈತ್ರರಥವನ್ನು ಪ್ರವೇಶಿಸಿದರು. ಸಖಿಯರುಗಳು ಹೂಚಿಗುರುಗಳ ಸೊಬಗನ್ನು ನೋಡಿ ನನಗೆ ತನಗೆ ಎಂದು ಮೇಲೆಬಿದ್ದು ಕೊಯ್ಲು ಆತುರಿಸಿದರು. ಆಗ ಇವು ಚಿಗುರು ಇವು ಪಾದಗಳು, ಇವು ತುಂಬಿಗಳು ಇವು ಕುರುಳುಗಳು, ಇವು ತುಟಗಳು ಇವು ಕೆಂಪು ಗುಲಾಬಿಯ ಹೂವು ಗಳು, ಇವು ದೇಹಗಳು ಇವು ಬಳ್ಳಿಗಳು, ಇವು ಮೂಗುಗಳು ಇವು ಸಂ ಪಗೆಗಳು, ಇವು ಗಿಳಿಗಳ ನುಡಿ ಇವು ಸಖಿಯರ ಮಾತು, ಎಂಬ ಭೇದ ವನ್ನು ತಿಳಿದುಕೊಳ್ಳಲಾರದೆ ಕೆಲವರು ಮುಗ್ದಾಂಗನೆಯರು ಪರದಾಡುತ್ತಿ ದ್ದರು, ಮಲ್ಲಿಗೆಯ ಮೊಗ್ಗೆಯನ್ನು ಕೊಯ್ಯುತ್ತಿದ್ದವಳ ಮೇಲ್ಕು ಸುಗು ಜಾರಿ ಮೊಲೆಯು ಹೊರಕ್ಕೆ ಕಾಣುತ್ತಿರಲು, ಹತ್ತಿರದಲ್ಲಿ ನಿಂತಿದ್ದ ಮತ್ತೊಬ್ಬ ಮುಗ್ಗಾಂಗನೆಯು-ಅಕ್ಕ, ಇದೇನಾಶ್ಚರೈ ! ಮಲ್ಲಿಗೆಯಬಳ್ಳಿ ಯು ತಾವರೆಯ ಮೊಗ್ಗೆ ಯನ್ನು ಬಿಟ್ಟಿರುವುದಂ ನೋಡಿದೆಯಾ ? ಎಂದು ಹೇಳಿ, ಅದನ್ನು ಕೊಯ್ದು ತೋರಿಸುವುದಕ್ಕಾಗಿ ಅವಳೆದೆಗೆ ಕೈಚಾಚ ಲು, ಉಳಿದ ಸಖಿಯರೆಲ್ಲ ನೋಡಿ ನಕ್ಕರು. ಸ್ತ್ರೀಯರು ಹೂವುಗ ಳನ್ನು ಕೊಯ್ಯುವುದಕ್ಕಾಗಿ ತಮ್ಮ ಹಸ್ತವನ್ನು ಚಾಚಿದರೆ ಅಂಗೈಯ ಕೆಂಪಿನಿಂದ ಮುಸುಗಿದ ಬಿಳಿಯ ಹೂವುಗಳು ಕೆಂಪು ಹೂವಿನಂತೆ ಕಾಣು
ಪುಟ:ಚೆನ್ನ ಬಸವೇಶವಿಜಯಂ.djvu/೨೭೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.