- ಚನ್ನಬಸವೇಕವಿಜಯಂ (ಇಂಡಳಿ) [ಅಧ್ಯಾಯ ನಾನು ಬಾಳುವುದುಂಟೆ ? ನಿನ್ನ ರೂಪ ಸಂದರ್ ಶೃಂಗಾರವಿಲಾಸಾದಿಗ ಳು ಮತ್ತಾವ ಗಿಳಿಗಾದರೂ ಉಂಟೆ ? ನಿನ್ನ ಗುಣವನ್ನು ನಾನಿನ್ನಲ್ಲಿ ಕಾಣ ಲಿ ? ಇಷ್ಮೆಕೆ ತಡಮಾಡುವೆ ? ಬಾ, ನೋಡು, ಮುಖತೋರಿಸು, ಮಾತನಾಡಿಸು, ಚುಂಬಿಸು, ಆಲಿಂಗಿಸು, ಸುಖಿಸು, ಎಂದು ಮೊದಲಾಗಿ ಹೇಳಿಕೊಂಡು ವಿರಹದಿಂದ ಹಂಬಲಿಸುತ್ತಿದ್ದಿತು. ಅಪ್ಪರಲ್ಲಿ ಗಂಡುಗಿ೪ ಯು ದೂರದಿಂದ ಬರುತ್ತ, ತನ್ನ ಮನಃಕಾಂತೆಯು ವಿಯೋಗದುಃಖದಿಂ ದ ಸತ್ತಿರುವಳೊ ! ಬದುಕಿರುವಳೊ ! ಎಷ್ಟು ದುಃಖಿಸುವಳೊ ! ಎಂ ದೂ ನನ್ನ ಅಗಲುವಿಕೆಯನ್ನು ಅನುಭವಿಸದ ರಮಣಿಯು ಎಷ್ಟು ಸಂತಾಪ ಪಟ್ಟ: ಎಷ್ಟು ಹೆದರಿದಳೊ! ಆದರೆ ನಾನು ಶಿವನ ಸೇವೆಯಲ್ಲಿ ನಿರ ತನಾಗಿದ್ದು ದರಿಂದ ಅದರ ಫಲವು ನನಗೆ ಯಾವ ಅನಿಷ್ಟ್ಯವನ್ನೂ ಉಂಟು ಮಾಡಲಾರದು, ಎಂದು ಯೋಚಿಸಿಕೊಳ್ಳುತ್ತ ಧ್ರರದಿಂದ ಗೂಡಿನ ಬ೪ ಗೆ ಬಂದಿತು. ಈ ಗಿಳಿಯ ರಕ್ಕೆಗಳ ಕೇಸರಿಯ ಬಲದಿಂದ ಸಿಕವಾಗಿ ದ್ವು ವು, ಕತ್ತಿನಲ್ಲಿ ಗಂಧೋದಕದ ಲೇಪನವು ತೋರುತ್ತಿದ್ದಿತು. ಕೆ ಕ್ಕಿನಲ್ಲಿ ಕಸ್ತೂರೀಕರಮವು ಲಿಪ್ತವಾಗಿದ್ದಿತು, ಇವುಗಳ ಪರಿಮಳವು ಘಮ್ಮನೆ ಆ ಮರವನ್ನೆಲ್ಲ ತುಂಬಿತು. ಇದಾವುದೊ ಹೊಸಗಿ೪ ಬಂದಿತೆಂದು ಕೊವಿಸಿದ ಹೆಂಗಿಳಿಯು ಅದರ ದನಿಯನ್ನು ಕೇಳಿ ಗಂಡನೆಂದು ತಿಳಿದು, ಪ್ರಾಣಬಂದಂತೆ ಹರ್ಷಗೊಂಡಿದ್ದು, ಗುಟುಕನ್ನು ಪಡೆದು, ಕಾಮಾತುರ ದಿಂದ ಉಸುರಿನಲ್ಲಿ ಉಪ್ಪವು ಹೆಚ್ಚಲು, ಮೆಯ್ಕೆಳಕ್ಕೆ ಆತುರಿಸಿ, ಕ ಣ್ಣೀರನ್ನು ಸುರಿಸಿ, ಕಾತರಿಸುತ್ತಿರುವಲ್ಲಿ, ರಮಣನ ದೇಹದ ಗಂಧವನ್ನು ಕಂಡು, ಇದು ಅನ್ಯರಮಣಿಯ ಸಂಗದಿಂದ ಬಂದ ಸುವಾಸನೆಯೆಂದು ಯೋ ಚಿನ ಕೋಪಿಸಿಕೊಂಡು, ಮುಖವನ್ನು ಗಂಟಿಕ್ಕಿ, ಕಣ್ಣನ್ನು ಮುಚ್ಚಿ, ದೇ। ಹವನ್ನು ಹಿಂದೆಗೆದು, ಬಿರುಸಾಗಿ ಉಸುರನ್ನು ಬಿಡುತ್ತಿದ್ದಿತು. ವಿಯೆಯ ಈ ಸ್ಥಿತಿಯನ್ನು ನೋಡಿ ಗಂಡುಗಿಳಿಯು ತತ್ತರಸಿ ಹೋಯಿತು, “ರಮ ಜೀ !ನಾನು ರಾತ್ರಿ ಬರದೆ ನಿಂತುದಕ್ಕೆ ನೀನು ಇಷ್ಟೊಂದು ಕೋಪಿಸಿ ಕೊಳ್ಳಬಹುದೆ ? ನಮ್ಮ ನಮ್ಮ ಪ್ರೀತಿಯಲ್ಲಿ ಇದನ್ನೊಂದು ದೊಡ್ಡ ತಪ್ಪೆಂ ದು ನೀನು ಅರಿಯಬಹುದೆ? ನಿನ್ನ ಮನಸ್ಸಿಗೆ ಇದೇ ಅಪರಾಧವಾಗಿ ತೋರಿ ದಲ್ಲಿ ಇಂದಿಗೆ ದಯವಿಟ್ಟು ಕ್ಷಮಿಸು ' ಎಂದು ಹೇಳಿ, ಕಾಲಿಗೆ ಬಿದ್ದಿತು.
ಪುಟ:ಚೆನ್ನ ಬಸವೇಶವಿಜಯಂ.djvu/೨೭೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.